ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan) ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫಿಟ್ನೆಸ್ ಟ್ರೇನರ್ ನೂಪುರ್ ಶಿಖಾರೆ (Nupur Shikhare) ಜೊತೆ ಇರಾ ಖಾನ್ ಮದುವೆ ಆಗುತ್ತಿದ್ದಾರೆ. ಜನವರಿ 3ರಂದು ಅವರ ವಿವಾಹ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಅದರ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಇರಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಮಿರ್ ಖಾನ್ (Aamir Khan) ಅವರ ಮಾಜಿ ಪತ್ನಿ ಕಿರಣ್ ರಾವ್ ಕೂಡ ಮದುವೆ ಶಾಸ್ತ್ರಗಳಲ್ಲಿ ಭಾಗಿ ಆಗಿದ್ದಾರೆ.
ಆಮಿರ್ ಖಾನ್ ಮತ್ತು ರೀನಾ ದತ್ತ ಅವರು 1986ರಲ್ಲಿ ವಿವಾಹವಾದರು. ಈ ದಂಪತಿಯ ಮಗಳೇ ಇರಾ ಖಾನ್. 2002ರಲ್ಲಿ ಆಮಿರ್ ಖಾನ್ ಹಾಗೂ ರೀನಾ ದತ್ತ ವಿಚ್ಛೇದನ ಪಡೆದರು. ಹಾಗಿದ್ದರೂ ಕೂಡ ಮಕ್ಕಳ ಮತ್ತು ಮಾಜಿ ಪತ್ನಿಯ ಜೊತೆ ಆಮಿರ್ ಖಾನ್ ಅವರು ಒಡನಾಟ ಉಳಿಸಿಕೊಂಡಿದ್ದಾರೆ. ಮಗಳ ಮದುವೆಯನ್ನು ಅವರು ಅದ್ದೂರಿಯಾಗಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಜೊತೆ ನಟಿ ಜೆನಿಲಿಯಾ ಡಿಸೋಜಾ ರೊಮ್ಯಾನ್ಸ್
ನಟ ಆಮಿರ್ ಖಾನ್ಗೆ ಫಿಟ್ನೆಸ್ ಟ್ರೇನಿಂಗ್ ನೀಡಲು ಬಂದ ನೂಪುರ್ ಶಿಖಾರೆ ಜೊತೆಗೆ ಇರಾ ಖಾನ್ ಅವರಿಗೆ ಲವ್ ಆಯಿತು. ಒಂದಷ್ಟು ದಿನ ಡೇಟಿಂಗ್ ನಡೆಸಿದ ಈ ಜೋಡಿ ಈಗ ಹಸೆಮಣೆ ಏರುತ್ತಿದೆ. ಮದುವೆ ಶಾಸ್ತ್ರಗಳಲ್ಲಿ ಕುಟುಂದವರು ಭಾಗಿ ಆಗಿದ್ದಾರೆ. ಜನವರಿ 3ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಗಳ ಮದುವೆಯ ಸಲುವಾಗಿ ಆಮಿರ್ ಖಾನ್ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಚೆನ್ನೈನಲ್ಲಿ ಕಮಲ್ ಹಾಸನ್ ಬರ್ತ್ಡೇ ಪಾರ್ಟಿಗೆ ಹಾಜರಿ ಹಾಕಿದ ಆಮಿರ್ ಖಾನ್, ಸೂರ್ಯ; ಫೋಟೋ ವೈರಲ್
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಆದರೆ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಬೇರೆ ಸ್ಟಾರ್ ಕಿಡ್ಗಳ ರೀತಿಯಲ್ಲಿ ಅವರು ನಟಿಯಾಗುವ ಆಸಕ್ತಿ ಹೊಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.