ಬರೀ ರಿಮೇಕ್ ಮಾಡ್ತೀರಿ ಎಂಬ ಟೀಕೆಗೆ ಖಡಕ್ ಉತ್ತರ ನೀಡಿದ ಆಮಿರ್ ಖಾನ್

ಆಮಿರ್ ಖಾನ್ ಅಭಿನಯನದ ‘ಲಾಲ್ ಸಿಂಗ್ ಚಡ್ಡಾ’ ಕೂಡ ರಿಮೇಕ್ ಸಿನಿಮಾ ಆಗಿತ್ತು. ಈಗ ಬರುತ್ತಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಸಹ ರಿಮೇಕ್. ಆದ್ದರಿಂದ ಕೆಲವರು ಆಮಿರ್ ಖಾನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಜನರ ಟೀಕೆಗೆ ಆಮಿರ್ ಖಾನ್ ಅವರು ತಿರುಗೇಟು ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಬರೀ ರಿಮೇಕ್ ಮಾಡ್ತೀರಿ ಎಂಬ ಟೀಕೆಗೆ ಖಡಕ್ ಉತ್ತರ ನೀಡಿದ ಆಮಿರ್ ಖಾನ್
Aamir Khan

Updated on: Jun 04, 2025 | 10:46 PM

ನಟ ಆಮಿರ್ ಖಾನ್ (Aamir Khan) ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಜೂನ್ 20ಕ್ಕೆ ಬಿಡುಗಡೆ ಆಗಲಿದೆ. ಟ್ರೇಲರ್ ಬಿಡುಗಡೆ ಆದಾಗ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಬಗ್ಗೆ ಟೀಕೆ ವ್ಯಕ್ತವಾಯಿತು. ಯಾಕೆಂದರೆ, ಇದು ‘ಚಾಂಪಿಯನ್’ ಸಿನಿಮಾದ ಕಾಪಿ ಎಂದು ಜನರು ಪತ್ತೆ ಹಚ್ಚಿದರು. ಇದು ಅಧಿಕೃತ ರಿಮೇಕ್ (Remake) ಎಂದು ‘ಸಿತಾರೆ ಜಮೀನ್ ಪರ್’ ಸಿನಿಮಾ ಒಪ್ಪಿಕೊಂಡಿತು. ಒಟ್ಟಾರೆಯಾಗಿ ಕೇಳಿಬಂದ ಟೀಕೆ ಬಗ್ಗೆ ಆಮಿರ್ ಖಾನ್ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಖಡಕ್ ಉತ್ತರ ನೀಡಿದ್ದಾರೆ.

ಈ ಮೊದಲು ಆಮಿರ್ ಖಾನ್ ಅವರು ನಟಿಸಿದ್ದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಕೂಡ ಹಾಲಿವುಡ್​ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿತ್ತು. ಆಗಲೂ ಕೂಡ ಜನರು ಟೀಕೆ ಮಾಡಿದ್ದರು. ಅದನ್ನು ಆಮಿರ್ ಖಾನ್ ಅವರು ತಮ್ಮದೇ ರೀತಿಯಲ್ಲಿ ಸ್ವೀಕರಿಸಿದರು. ಹಾಗಂತ ಅವರು ರಿಮೇಕ್ ಮಾಡೋದು ನಿಲ್ಲಿಸಲಿಲ್ಲ. ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾವನ್ನು ‘ಸಿತಾರೆ ಜಮೀನ್ ಪರ್’ ಎಂದು ಹಿಂದಿಗೆ ಅವರು ರಿಮೇಕ್ ಮಾಡಿದ್ದಾರೆ.

‘ನಾನು ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಾಡಿದಾಗ ಮತ್ತೆ ರಿಮೇಕ್ ಮಾಡಿದ್ದೀರಿ ಅಂತ ಅನೇಕರು ನನಗೆ ಹೇಳಿದರು. ರಿಮೇಕ್ ಎಂಬ ಕಾರಣಕ್ಕೆ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ನಾನು ಬೇರೆ ರೀತಿಯ ವ್ಯಕ್ತಿ. ನನಗೆ ಪ್ರಾಕ್ಟಿಕಲ್ ವಿಚಾರಗಳು ಅರ್ಥ ಆಗಲ್ಲ. ನನಗೆ ರಿಮೇಕ್ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ರಿಮೇಕ್ ಮಾಡಿದರೆ ಸೃಜನಶೀಲತೆ ಕಡಿಮೆ ಆಗುತ್ತದೆ ಅಂತ ನನಗೆ ಅನಿಸುವುದಿಲ್ಲ. ನನಗೆ ಅದು ಕೂಡ ಕೆಲಸ. ಬೇರೆ ಯಾರೋ ಈ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಅದಕ್ಕೆ ನಾನು ನನ್ನ ದೃಷ್ಟಿಕೋನ ನೀಡುತ್ತಿದ್ದೇನೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಯೂಟ್ಯೂಬ್​ನಲ್ಲಿ ಉಚಿತವಾಗಿ ಸಿನಿಮಾ ತೋರಿಸ್ತೀನಿ: ಆಮಿರ್ ಖಾನ್ ಘೋಷಣೆ

‘ಇಂದಿಗೂ ಕೂಡ ಜನರು ಶೇಕ್ಸ್​ಪಿಯರ್ ನಾಟಕಗಳನ್ನು ಮಾಡುತ್ತಿದ್ದಾರೆ. ಇಂದಿಗೂ ಆತನೇ ನಂಬರ್​ ಒನ್ ನಾಟಕಕಾರ. ಪ್ರತಿ ಭಾಷೆಯಲ್ಲಿ ಆತನ ನಾಟಕದ ಅಡಾಪ್ಟೇಷನ್ ಆಗುತ್ತದೆ. ಅದನ್ನು ನಾವು ಹೊಗಳುತ್ತೇವೆ. ಅದು ಯಾಕೆ? ಅದು ಕೂಡ ರಿಮೇಕ್ ತಾನೆ? ನಿಲ್ಲಿಸಿ ಅದನ್ನು. ನೀವೇ ನಿಮ್ಮ ಸ್ವಂತ ನಾಟಕ ರಚಿಸಿಕೊಳ್ಳಿ’ ಎಂದು ಆಮಿರ್ ಖಾನ್ ಅವರು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.