23 ವರ್ಷ ಕಿರಿಯ ನಟಿ ಜೊತೆ ರೊಮ್ಯಾನ್ಸ್; ಆಮಿರ್ ಖಾನ್ ಸಮರ್ಥನೆ ಏನು?

ನಟ ಆಮಿರ್ ಖಾನ್ ಅವರಿಗೆ ಈಗ 60 ವರ್ಷ ವಯಸ್ಸು. ಜೆನಿಲಿಯಾ ದೇಶಮುಖ್ ಅವರಿಗೆ 37 ವರ್ಷ ವಯಸ್ಸು. ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿ ಅಭಿನಯಿಸಿದ್ದಾರೆ. ವಯಸ್ಸಿನ ಅಂತರದ ಬಗ್ಗೆ ಆಮಿರ್ ಖಾನ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ..

23 ವರ್ಷ ಕಿರಿಯ ನಟಿ ಜೊತೆ ರೊಮ್ಯಾನ್ಸ್; ಆಮಿರ್ ಖಾನ್ ಸಮರ್ಥನೆ ಏನು?
Genelia D'souza, Aamir Khan

Updated on: Jun 09, 2025 | 5:44 PM

ಯಾವ ರೀತಿಯ ಪಾತ್ರ ಕೊಟ್ಟರೂ ನಟ ಆಮಿರ್ ಖಾನ್ (Aamir Khan) ಅವರು ಜೀವ ತುಂಬುತ್ತಾರೆ. ಯಾವುದೇ ವಯಸ್ಸಿನ ಪಾತ್ರವಿದ್ದರೂ ಕೂಡ ಅದಕ್ಕೆ ತಕ್ಕಂತೆ ಅವರು ಬಾಡಿ ಟ್ರಾನ್ಸ್​ಫಾರ್ಮೇಷನ್ ಮಾಡಿಕೊಳ್ಳುತ್ತಾರೆ. ಈಗ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದಲ್ಲಿ ಅಂದಾಜು 40 ವರ್ಷ ವಯಸ್ಸಿನ ವ್ಯಕ್ತಿಯ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ನಿಜ ಜೀವನದಲ್ಲಿ ಆಮಿರ್ ಖಾನ್ ಅವರಿಗೆ 60 ವರ್ಷ ವಯಸ್ಸು! ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಜೆನಿಲಿಯಾ ದೇಶಮುಖ್ (Genelia D’Souza) ನಟಿಸಿದ್ದಾರೆ. ಜೆನಿಲಿಯಾ ಅವರಿಗೆ ಈಗ 37 ವರ್ಷ ವಯಸ್ಸು.

ಆಮಿರ್ ಖಾನ್ ಮತ್ತು ಜೆನಿಲಿಯಾ ನಡುವೆ ಬರೋಬ್ಬರಿ 23 ವರ್ಷಗಳ ವಯಸ್ಸಿನ ಅಂತರ ಇದೆ. ಹಾಗಿದ್ದರೂ ಕೂಡ ಅವರಿಬ್ಬರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಅಚ್ಚರಿ ಏನೆಂದರೆ, ಒಂದು ಕಾಲದಲ್ಲಿ ಜೆನಿಲಿಯಾ ಅವರು ಆಮಿರ್ ಖಾನ್ ಅಳಿಯ ಇಮ್ರಾನ್​ ಖಾನ್​ಗೆ ಜೋಡಿ ಆಗಿದ್ದರು! ಈ ಎಲ್ಲ ವಿಷಯಗಳ ಬಗ್ಗೆ ಆಮಿರ್ ಖಾನ್ ಮಾತನಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ಅವರು ನಟ-ನಟಿಯರ ವಯಸ್ಸಿನ ಅಂತರದ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ. ‘ತುಂಬ ಹಿಂದೆ ಇಮ್ರಾನ್ ಖಾನ್​ಗೆ ಜೆನಿಲಿಯಾ ಜೋಡಿ ಆಗಿದ್ದರು. ಆದರೆ ಈಗ ಇಮ್ರಾನ್ ನನ್ನ ವಯಸ್ಸಿನವನ ರೀತಿ ಕಾಣುತ್ತಿದ್ದಾನೆ. ಜೆನಿಲಿಯಾ ಮತ್ತು ನನ್ನ ವಯಸ್ಸಿನ ಅಂತರದ ವಿಷಯ ನನ್ನ ಮನಸ್ಸಿಗೂ ಬಂತು. ಆದರೆ ನಾವಿಬ್ಬರೂ ಈ ಸಿನಿಮಾದಲ್ಲಿ 40ರ ಆಸುಪಾಸಿನ ವಯಸ್ಸಿನ ವ್ಯಕ್ತಿಗಳ ಪಾತ್ರ ಮಾಡಿದ್ದೇವೆ. ಜೆನಿಲಿಯಾ ವಯಸ್ಸು ಅದಕ್ಕೆ ಸರಿಯಾಗಿದೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

‘ನನಗೆ ಈಗ 60 ವರ್ಷ ವಯಸ್ಸು. ಈಗ ವಿಎಫ್​ಎಕ್ಸ್ ತಂತ್ರಜ್ಞಾನ ಇದೆ. ಆದರೆ ಮೊದಲೆಲ್ಲ ನಾನು 18 ವರ್ಷದ ಯುವಕನ ಪಾತ್ರ ಮಾಡಿದರೆ ಪ್ರಾಸ್ತೆಟಿಕ್ಸ್ ಮೇಕಪ್ ಮಾಡಬೇಕಿತ್ತು. 1989ರಲ್ಲಿ ಅನಿಲ್ ಕಪೂರ್ ಅವರು 80 ವರ್ಷದ ವ್ಯಕ್ತಿಯ ಪಾತ್ರ ಮಾಡಿದ್ದರು. ಆಗ ಅವರು ಯುವಕನಾಗಿದ್ದರು. ಈಗ ವಿಎಫ್​ಎಕ್ಸ್​ನಿಂದ ನಟರಿಗೆ ವಯಸ್ಸಿನ ಮಿತಿ ಇಲ್ಲ’ ಎಂದಿದ್ದಾರೆ ಆಮಿರ್ ಖಾನ್.

ಇದನ್ನೂ ಓದಿ: ಕಥೆ ಕದ್ದ ಆಮಿರ್ ಖಾನ್? ‘ಸಿತಾರೆ ಜಮೀನ್ ಪರ್’ ಸಿನಿಮಾ ಮೇಲೆ ಬಂತು ಆರೋಪ

ಜೂನ್ 20ರಂದು ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಆಗಲಿದೆ. ಇದು ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್. ಅನೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಆಮಿರ್ ಖಾನ್ ಅವರು ಕಮ್​ಬ್ಯಾಕ್ ಸಿನಿಮಾ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.