ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ನ ಟಾಪ್ ಹಿರೋಗಳಲ್ಲಿ ಒಬ್ಬರಾಗಿದ್ದರು. ಆದರೆ, ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇಲ್ಲ. ಇಂದು (ಫೆಬ್ರವರಿ 5) ಅಭಿಷೇಕ್ ಬಚ್ಚನ್ಗೆ ಬರ್ತ್ಡೇ ಸಂಭ್ರಮ, ಅವರಿಗೆ ಇರೋ ಕೆಲವೇ ಕೆಲವು ಅಭಿಮಾನಿಗಳು ಶುಭಾಶಯ ಕೊರುತ್ತಿದ್ದಾರೆ. ಅಭಿಷೇಕ್ಗಿಂತ ಐಶ್ವರ್ಯಾ ಹೆಚ್ಚು ಶ್ರೀಮಂತರು. ಆದರೆ, ಹೂಡಿಕೆಯಲ್ಲಿ ಅಭಿಷೇಕ್ ಬಚ್ಚನ್ ಮುಂದಿದ್ದಾರೆ. ನಟನಾಗಿ ಯಶಸ್ಸು ಕಾಣದಿದ್ದರೂ ಉದ್ಯಮಿ ಆಗಿ ಯಶಸ್ಸು ಕಂಡಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಆಸ್ತಿ ಬರೋಬ್ಬರಿ 776 ಕೋಟಿ ರೂಪಾಯಿ ಇದೆ. ಆದರೆ, ಅಭಿಷೇಕ್ ಬಚ್ಚನ್ ಆಸ್ತಿ ಕೇವಲ 280 ಕೋಟಿ ರೂಪಾಯಿ. ಅಭಿಷೇಕ್ಗೆ ಹೋಲಿಕೆ ಮಾಡಿದರೆ ಐಶ್ವರ್ಯಾ ತುಂಬಾನೇ ಶ್ರೀಮಂತೆ. ಆದರೆ, ಈ ವಿಚಾರದಲ್ಲಿ ಇವರ ಮಧ್ಯೆ ಹೆಚ್ಚು ವೈಮನಸ್ಸು ಬಂದಿಲ್ಲ. ಅಭಿಷೇಕ್ ತಂದೆ ಅಮಿತಾಭ್ ದೊಡ್ಡ ಶ್ರೀಮಂತ ನಟ. ಅವರ ಬಳಿಕ ಸಾವಿರಾರು ಕೋಟಿ ರೂಪಾಯಿ ಆಸ್ತಿ ಅಭಿಷೇಕ್ ಪಾಲಾಗಲಿದೆ.
ಅಭಿಷೇಕ್ ಅವರು ಮುಂಬೈನ ಬಾಂದ್ರಾ ಭಾಗದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದುಬೈನಲ್ಲಿ ಅಭಿಷೇಕ್ ವಿಲ್ಲಾ ಖರೀದಿ ಮಾಡಿದ್ದಾರೆ. 10 ವರ್ಷಗಳ ಹಿಂದೆ ಅಂದರೆ 2015ರಲ್ಲಿ ಅವರು ಈ ಹೂಡಿಕೆ ಮಾಡಿದ್ದರು. ಗಾಲ್ಫ್ ಎಸ್ಟೇಟ್ಸ್ ಬಳಿ ಈ ವಿಲ್ಲಾ ಇದೆ. ದುಬೈಗೆ ತೆರಳಿದಾಗ ಅಭಿಷೇಕ್ ಇಲ್ಲಿ ಉಳಿದುಕೊಳ್ಳುತ್ತಾರೆ.
ಇದರ ಬೆಲೆ 16 ಕೋಟಿ ರೂಪಾಯಿ. ಈ ಭಾಗದಲ್ಲಿ ಒಟ್ಟೂ 97 ರೆಸಾರ್ಟ್ ಸ್ಟೈಲ್ ವಿಲ್ಲಾಗಳು ಇವೆ. ಇದರ ಬೆಲೆ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಭಾರತದಲ್ಲಿಯೂ ಅಭಿಷೇಕ್ ಹೂಡಿಕೆ ಮಾಡಿದ್ದಾರೆ. ಕಳೆದ ಒಂದು ವರ್ಷಗಳಲ್ಲಿ ಅಭಿಷೇಕ್ ಬಚ್ಚನ್ ಅವರು 100 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ‘ಬಾಂದ್ರಾ-ಕುರ್ಲಾ’ ಕಾಂಪ್ಲೆಕ್ಸ್, 5 ಬಿಎಚ್ಕೆ ಅಪಾರ್ಟ್ಮೆಂಟ್ ಸೇರಿ ಹಲವು ಕಡೆಗಳಲ್ಲಿ ಅಭಿಷೇಕ್ ಬಚ್ಚನ್ ಹೂಡಿಕೆ ಮಾಡಿದ್ದಾರೆ.
ಅಭಿಷೇಕ್ ಬಚ್ಚನ್ ಅವರಿಗೆ ಕ್ರೀಡೆ ಬಗ್ಗೆ ವಿಶೇಷ ಆಸಕ್ತಿ ಇದೆ. ಈ ಕಾರಣಕ್ಕೆ ಕಬ್ಬಡಿ, ಕ್ರಿಕೆಟ್ ಮೊದಲಾದ ಆಟಗಳಲ್ಲಿ ತಂಡ ಹೊಂದಿದ್ದಾರೆ. ಜೈಪುರ ಪಿಂಕ್ ಪಾರ್ಟ್ನರ್ಸ್ (ಪ್ರೋ ಕಬ್ಬಡಿ), ಚೆನ್ನೈಯಿನ್ ಎಫ್ಸಿ (ಫುಟ್ಬಾಲ್) ಹೂಡಿಕೆ ಮಾಡಿದ್ದಾರೆ. ಅವರು ಗಲ್ಲಿ ಕ್ರಿಕೆಟ್ನಲ್ಲೂ ತಂಡ ಹೊಂದಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ ರೈ ಮೊಬೈಲ್ ವಾಲ್ಪೇಪರ್ನಲ್ಲಿ ಅಮಿತಾಭ್ ಬಚ್ಚನ್? ವಿಡಿಯೋ ವೈರಲ್
ಅಮಿತಾಭ್ ಬಚ್ಚನ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಇವರು ಪ್ರಮುಖ ವ್ಯಕ್ತಿ ಎನಿಸಿಕೊಂಡಿದ್ದಾರೆ. ತಂದೆಯ ಜೊತೆ ಸೇರಿ ಅನೇಕ ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಸಿನಿಮಾ ಕೈ ಹಿಡಿಯದೇ ಇದ್ದರೂ ಉದ್ಯಮದಲ್ಲಿ ಅವರು ಆಸಕ್ತಿ ಬೆಳೆಸಿಕೊಂಡು, ಯಶಸ್ಸು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.