ಪ್ರೇಮಿಗಳ ದಿನಕ್ಕೆ ರೀ-ರಿಲೀಸ್ ಆಗುತ್ತಿವೆ ಸೂಪರ್ ಹಿಟ್ ಲವ್ಸ್ಟೋರಿ ಸಿನಿಮಾಗಳು
ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಗೆ ಅನೇಕ ಕ್ಲಾಸಿಕ್ ಬಾಲಿವುಡ್ ರೊಮ್ಯಾಂಟಿಕ್ ಚಿತ್ರಗಳು ಮರು ಬಿಡುಗಡೆಯಾಗುತ್ತಿವೆ. 'ಸಿಲ್ಸಿಲಾ', 'ಚಾಂದಿನಿ', 'ಜಬ್ ವಿ ಮೆಟ್', ಮತ್ತು 'ಬಚ್ನಾ ಏ ಹಸಿನೋ' ಚಿತ್ರಗಳು ಈ ಪಟ್ಟಿಯಲ್ಲಿ ಸೇರಿವೆ. ಪ್ರೇಮಿಗಳ ದಿನವನ್ನು ವಿಶೇಷವಾಗಿಸಲು ಈ ಚಿತ್ರಗಳು ಸೂಕ್ತ ಆಯ್ಕೆಯಾಗಿದೆ.

‘ಪ್ರೇಮಿಗಳ ದಿನ’ ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಫೆಬ್ರವರಿ 14ರಂದು ಎಲ್ಲ ಕಡೆಗಳಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮಿಷ್ಟದ ಹುಡುಗಿ/ಹುಡಗನಿಗೆ ಪ್ರಪೋಸ್ ಮಾಡುವ ಕೆಲಸ ಆಗಲಿದೆ. ವಿಶೇಷ ಎಂದರೆ ಪ್ರೇಮ ಕಥೆಯನ್ನು ಹೊಂದಿರೋ ಸಿನಿಮಾಗಳು ಕೂಡ ಈ ಸಮಯದಲ್ಲಿ ರೀ ರಿಲೀಸ್ ಕಾಣುತ್ತಿವೆ. ಈ ಮೂಲಕ ಈ ವರ್ಷದ ಪ್ರೇಮಿಗಳ ದಿನಾಚರಣೆ ಸಾಕಷ್ಟು ವಿಶೇಷವಾಗಿರಲಿದೆ.
‘ಸಿಲ್ಸಿಲಾ’
ಅಮಿತಾಭ್ ಬಚ್ಚನ್ ನಟನೆಯ ‘ಸಿಲ್ಸಿಲಾ’ ಸಿನಿಮಾ 1981ರಲ್ಲಿ ರಿಲೀಸ್ ಆಗಿತ್ತು. ಇದು ತ್ರಿಕೋನ ಪ್ರೇಮಕಥೆಯನ್ನು ಹೊಂದಿತ್ತು. ಅಮಿತಾಭ್ ಜೊತೆ ಜಯಾ ಬಚ್ಚನ್, ರೇಖಾ, ಶಶಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಫೆಬ್ರವರಿ 7ರಂದು ಮರಳಿ ತೆರೆಗೆ ಬರುತ್ತಿದೆ.
ಚಾಂದಿನಿ
ಶ್ರೀದೇವಿ ನಟನೆಯ ‘ಚಾಂದಿನಿ’ ಸಿನಿಮಾ ವ್ಯಾಲೆಂಟೈನ್ಸ್ ಡೇ ದಿನ ತೆರೆಗೆ ಬರುತ್ತಿದೆ. ಫೆಬ್ರವರಿ 14ರಂದು ಈ ಚಿತ್ರ ಬಿಡುಗಡೆ ಕಾಣುತ್ತಿದೆ. ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ರಿಷಿ ಕಪೂರ್, ವಿನೋದ್ ಖನ್ನಾ, ಶ್ರೀದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ರೇಮ ಕಥೆಯನ್ನು ಹೊಂದಿತ್ತು.
ಜಬ್ ವಿ ಮೆಟ್
ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ನಟನೆಯ ‘ಜಬ್ ವಿ ಮೆಟ್’ ಸಿನಿಮಾ ಒಂದು ಕ್ಯೂಟ್ ಲವ್ಸ್ಟೋರಿಗಳಲ್ಲಿ ಒಂದು. ಈ ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಈ ಸಿನಿಮಾ ಫೆಬ್ರವರಿ 14ರಂದು ರೀ-ರಿಲೀಸ್ ಆಗುತ್ತಿದೆ. ಈ ಚಿತ್ರ ಪ್ರೇಮಿಗಳ ದಿನ ರೀ-ರಿಲೀಸ್ ಆಗುತ್ತಿರೋದು ಇದು ಸತತ ಮೂರನೇ ಬಾರಿಗೆ ಅನ್ನೋದು ವಿಶೇಷ.
ಬಚ್ನಾ ಏ ಹಸಿನೋ
ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಬಿಪಾಶಾ ಬಸ್ಸು ಮೊದಲಾದವರು ನಟಿಸಿರೋ ‘ಬಚ್ನಾ ಏ ಹಸಿನೋ’ ಸಿನಿಮಾ ಕೂಡ ಫೆಬ್ರವರಿ 14ರಂದು ಮತ್ತೆ ರಿಲೀಸ್ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಶಾರುಖ್ ಖಾನ್ ಮನೆಯ ಪಕ್ಕದಲ್ಲೇ ಮನೆ ಖರೀದಿಸಿದ ದೀಪಿಕಾ ಪಡುಕೋಣೆ
ಇನ್ನೂ ಇವೆ..
ದೀಪಿಕಾ ಪಡುಕೋಣೆ ನಟನೆಯ, ‘ಪದ್ಮಾವತ್’, ‘ದಿಲ್ ತೋ ಪಾಗಲ್ ಹೇ’, ‘ಬರೇಲಿ ಕಿ ಬರ್ಫಿ’, ರೀತಿಯ ಚಿತ್ರಗಳು ತೆರೆಗೆ ಬರೋಕೆ ರೆಡಿ ಆಗಿವೆ. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಈ ಮೂಲಕ ಪ್ರೇಮಿಗಳ ದಿನವನ್ನು ಮತ್ತಷ್ಟು ವಿಶೇಷವಾಗಿ ಮಾಡಲು ಈ ಚಿತ್ರಗಳು ರೆಡಿ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Wed, 5 February 25