ಬಾಲ್ಯದ ಫೋಟೋ ಹಂಚಿಕೊಂಡು ಅಭಿಷೇಕ್ಗೆ ಬರ್ತ್ಡೇ ವಿಶ್ ಮಾಡಿದ ಐಶ್ವರ್ಯಾ ರೈ
Abhishek Bachchan Birthday: ಐಶ್ವರ್ಯಾ ರೈ ಅವರು ಪತಿ ಅಭಿಷೇಕ್ ಬಚ್ಚನ್ ಅವರ ಜನ್ಮದಿನಕ್ಕೆ ಪ್ರೀತಿಯಿಂದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಬಾಲ್ಯದ ಫೋಟೋವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಮಧ್ಯೆ ಮನಸ್ತಾಪವಿರುವ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ಆದರೆ, ಈ ಪೋಸ್ಟ್ ಮೂಲಕ ಅವರ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿಷೇಕ್ ಬಚ್ಚನ್ ಜನ್ಮದಿನದ ಪ್ರಯುಕ್ತ ಐಶ್ವರ್ಯಾ ರೈ ಅವರು ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ಮೂಲಕ ತಮ್ಮ ಮಧ್ಯೆ ಎಲ್ಲವೂ ಸರಿ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋನ ಐಶ್ವರ್ಯಾ ಹಂಚಿಕೊಂಡಿದ್ದು, ಪ್ರೀತಿಯಿಂದ ಸಾಲುಗಳನ್ನು ಬರೆದಿದ್ದಾರೆ. ಐಶ್ವರ್ಯಾ ರೈ ಅವರು ಪತಿಗೆ ವಿಶ್ ಮಾಡಿದ್ದು ನೋಡಿ ಫ್ಯಾನ್ಸ್ ವಲಯದಲ್ಲಿ ಖುಷಿ ಹೆಚ್ಚಿದೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಬರುತ್ತಿತ್ತು. ಅಭಿಷೇಕ್ ಬಚ್ಚನ್ ಅವರಿಂದ ದೂರ ಆಗಿ ಐಶ್ವರ್ಯಾ ರೈ ವಾಸಿಸುತ್ತಿದ್ದಾರೆ ಮತ್ತು ಶೀಘ್ರವೇ ಇವರು ಡಿವೋರ್ಸ್ ಪಡೆಯುತ್ತಾರೆ ಎನ್ನುವ ವಿಚಾರವೂ ಹರಿದಾಡಿತ್ತು. ಆದರೆ, ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಎಲ್ಲದಕ್ಕೂ ತೆರೆ ಎಳೆದರು. ಈಗ ಅಭಿಷೇಕ್ಗೆ ಪ್ರೀತಿಯಿಂದ ವಿಶ್ ಮಾಡಿ ಸುದ್ದಿ ಆಗಿದ್ದಾರೆ.
ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋ ಇದಾಗಿದೆ. ಇದು ಬ್ಲಾಕ್ ಆ್ಯಂಡ್ ವೈಟ್ ಚಿತ್ರ. ಈ ಫೋಟೋಗೆ, ‘ನಿಮಗೆ ಜನ್ಮದಿನದ ಶುಭಾಶಯ. ಸಂತೋಷ, ಉತ್ತಮ ಆರೋಗ್ಯ, ಪ್ರೀತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
View this post on Instagram
ಕೆಲವರು ಐಶ್ವರ್ಯಾ ಅವರು ಅಭಿಷೇಕ್ಗೆ ಬರ್ತ್ಡೇ ವಿಶ್ ಮಾಡಿದರು ಎಂದು ಸಂಭ್ರಮಿಸಿದರೆ ಇನ್ನೂ ಕೆಲವರು, ಐಶ್ವರ್ಯಾ ಅವರು ಅಭಿಷೇಕ್ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ, ಅವರನ್ನು ಟ್ಯಾಗ್ ಕೂಡ ಮಾಡಿಲ್ಲ ಎಂದು ಕೊಂಕು ತೆಗೆದಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: ಅಭಿಷೇಕ್ಗಿಂತ ಐಶ್ವರ್ಯಾ ರೈ ಇಷ್ಟೆಲ್ಲಾ ವರ್ಷ ದೊಡ್ಡವರಾ? ಈ ವಿಚಾರ ಗೊತ್ತಾ?
ಐಶ್ವರ್ಯಾ ರೈ ಅವರ ಈ ಫೋಟೋಗೆ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್ ಬಂದಿದೆ. ಸಾವಿರಾರು ಮಂದಿ ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಇತ್ತೀಚೆಗೆ ಹಲವು ಬಾರಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಮೊದಲು ಇದ್ದ ವೈಮನಸ್ಸು ಈಗ ದೂರ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:33 pm, Wed, 5 February 25