ಬಾಲಿವುಡ್ ಹೀರೋಗಳ ಪೈಕಿ ಅತಿ ದುಬಾರಿ ಬಂಗಲೆ ಹೊಂದಿರುವ ನಟ ಯಾರು?
ಸೆಲೆಬ್ರಿಟಿಗಳ ಮನೆ ಎಂದರೆ ಸಿಕ್ಕಾಪಟ್ಟೆ ಭವ್ಯವಾಗಿರುತ್ತದೆ. ಬಾಲಿವುಡ್ ಹೀರೋಗಳ ಬಂಗಲೆಗಳು ಕಣ್ಣು ಕುಕ್ಕುತ್ತವೆ. ಹಾಗಾದರೆ ಹಿಂದಿ ಸಿನಿಮಾ ನಟರ ಪೈಕಿ ಅತಿ ದುಬಾರಿಯಾದ ಮನೆ ಇರುವುದು ಯಾರ ಬಳಿ ಎಂಬ ಕೌತುಕದ ಪ್ರಶ್ನೆ ಎಲ್ಲರಿಗೂ ಇದೆ. ಯಾರು ಆ ನಟ? ಅವರ ಮನೆಯ ಬೆಲೆ ಎಷ್ಟು? ಇಲ್ಲಿದೆ ಉತ್ತರ..

ಬಾಲಿವುಡ್ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಮುಂತಾದವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರೆಲ್ಲರ ಬಂಗಲೆಗಳು ವೈಭವದಿಂದ ಕೂಡಿವೆ. ಆದರೆ ಅತಿ ದುಬಾರಿ ಮನೆ ಹೊಂದಿರುವುದು ಈ ನಟರಲ್ಲ! ಬಾಲಿವುಡ್ನಲ್ಲಿ ತುಂಬ ದುಬಾರಿಯಾದ ಮನೆ ಇರುವುದು ಸೈಫ್ ಅಲಿ ಖಾನ್ ಅವರ ಹೆಸರಿನಲ್ಲಿ. ಹೌದು, ವಂಶ ಪಾರಂಪರ್ಯವಾಗಿ ಬಂದ ಪ್ಯಾಲೇಸ್ ಸೈಫ್ ಅಲಿ ಖಾನ್ ಅವರ ಹೆಸರಿನಲ್ಲಿ ಇದೆ. ಇದರ ಬೆಲೆ ಬರೋಬ್ಬರಿ 800 ಕೋಟಿ ರೂಪಾಯಿ ಎನ್ನಲಾಗಿದೆ.
ಸೈಫ್ ಅಲಿ ಖಾನ್ ಅವರು ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಿನಿಮಾಗಳ ಮೂಲಕ ಅವರು ಜನರಿಗೆ ಮನರಂಜನೆ ನೀಡಿದ್ದಾರೆ. ಇತ್ತೀಚೆಗೆ ಮುಂಬೈನ ಅವರ ಅಪಾರ್ಟ್ಮೆಂಟ್ನಲ್ಲಿ ದರೋಡೆಕೋರರು ದಾಳಿ ಮಾಡಿದ್ದರು. ಆ ಅಪಾರ್ಟ್ಮೆಂಟ್ ಹೊರತುಪಡಿಸಿ ಇನ್ನೂ ಅನೇಕ ಕಡೆಗಳಲ್ಲಿ ಸೈಫ್ ಅಲಿ ಖಾನ್ ಅವರ ಆಸ್ತಿ ಇದೆ. ಅವುಗಳಲ್ಲಿ ಪಟೌಡಿ ಪ್ಯಾಲೇಸ್ ಕೂಡ ಒಂದು.
ಸೈಫ್ ಅಲಿ ಖಾನ್ ಅವರದ್ದು ರಾಜಮನೆತನ. ಅವರು ಪಟೌಡಿ ಮನೆತನಕ್ಕೆ ಸೇರಿದವರು. ಈಗ ಈ ಮನೆತನಕ್ಕೆ ಸೈಫ್ ಅಲಿ ಖಾನ್ ಅವರೇ ಹಿರಿಯ ವ್ಯಕ್ತಿ. ಈ ವಂಶಕ್ಕೆ ಸೇರಿದ ಪಟೌಡಿ ಪ್ಯಾಲೇಸ್ ಹರಿಯಾಣದಲ್ಲಿದೆ. ಅದು ಸೈಫ್ ಅಲಿ ಖಾನ್ ಅವರ ಒಡೆತನದಲ್ಲಿದೆ. 800 ಕೋಟಿ ರೂಪಾಯಿ ಬೆಲೆಬಾಳುವ ಈ ಪ್ಯಾಲೇಸ್ಗೆ ಹೋಲಿಸಿದರೆ ಶಾರುಖ್ ಖಾನ್ ಅವರು 200 ಕೋಟಿ ರೂಪಾಯಿ ಬೆಲೆಬಾಳುವ ‘ಮನ್ನತ್’ ಬಂಗಲೆ ಕೂಡ ಚಿಕ್ಕದು ಎನಿಸುತ್ತದೆ!
ಇದನ್ನೂ ಓದಿ: ಹಲ್ಲೆ ಬಳಿಕ ಮೊದಲ ಬಾರಿಗೆ ಈವೆಂಟ್ಗೆ ಬಂದ ಸೈಫ್ ಅಲಿ ಖಾನ್; ಕಾಣಿಸ್ತಿದೆ ಗಾಯದ ಗುರುತು
ಪಟೌಡಿ ಪ್ಯಾಲೇಸ್ ನಿರ್ಮಾಣ ಆಗಿದ್ದು 1930 ಸುಮಾರಿಗೆ ಎಂಬ ಮಾಹಿತಿ ಇದೆ. 10 ಎಕರೆ ವಿಸ್ತೀರ್ಣದಲ್ಲಿ ಇದನ್ನು ಕಟ್ಟಲಾಗಿದೆ. ಇದರಲ್ಲಿ 150 ಕೊಠಡಿಗಳು ಇವೆ. ಇಲ್ಲಿ ಸೈಫ್ ಅಲಿ ಖಾನ್ ಅವರು ಸದಾ ಕಾಲ ವಾಸ ಮಾಡುವುದಿಲ್ಲ. ಕುಟುಂಬದ ಜೊತೆ ರಜೆಯ ಮಜಾ ಸವಿಯಲು ಮಾತ್ರ ಅವರು ಇಲ್ಲಿಗೆ ಬರುತ್ತಾರೆ. ಸೈಫ್ ಅಲಿ ಖಾನ್, ಪತ್ನಿ ಕರೀನಾ ಕಪೂರ್ ಖಾನ್, ಮಕ್ಕಳಾದ ಜೇಹ್ ಅಲಿ ಖಾನ್, ತೈಮೂರ್ ಅಲಿ ಖಾನ್ ಅವರು ಈ ಪ್ಯಾಲೇಸ್ಗೆ ಆಗಾಗ ಭೇಟಿ ನೀಡುತ್ತಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಕೆಲವು ದೃಶ್ಯಗಳನ್ನು ಈ ಪ್ಯಾಲೇಸ್ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.