ವಾಚ್ಮ್ಯಾನ್ ಇಟ್ಟುಕೊಳ್ಳಲು ಕರೀನಾ ಬಳಿ ದುಡ್ಡಿಲ್ಲ; ನಿರ್ದೇಶಕನ ಶಾಕಿಂಗ್ ಹೇಳಿಕೆ
ಸೈಫ್ ಅಲಿ ಖಾನ್ ಮನೆ ಮೇಲೆ ನಡೆದ ದಾಳಿಯ ನಂತರ, ನಿರ್ದೇಶಕ ಆಕಾಶ್ ದೀಪ್ ಸಬೀರ್ ಅವರು ಕರೀನಾ ಕಪೂರ್ ಅವರ ಭದ್ರತಾ ವ್ಯವಸ್ಥೆಯನ್ನು ಟೀಕಿಸಿದ್ದಾರೆ. ಕರೀನಾ ಅವರ ಬಳಿ ಸಾಕಷ್ಟು ಹಣ ಇದ್ದರೂ, ಸೂಕ್ತ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಆಶ್ಚರ್ಯಕರ ಎಂದು ಅವರು ಹೇಳಿದ್ದಾರೆ. ಈ ಘಟನೆಯು ಭದ್ರತೆ ಮತ್ತು ಸೆಲೆಬ್ರಿಟಿಗಳ ಜೀವನಶೈಲಿ ಕುರಿತು ಚರ್ಚೆ ಹುಟ್ಟುಹಾಕಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯೂ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಹೀಗಿರುವಾಗಲೇ ನಿರ್ದೇಶಕ ಆಕಾಶ್ದೀಪ್ ಸಬೀರ್ ಹಾಗೂ ಅವರ ಪತ್ನಿ ಶೀಬಾ ಅವರು ಇತ್ತೀಚೆಗೆ ಸಂದರ್ಶನ ನೀಡಿದಿದ್ದು, ಕರೀನಾ ಬಗ್ಗೆ ಟೀಕೆ ಮಾಡಿದ್ದಾರೆ. ‘ಮನೆಗೆ ವಾಚ್ಮನ ಇಟ್ಟುಕೊಳ್ಳಲು ಪಾಪ ಹಣ ಇಲ್ಲ’ ಎಂದು ಟೀಕಿಸಿದ್ದಾರೆ.
‘ಕರೀನಾ ಕಪೂರ್ ಅವರು 21 ಕೋಟಿ ರೂಪಾಯಿ ಪ್ರೈಸ್ ಟ್ಯಾಗ್ ಹಾಕಿಕೊಂಡಿದ್ದಾರೆ. ಆದರೆ, ಮನೆಯ ಹೊರಗೆ ವಾಚ್ಮ್ಯಾನ್ ಇಟ್ಟುಕೊಳ್ಳೋಕೆ ಅವರ ಬಳಿ ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ 100 ಕೋಟಿ ರೂಪಾಯಿ ಕೊಟ್ಟರೆ ಆಗ ಅವರು ಭದ್ರತಾ ಸಿಬ್ಬಂದಿ ಹಾಗೂ ಕಾರ್ ಡ್ರೈವರ್ನ ಇಟ್ಟುಕೊಳ್ಳಬಹುದು’ ಎಂದಿರುವ ಅವರು ‘ಆಟೋ’ ಎಂದು ಕೂಗಿ ಟೀಕೆ ಮಾಡಿದ್ದಾರೆ. ಸೈಫ್ ಮೇಲೆ ದಾಳಿ ನಡೆಯುವಾಗ ಯಾವುದೇ ಕಾರು ಚಾಲಕರು ಇರಲಿಲ್ಲ. ಹೀಗಾಗಿ, ಅವರು ಆಟೋದಲ್ಲಿ ಆಸ್ಪತ್ರೆ ಸೇರಬೇಕಾಯಿತು. ಈ ಕಾರಣದಿಂದ ಈ ದಂಪತಿ ‘ಆಟೋ’ ಎಂದು ಕೂಗಿ ಕರೆದಂತೆ ಅನುಕರಿಸಿ ಟೀಕೆ ಮಾಡಿದ್ದಾರೆ.
‘ನಾನು ಕರೀನಾ ಅವರನ್ನು ಭೇಟಿ ಮಾಡಿದಾಗ ಅವರಿನ್ನೂ ಚಿಕ್ಕವರು. ಸೈಫ್ ಹಾಗೂ ಕರೀನಾ ಮದುವೆ ಆದಾಗ ನಾನು ಟಿವಿ ಡಿಬೇಟ್ನಲ್ಲಿ ಕುಳಿತು ಅವರ ಪರ ಮಾತನಾಡಿದ್ದೆ. ನಾನು ಕರೀಷ್ಮಾ ಕಪೂರ್ ಅವರ ಮೊದಲ ಚಿತ್ರ ‘ಸಹಾರ’ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೆ. ಆಗ ಕರೀನಾ ನಟಿ ಆಗಿರಲಿಲ್ಲ, ಮಗುವಾಗಿದ್ದಳು’ ಎಂದು ಆಕಾಶ್ದೀಪ್ ಹೇಳಿದ್ದಾರೆ.
‘ಕರೀನಾ ಮನೆಯಲ್ಲಿ ಭದ್ರತಾ ಸಿಬ್ಬಂದಿ ಏಕಿಲ್ಲ ಎಂಬುದು ನನ್ನ ಪ್ರಶ್ನೆ. ಮನೆಯಲ್ಲಿ 30 ಸಿಸಿಟಿವಿ ಇರಬಹುದು. ಆದರೆ, ಅವುಗಳು ಕಳ್ಳನನ್ನು ತಡೆದು ನಿಲ್ಲಿಸುತ್ತವೆಯೇ? ನಡೆದ ಅಪರಾಧವನ್ನು ಪತ್ತೆಹಚ್ಚಲು ಮಾತ್ರ ಅದು ಸಹಕಾರಿ ಆಗುತ್ತದೆಯೇ ಹೊರತು, ಅಪರಾಧ ನಡೆಯದಂತೆ ಸಿಸಿಟಿವಿ ತಡೆಯುವುದಿಲ್ಲ. ಕರೀನಾ ದಂಪತಿ ಯಾಕೆ ಫುಲ್ ಟೈಮ್ ಡ್ರೈವರ್ನ ತಮ್ಮ ಬಳಿ ಇರಿಸಿಕೊಂಡಿಲ್ಲ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಅಟ್ಯಾಕ್ ಬಳಿಕ ಕರೀನಾ ದೂಷಿಸಿದವರಿಗೆ ಟ್ವಿಂಕಲ್ ಖನ್ನಾ ಕ್ಲಾಸ್
ಸದ್ಯ ಆಕಾಶ್ದೀಪ್ ನೀಡಿದ ಹೇಳಿಕ ಚರ್ಚೆ ಆಗುತ್ತಿದೆ. ಅವರು ಕರೀನಾ ಅವರನ್ನು ಸರಿಯಾಗಿ ಪ್ರಶ್ನಿಸಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:45 am, Tue, 4 February 25