1000 ಕೋಟಿ ರೂಪಾಯಿ ಪೊಂಜಿ ಹಗರಣ; ನಟ ಗೋವಿಂದಗೆ ಸಂಕಷ್ಟ

|

Updated on: Sep 15, 2023 | 10:29 AM

ಸೋಲಾರ್ ಟೆಕ್ನೋ ಅಲಾಯನ್ಸ್ 1000 ಕೋಟಿ ರೂಪಾಯಿ ಹಗರಣದ ಪ್ರಮುಖ ರುವಾರಿ. ಈ ಕಂಪನಿ ಲಕ್ಷಾಂತರ ಜನರಿಂದ ಹೂಡಿಕೆ ಮಾಡಿಸಿಕೊಂಡಿದೆ. ಈ ಹಗರಣದ ಮೊತ್ತ ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಕಂಪನಿಯ ಜಾಹೀರಾತಿನಲ್ಲಿ ಗೋವಿಂದ ಅವರು ಕಾಣಿಸಿಕೊಂಡಿದ್ದರು.

1000 ಕೋಟಿ ರೂಪಾಯಿ ಪೊಂಜಿ ಹಗರಣ; ನಟ ಗೋವಿಂದಗೆ ಸಂಕಷ್ಟ
ಗೋವಿಂದ
Follow us on

ನಟ ಗೋವಿಂದ ಅವರು ನಟನೆಯಿಂದ ದೂರವೇ ಇದ್ದಾರೆ. ಅವರು ಚಿತ್ರರಂಗದಲ್ಲಿ ಹೆಚ್ಚಾಗಿ ಆ್ಯಕ್ಟೀವ್ ಆಗಿಲ್ಲ. ಈಗ ಅವರು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. 1000 ಕೋಟಿ ರೂಪಾಯಿ ಪೊಂಜಿ ಹಗರಣದಲ್ಲಿ (Ponzi Scam) ಗೋವಿಂದ ಅವರು ವಿಚಾರಣೆ ಎದುರಿಸಬೇಕಿದೆ. ಒಡಿಶಾ ಆರ್ಥಿಕ ಅಪರಾಧ ವಿಭಾಗ ಈ ಕುರಿತು ತನಿಖೆ ನಡೆಸುತ್ತಿದೆ. ಇದರಲ್ಲಿ ನಟ ಗೋವಿಂದ ಅವರ ಹೆಸರೂ ತಳುಕು ಹಾಕಿಕೊಂಡಿದೆ. ಈ ಹಗರಣಕ್ಕೂ ಗೋವಿಂದಗೂ ಏನು ಸಂಬಂಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೋಲಾರ್ ಟೆಕ್ನೋ ಅಲಾಯನ್ಸ್ 1000 ಕೋಟಿ ರೂಪಾಯಿ ಹಗರಣದ ಪ್ರಮುಖ ರುವಾರಿ. ಈ ಕಂಪನಿ ಲಕ್ಷಾಂತರ ಜನರಿಂದ ಹೂಡಿಕೆ ಮಾಡಿಸಿಕೊಂಡಿದೆ. ಈ ಹಗರಣದ ಮೊತ್ತ ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಕಂಪನಿಯ ಜಾಹೀರಾತಿನಲ್ಲಿ ಗೋವಿಂದ ಅವರು ಕಾಣಿಸಿಕೊಂಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಬೇಕಿದೆ. ಗೋವಿಂದ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಬದುಕಿಗೆ ಬೇರೆ ದಾರಿ ಕಂಡುಕೊಂಡಿದ್ದಾರೆ. ಆದಾಗ್ಯೂ ವಿವಾದ ಅವರನ್ನು ಬಿಡುತ್ತಿಲ್ಲ.

‘ಶೀಘ್ರವೇ ನಮ್ಮ ತಂಡದವರು ಮುಂಬೈಗೆ ತೆರಳುತ್ತಾರೆ. ಗೋವಿಂದ ಅವರನ್ನು ವಿಚಾರಣೆಗೆ ಹಾಜರುಪಡಿಸುತ್ತಿದ್ದೇವೆ. ಅವರು ಸೋಲಾರ್ ಟೆಕ್ನೋ ಅಲಾಯನ್ಸ್​ನ ಗೋವಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರು ಕೆಲವು ವಿಡಿಯೋದಲ್ಲಿ ಕಂಪನಿಯನ್ನು ಪ್ರಮೋಟ್ ಮಾಡಿದ್ದರು’ ಎಂದು  ಒಡಿಶಾ ಆರ್ಥಿಕ ಅಪರಾಧ ವಿಭಾಗದ ಐಜಿ ಜೆಎನ್ ಪಂಕಜ್ ಮಾಹಿತಿ ನೀಡಿದ್ದಾರೆ.

‘ಗೋವಿಂದ ಅವರು ಇಲ್ಲಿ ಆರೋಪಿಯೂ ಅಲ್ಲ, ಶಂಕಿತನೂ ಅಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಒಂದು ಸಾಮಾನ್ಯ ವಿಚಾರಣೆ ಆಗಿದೆ ಅಷ್ಟೇ. ಗೋವಿಂದ ಅವರು ಕಂಪನಿಯ ಜಾಹೀರಾತುಗಳಲ್ಲಿ ಭಾಗಿ ಆಗಿರುವುದರಿಂದ ಅವರನ್ನು ಸಾಕ್ಷ್ಯ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಅಭ್ಯರ್ಥಿಗಳ ಲಿಸ್ಟ್​ ಅಲ್ಲ; ‘ಬಿಗ್ ಬಾಸ್’ ಬಗ್ಗೆ ವೀಕ್ಷಕರಿಗೆ ಕಾಡ್ತಿದೆ ಈ ಪ್ರಶ್ನೆ

ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಗೋವಿಂದ​ಗೂ ಈ ಹಗರಣಕ್ಕೂ ಯಾವುದೇ ಸಂಬಂಧ ಇಲ್ಲ. ಗೋವಿಂದ ಈ ಕಂಪನಿಯ ಕಾರ್ಯಕ್ರಮಕ್ಕೆ ತೆರಳಿದ್ದರು ಅಷ್ಟೇ. ಅವರಿಗೂ ಹಗರಣಕ್ಕೂ ಸಂಬಂಧ ಕಲ್ಪಿಸುವುದು ಸರಿ ಅಲ್ಲ’ ಎಂದಿದ್ದಾರೆ ಅವರು. ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಅರೆಸ್ಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:29 am, Fri, 15 September 23