ಜಿಮ್ನಲ್ಲಿ ಬೆವರಿಳಿಸಿದ ನಟಿ! ಕೃತಿ ಸನೊನ್ ವರ್ಕೌಟ್ ವಿಡಿಯೋ ನೋಡಿ
Kriti Sanon- ವರ್ಕೌಟ್ ಮಾಡುತ್ತಾ ಜಿಮ್ನಲ್ಲಿ ಬೆವರಿಳಿಸಿದ್ದಾರೆ ನಟಿ ಕೃತಿ. ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು ವಿಡಿಯೋ ಸಾಕಷ್ಟು ಲೈಕ್ಸ್ ಪಡೆದುಕೊಂಡಿದೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ನಟಿಮಣಿಯರು ಯಾವಾಗಲೂ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಪ್ರತಿನಿತ್ಯದ ದಿನಚರಿಯಿಂದ ಹಿಡಿದು ಸ್ಪೆಷಲ್ ಅನಿಸುವ ಫೋಟೋಗಳನ್ನೂ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬಾಲಿವುಡ್ ಬೆಡಗಿ ನಟಿ ಕೃತಿ ಸನೊನ್ ಕೂಡಾ ಜಿಮ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವರ್ಕೌಟ್ ಕಷ್ಟ ಹೇಗಿರುತ್ತೆ ಎಂಬುದನ್ನು ತೋರಿಸಿದ್ದಾರೆ.
ತೆರೆಯ ಮುಂದೆ ನಟಿಮಣಿಗಳ ಆ್ಯಕ್ಟಿಂಗ್ ನೋಡಿ ಮೆಚ್ಚಿಕೊಳ್ತೇವೆ. ಆದರೆ ತೆರೆಮರೆಯಲ್ಲಿ ಅವರ ದಿನಚರಿಗಳು ಏನು? ಅವರ ಲೈಫ್ಸ್ಟೈಲ್ ಹೇಗಿರುತ್ತೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇದೀಗ ನಟಿ ಕೃತಿ ಸನೊನ್ ತಮ್ಮ ದಿನಚರಿಯಲ್ಲಿ ಮಾಡುವ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕಷ್ಟವಾಗಿರುವ ವರ್ಕೌಟ್ ಮಾಡುತ್ತಾ ಜಿಮ್ನಲ್ಲಿ ಬೆವರಿಳಿಸಿದ್ದಾರೆ ನಟಿ ಕೃತಿ. ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು ವಿಡಿಯೋ ಸಾಕಷ್ಟು ಲೈಕ್ಸ್ ಪಡೆದುಕೊಂಡಿದೆ. ಜತೆಗೆ ಕೃತಿ ವರ್ಕೌಟ್ ನೋಡಿದ ಅಭಿಮಾನಿಗಳಿಂದ ಸಾಕಷ್ಟು ಕಾಮೆಂಟ್ಸ್ಗಳ ಸುರಿಮಳೆಯೇ ಹರಿದು ಬಂದಿದೆ. ವಿಡಿಯೋದಲ್ಲಿ ಗಮನಿಸುವಂತೆ ತಮ್ಮ ತರಬೇತಿದಾರರೊಂದಿಗೆ ನಟಿ ಕೃತಿ ವರ್ಕೌಟ್ ಮಾಡ್ತಿದ್ದಾರೆ.
ನಟಿ ಕೃತಿ ಸನೊನ್ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಪಾರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
View this post on Instagram
ಇದನ್ನೂ ಓದಿ:
ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್ಗೆ ನಟಿ ಕರೀನಾ ಕಪೂರ್ ನೀಡಿದ ಉತ್ತರ ಹೇಗಿತ್ತು?
Revathy Sampath: ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗ ಮಾಡಿ ಸಂಚಲನ ಸೃಷ್ಟಿಸಿದ ನಟಿ ರೇವತಿ
Published On - 12:09 pm, Tue, 22 June 21