ನಟಿ ರೇಖಾ (Rekha) ಬಗ್ಗೆ ಇತ್ತೀಚೆಗೆ ಸುಳ್ಳು ಸುದ್ದಿ ಒಂದು ಹಬ್ಬಿತ್ತು. ತಮ್ಮ ಲೇಡಿ ಮ್ಯಾನೇಜರ್ ಫರ್ಜಾನಾ ಜೊತೆ ರೇಖಾ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದರು ಎಂದು ಅವರ ಬಯೋಗ್ರಫಿಯಲ್ಲಿ ಬರೆದಿರುವುದಾಗಿ ವರದಿ ಆಗಿತ್ತು. ಆದರೆ, ಈ ವರದಿ ಸುಳ್ಳು ಎಂಬುದು ಬಳಿಕ ತಿಳಿದು ಬಂದಿತ್ತು. ಅಚ್ಚರಿಯ ವಿಚಾರ ಎಂದರೆ ನಟಿ ರೇಖಾ ಅವರು ‘ನಾನು ಮಹಿಳೆಯನ್ನು ಏಕೆ ಮದುವೆ ಆಗಬಾರದು’ ಎಂದು ಸಂದರ್ಶನ ಒಂದರಲ್ಲಿ ನೇರವಾಗಿ ಕೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ರೇಖಾ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ರಹಸ್ಯಗಳಿವೆ. ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳು ನಡೆದಿವೆ. ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಜೊತೆ ಅವರು ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಹಾಗಾಗಿಲ್ಲ. ದೆಹಲಿ ಮೂಲದ ಉದ್ಯಮಿ ಮುಕೇಶ್ ಅಗರವಾಲ್ ಜೊತೆ 1990ರ ಮಾರ್ಚ್ ತಿಂಗಳಲ್ಲಿ ರೇಖಾ ಮದುವೆ ಆದರು. ಮದುವೆ ಆದ ಏಳೇ ತಿಂಗಳಲ್ಲಿ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕೆ ರೇಖಾ ಮತ್ತೊಂದು ಮದುವೆ ಆಗಿಲ್ಲ.
ಎರಡನೇ ಮದುವೆ ಬಗ್ಗೆ ಸಂದರ್ಶನ ಒಂದರಲ್ಲಿ ರೇಖಾ ಮಾತನಾಡಿದ್ದರು. ಅದು 2004ನೇ ಇಸ್ವಿ. ಅವರು ಸಿಮಿ ಗರೇವಾಲ್ ಅವರ ಶೋನಲ್ಲಿ ಭಾಗಿ ಆಗಿದ್ದರು. ಮದುವೆ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ‘ಪುರುಷನ ಜೊತೆ ಮತ್ತೆ ಮದುವೆಯೇ’ ಎಂದು ರೇಖಾ ಮರು ಪ್ರಶ್ನೆ ಮಾಡಿದ್ದರು. ‘ಮಹಿಳೆಯ ಜೊತೆಯಂತೂ ಮದುವೆಯಾಗಲು ಸಾಧ್ಯವಿಲ್ಲವಲ್ಲ’ ಎಂದು ಸಿಮಿ ಉತ್ತರಿಸಿದ್ದರು. ಇದಕ್ಕೆ ರೇಖಾ ‘ಯಾಕಾಗಬಾರದು’ ಎಂದು ಕೇಳಿದ್ದರು.
ಇದನ್ನೂ ಓದಿ: ಲೇಡಿ ಸೆಕ್ರೇಟರಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ನಟಿ ರೇಖಾ? ಬಯೋಗ್ರಫಿಯಲ್ಲಿ ಹೊರಬಿತ್ತು ಶಾಕಿಂಗ್ ವಿಚಾರ
‘ಮನಸ್ಸಿನ ಪ್ರಕಾರ ನನ್ನ ಜೊತೆ, ನನ್ನ ವೃತ್ತಿಯ ಜೊತೆ, ಪ್ರೀತಿ ಪಾತ್ರರರ ಜೊತೆ ಮದುವೆ ಆಗಿದ್ದೇನೆ. ನಾನು ಸಿನಿಕತೆ ಇರುವ ವ್ಯಕ್ತಿ ಅಲ್ಲ’ ಎಂದು ರೇಖಾ ಹೇಳಿದ್ದರು. ವಿನೋದ್ ಮೆಹ್ರಾ ಜೊತೆ ರೇಖಾ ಮದುವೆ ಆಗಿದ್ದಾರೆ ಎನ್ನುವ ಮಾತಿದೆ. ಆದರೆ, ಇದನ್ನು ರೇಖಾ ಅಲ್ಲಗಳೆದಿದ್ದರು. ‘ವಿನೋದ್ ಮೆಹ್ರಾ ಅವರು ನನ್ನ ಹಿತೈಷಿ’ ಎಂದು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ