ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಅವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ (Sushant Singh Rajput Apartment) ಬಗ್ಗೆ ಹಲವಾರು ಬಗೆಯ ಸುದ್ದಿಗಳು ಹರಿದಾಡಿದ್ದವು. ಈಗ ಅದೇ ಮನೆಯನ್ನು ನಟಿ ಅದಾ ಶರ್ಮಾ ಕೊಂಡುಕೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಈ ವ್ಯವಹಾರ ನಡೆದಿತ್ತು. ಆದರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಆ ಮನೆಗೆ ಶಿಫ್ಟ್ ಆಗಲು ನಟಿಗೆ ಸಾಧ್ಯವಾಗಿರಲಿಲ್ಲ. ಈಗ ಅವರು ಆ ಮನೆಗೆ ತೆರಳಿದ್ದಾರೆ. ಅಲ್ಲಿಯೇ ವಾಸಿಸುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಇದ್ದ ಮನೆಯಲ್ಲಿ ಈಗ ವಾತಾವರಣ ಹೇಗಿದೆ ಎಂಬುದನ್ನು ಅದಾ ಶರ್ಮಾ (Adah Sharma) ವಿವರಿಸಿದ್ದಾರೆ.
‘ಬಾಂಬೆ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಅದಾ ಶರ್ಮಾ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಮನೆಯನ್ನು ಖರೀದಿಸುವುದು ಬೇಡ ಎಂದು ಅವರಿಗೆ ಕೆಲವರು ಹೇಳಿದ್ದರಂತೆ. ಆದರೆ ಅಂಥವರ ಮಾತುಗಳಿಗೆ ಅದಾ ಶರ್ಮಾ ಕಿವಿ ಕೊಟ್ಟಿಲ್ಲ. ತಮಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ. ‘ನಾಲ್ಕು ತಿಂಗಳಿಂದ ಬ್ಯುಸಿ ಇದ್ದೆ. ಆ ಮನೆಗೆ ಹೋಗಿ ಸೆಟ್ಲ್ ಆಗಲು ಈಗತಾನೇ ಸಮಯ ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.
‘ಇಷ್ಟು ದಿನಗಳವರೆಗೆ ನಾನು ಬಾಂದ್ರದ ಪಾಲಿ ಹಿಲ್ನಲ್ಲಿರುವ ಮನೆಯಲ್ಲಿ ವಾಸವಾಗಿದ್ದೆ. ಇದೇ ಮೊದಲ ಬಾರಿಗೆ ನಾನು ಆ ಜಾಗದಿಂದ ಹೊರಬಂದಿದ್ದು. ಸ್ಥಳಗಳ ವೈಬ್ ಬಗ್ಗೆ ನಾನು ಹೆಚ್ಚು ಸೂಕ್ಷ್ಮವಾಗಿದ್ದೇನೆ. ಹೊಸ ಮನೆಯಲ್ಲಿ ನನಗೆ ಪಾಸಿಟಿವ್ ವೈಬ್ ಅನುಭವ ಆಗಿದೆ’ ಎಂದು ಅದಾ ಶರ್ಮಾ ಹೇಳಿದ್ದಾರೆ. ಸುಶಾಂತ್ ನಿಧನರಾದ ಈ ಮನೆಯಲ್ಲಿ ಭಯ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಆ ರೀತಿಯ ಅನುಭವಗಳು ಅದಾ ಶರ್ಮಾಗೆ ಆಗಿಲ್ಲ.
ಇದನ್ನೂ ಓದಿ: ‘ಸುಶಾಂತ್ ಸಾವಿನಲ್ಲಿ ಅನೇಕ ವಿಚಾರ ಹೊಂದಿಕೆ ಆಗುತ್ತಿಲ್ಲ’: ಸಹೋದರಿ ಶಾಕಿಂಗ್ ಹೇಳಿಕೆ
ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾದ ಮನೆಯನ್ನು ಈಗ ಅದಾ ಶರ್ಮಾ ಅವರು ಹೊಸದಾಗಿ ವಿನ್ಯಾಸಗೊಳಿಸಿದ್ದಾರೆ. ಇಡೀ ಮನೆಗೆ ಬಿಳಿ ಬಣ್ಣ ಬಳಿಯಲಾಗಿದೆ. ಕೆಳಗಡೆ ಫ್ಲೋರ್ ಅನ್ನು ದೇವಸ್ಥಾನದ ರೀತಿ ಪರಿವರ್ತಿಸಲಾಗಿದೆ. ಟಾಪ್ ಫ್ಲೋರ್ನ ಒಂದು ಕೊಠಡಿಯನ್ನು ಮ್ಯೂಸಿಕ್ಗಾಗಿ ಮೀಸಲಿಡಲಾಗಿದೆ. ಇನ್ನೊಂದು ರೂಮ್ ಅನ್ನು ಡ್ಯಾನ್ಸ್ ಸ್ಟುಡಿಯೋ ಮಾಡಲಾಗಿದೆ. ಟೆರೇಸ್ನಲ್ಲಿ ಗಾರ್ಡನ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.