ಆ ವಿಷಯದಲ್ಲಿ ದಕ್ಷಿಣಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದ ಕಾಜಲ್ ಅಗರ್ವಾಲ್
ಉತ್ತರ ಭಾರತದ ಮೂಲದವರಾದರೂ ದಕ್ಷಿಣ ಭಾರತ ಚಿತ್ರರಂಗದಿಂದ ಹೆಸರು, ಹಣ, ಜನಪ್ರಿಯತೆಗಳಿಸಿಕೊಂಡ ನಟಿ ಕಾಜಲ್ ಅಗರ್ವಾಲ್ ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ನಡುವಿನ ಭಿನ್ನತೆ ಬಗ್ಗೆ ಮಾತನಾಡುತ್ತಾ, ಪ್ರಮುಖವಾದ ವಿಷಯವೊಂದರಲ್ಲಿ ದಕ್ಷಿಣಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದಿದ್ದಾರೆ.
ಕಾಜಲ್ ಅಗರ್ವಾಲ್ (Kajal Aggarwal) ಮೂಲ ಉತ್ತರ ಭಾರತವಾದರೂ ಅವರು ನಟಿಯಾಗಿ ಗುರುತಿಸಿಕೊಂಡಿದ್ದು, ಸ್ಟಾರ್ ನಟಿ ಎನಿಸಿಕೊಂಡಿದ್ದು ದಕ್ಷಿಣ ಭಾರತದಲ್ಲಿ. ನಿರ್ದಿಷ್ಟವಾಗಿ ಹೇಳಬೇಕೆಂದರೆ ತೆಲುಗು ಹಾಗೂ ತಮಿಳು ಚಿತ್ರರಂಗದ ಮೂಲಕ. 2007 ರಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾಜಲ್ ಅಗರ್ವಾಲ್ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಧಾನ ಕತೆಗಳುಳ್ಳ ಸಿನಿಮಾಗಳು ಕಾಜಲ್ ಅವರಿಗೆ ದೊರಕುತ್ತಿವೆ. ಹಿಂದಿ ಸಿನಿಮಾಗಳಲ್ಲಿಯೂ ನಟಿಸಿರುವ ಕಾಜಲ್ ಅಗರ್ವಾಲ್, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಒಂದು ಮುಖ್ಯ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಹೋಲಿಸಿದರೆ ಬಾಲಿವುಡ್ ಬೆಸ್ಟ್ ಎಂದಿದ್ದಾರೆ.
ಕಾಜಲ್ ಅಗರ್ವಾಲ್ಗೆ ಈಗ 38 ವರ್ಷ, ಎರಡು ವರ್ಷದ ಹಿಂದಷ್ಟೆ ಉದ್ಯಮಿಯೊಬ್ಬರೊಟ್ಟಿಗೆ ವಿವಾಹವಾಗಿದ್ದು ಮಗುವಿಗೆ ಜನ್ಮ ನೀಡಿ ತಾಯಿಯಾಗಿದ್ದಾರೆ. ಮದುವೆಯಾದ ಬಳಿಕ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಅವಕಾಶಗಳು ಕಾಜಲ್ಗೆ ಸಿಗುತ್ತಿಲ್ಲವಂತೆ. ಮಹಿಳಾ ಪ್ರಧಾನ ಸಿನಿಮಾಗಳು, ಪತ್ತೆಧಾರಿ ಕತೆಗಳುಳ್ಳ ಸಿನಿಮಾಗಳೇ ಹೆಚ್ಚಾಗಿ ಸಿಗುತ್ತಿವೆಯಂತೆ. ಇದೇ ಕಾರಣಕ್ಕೆ ಸಣ್ಣ ಅಸಮಾಧಾನವೊಂದನ್ನು ದಕ್ಷಿಣ ಭಾರತ ಚಿತ್ರರಂಗದ ಮೇಲೆ ಹೊರಿಸಿದ್ದಾರೆ ಕಾಜಲ್ ಅಗರ್ವಾಲ್.
ಬಾಲಿವುಡ್ನಲ್ಲಿ ಮದುವೆಯಾದ ನಟಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ದೀಪಿಕಾ ಪಡುಕೋಣೆಗೆ ‘ಫೈಟರ್’ ಅಂಥಹಾ ಆಕ್ಷನ್-ರೊಮ್ಯಾಂಟಿಕ್ ಪಾತ್ರ ಸಿಗುತ್ತದೆ. ಆಲಿಯಾ ಭಟ್ಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಅಂಥಹಾ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿವೆ. ಆದರೆ ದಕ್ಷಿಣ ಭಾರತದಲ್ಲಿ ಈ ಪರಿಸ್ಥಿತಿ ಇಲ್ಲ. ನಟಿ ಮದುವೆಯಾದ ಕೂಡಲೇ ಆಕೆಗೆ ರೊಮ್ಯಾಂಟಿಕ್ ಪಾತ್ರಗಳು, ಮುಖ್ಯ ನಾಯಕಿಯ ಪಾತ್ರಗಳು ಸಿಗುವುದು ನಿಂತೇ ಹೋಗುತ್ತವೆ. ಈ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದಿದ್ದಾರೆ ಕಾಜಲ್ ಅಗರ್ವಾಲ್.
ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಕಾಜಲ್ ಅಗರ್ವಾಲ್: ಪಾತ್ರ ಯಾವುದು?
‘ಮದುವೆಯಾಗಿ, ಮಕ್ಕಳಾದ ಎಷ್ಟೋ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಪಾತ್ರಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಆದರೆ ಬಾಲಿವುಡ್ನಲ್ಲಿ ಆ ರೀತಿಯ ಸ್ಥಿತಿ ಇಲ್ಲ. ದಕ್ಷಿಣ ಭಾರತದಲ್ಲಿ ಸ್ಟಿರಿಯೋಟೈಪ್ ಕಾಸ್ಟಿಂಗ್ ಮಾಡಲಾಗುತ್ತದೆ. ಆ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಹೇಮಾ ಮಾಲಿನಿ, ಶರ್ಮಿಳಾ ಠಾಗೋರ್ ಅಂಥಹವರು ವರ್ಷಗಳು ಕಳೆದರು ನಾಯಕಿಯರಾಗಿ ನಟಿಸಿದ್ದರು. ದಕ್ಷಿಣ ಭಾರತದಲ್ಲಿ ನಟಿ ನಯನತಾರಾ ಈಗಲೂ ಸಹ ತಮ್ಮದೇ ರೀತಿಯ ರೊಮ್ಯಾಂಟಿಕ್, ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕಾಜಲ್ ಅಗರ್ವಾಲ್ ಪ್ರಸ್ತುತ ‘ಸತ್ಯಭಾಮ’ ಹೆಸರಿನ ಸಿನಿಮಾದಲ್ಲಿ ಎಸಿಪಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಪತ್ತೆಧಾರಿ ಮತ್ತು ಆಕ್ಷನ್ ಭರಿತ ಕತೆಯಾಗಿದೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ಉಮಾ’ ಹೆಸರಿನ ಹಿಂದಿ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ