Updated on: Dec 28, 2023 | 10:23 PM
ನಟಿ ಕಾಜಲ್ ಅಗರ್ವಾಲ್ ಚಿತ್ರರಂಗಕ್ಕೆ ಕಾಲಿರಿಸಿ 20 ವರ್ಷಗಳಾಗಿವೆ. ನಾಯಕಿಯಾಗಿ 17 ವರ್ಷಗಳಾಗಿವೆ.
ತೆಲುಗು, ತಮಿಳು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ.
ತೆಲುಗು, ತಮಿಳಿನ ಬಹುತೇಕ ಎಲ್ಲ ಸೂಪರ್ ಸ್ಟಾರ್ ನಾಯಕರೊಟ್ಟಿಗೆ ಕಾಜಲ್ ನಟಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಉದ್ಯಮಿಯೊಬ್ಬರನ್ನು ವಿವಾಹವಾದರು ಕಾಜಲ್, ಆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರೆ ಎನ್ನಲಾಗಿತ್ತು.
ಆದರೆ ಮದುವೆಯ ಬಳಿಕವೂ ನಟನೆ ಮುಂದುವರೆಸಿದ ಕಾಜಲ್, ಮಹಿಳಾ ಪ್ರಧಾನ ಪಾತ್ರವುಳ್ಳ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ವಯಸ್ಸಾದಷ್ಟು ಇನ್ನಷ್ಟು ಗ್ಲಾಮರಸ್ ಆಗುತ್ತಾ ಸಾಗುತ್ತಿರುವ ಕಾಜಲ್ ಅಗರ್ವಾಲ್, ಇನ್ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಕಾಜಲ್ ಅಗರ್ವಾಲ್ ತಮ್ಮ ಹೊಚ್ಚ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.