ಶಾರುಖ್​ ಖಾನ್​ ನಟನೆಯ ‘ಕಿಂಗ್​’ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ

‘ಕಿಂಗ್​’ ಸಿನಿಮಾಗೆ ಸ್ಪೇನ್​ನಲ್ಲಿ ಶಾರುಖ್​ ಖಾನ್​ ಅವರು ಚಿತ್ರೀಕರಣ ಶುರು ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಕೆಲವು ವ್ಯಕ್ತಿಗಳ ಜೊತೆ ಶಾರುಖ್​ ಖಾನ್​ ಮೀಟಿಂಗ್​ ಮಾಡುತ್ತಿರುವ ಒಂದು ಫೋಟೋ ವೈರಲ್​ ಆಗಿದೆ. ಇದನ್ನು ನೋಡಿ ‘ಕಿಂಗ್​’ ಸಿನಿಮಾದ ಶೂಟಿಂಗ್​ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಅಸಲಿ ವಿಷಯ ಬೇರೆಯೇ ಇದೆ.

ಶಾರುಖ್​ ಖಾನ್​ ನಟನೆಯ ‘ಕಿಂಗ್​’ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ
ವೈರಲ್​ ಫೋಟೋ, ಶಾರುಖ್​ ಖಾನ್
Follow us
ಮದನ್​ ಕುಮಾರ್​
|

Updated on: Jun 02, 2024 | 8:39 PM

ಜನಪ್ರಿಯ ನಟ ಶಾರುಖ್​ ಖಾನ್​ (Shah Rukh Khan) ಅವರು 2023ರಲ್ಲಿ ಸಖತ್​ ಬ್ಯುಸಿ ಆಗಿದ್ದರು. ಅವರು ನಟಿಸಿದ್ದ ಮೂರು ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ತೆರೆಕಂಡು ಯಶಸ್ವಿ ಆದವು. ಆದರೆ 2024ರ ಅರ್ಧ ವರ್ಷ ಕಳೆದರೂ ಶಾರುಖ್​ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಈ ವರ್ಷ ಅವರ ಹೊಸ ಸಿನಿಮಾ (Shah Rukh Khan Next Movie) ರಿಲೀಸ್​ ಆಗುವುದು ಅನುಮಾನ. ಹೊಸ ಸಿನಿಮಾದ ಕೆಲಸಗಳನ್ನು ಅವರು ಇನ್ನಷ್ಟೇ ಆರಂಭಿಸಬೇಕಿದೆ. ಈ ನಡುವೆ ಅವರ ‘ಕಿಂಗ್​’ ಸಿನಿಮಾ (King Movie) ಬಗ್ಗೆ ಒಂದು ಗಾಸಿಪ್​ ಹಬ್ಬಿದೆ. ಅದಕ್ಕೆ ಕಾರಣ ಆಗಿರುವುದು ಈ ವೈರಲ್​ ಫೋಟೋ.

‘ಕಿಂಗ್​’ ಸಿನಿಮಾಗೆ ಸುಜಯ್​ ಘೋಷ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ಅವರಿಗೆ ಪ್ರಮುಖ ಪಾತ್ರ ಇರಲಿದೆ. ಈ ಸಿನಿಮಾ ಮೂಲಕ ಸುಹಾನಾ ಖಾನ್​ ಅವರು ದೊಡ್ಡ ಪರದೆಯಲ್ಲಿ ಮೊದಲ ಬಾರಿ ದರ್ಶನ ನೀಡಲಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಕೇವಲ ಒಟಿಟಿಯಲ್ಲಿ ರಿಲೀಸ್​ ಆಗಿತ್ತು. ಆದ್ದರಿಂದ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿರುವ ‘ಕಿಂಗ್​’ ಸಿನಿಮಾ ಬಗ್ಗೆ ಅವರಿಗೆ ವಿಶೇಷ ಭರವಸೆ ಇದೆ.

ಶಾರುಖ್​ ಖಾನ್​ ಅವರು ‘ಕಿಂಗ್​’ ಸಿನಿಮಾಗೆ ಸ್ಪೇನ್​ನಲ್ಲಿ ಶೂಟಿಂಗ್​ ಶುರು ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಶಾರುಖ್​ ಖಾನ್​ ಅವರು ಕೆಲವು ವ್ಯಕ್ತಿಗಳ ಜೊತೆ ಮೀಟಿಂಗ್​ ಮಾಡುತ್ತಿರುವ ಒಂದು ಫೋಟೋ ವೈರಲ್​ ಆಗಿದೆ. ಇದನ್ನು ನೋಡಿ ‘ಕಿಂಗ್​’ ಸಿನಿಮಾದ ಶೂಟಿಂಗ್​ ಎಂದು ಅನೇಕರು ಭಾವಿಸಿದ್ದಾರೆ. ಅಸಲಿ ವಿಷಯ ಏನೆಂದರೆ, ಆ ಫೋಟೋದಲ್ಲಿ ಇರುವುದು ಶಾರುಖ್​ ಖಾನ್​ ಅಲ್ಲವೇ ಅಲ್ಲ.

ಇದನ್ನೂ ಓದಿ: ಮುಂದಿನ ಸಿನಿಮಾದ ಶೂಟಿಂಗ್​ ಬಗ್ಗೆ ಅಪ್​ಡೇಟ್​ ನೀಡಿದ ನಟ ಶಾರುಖ್​ ಖಾನ್​

2020ರಲ್ಲಿ ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆದ ‘ವೈಟ್​ ಲೈನ್ಸ್​’ ವೆಬ್​ ಸರಣಿಯ ಫೋಟೋ ಇದು. ಈ ವೆಬ್​ ಸರಣಿಗೂ ಶಾರುಖ್​ ಖಾನ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಶಾರುಖ್​ ಖಾನ್​ ಅವರು ಸದ್ಯಕ್ಕೆ ಕುಟುಂಬ ಸಮೇತರಾಗಿ ಇಟಲಿಗೆ ತೆರಳಿದ್ದಾರೆ. ಅಲ್ಲಿ ಅವರು ಮುಖೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿಯ ಪ್ರೀ-ವೆಡ್ಡಿಂಗ್​ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಐಪಿಎಲ್​ ಫೈನಲ್​ ಮುಗಿಸಿಕೊಂಡ ಬಳಿಕ ಶಾರುಖ್​ ಖಾನ್​ ಕುಟುಂಬದವರು ಇಟಲಿಗೆ ತೆರಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್