Prabhas: ‘ಆದಿಪುರುಷ್​’ ಚಿತ್ರದ ಐವರ ಮೇಲೆ ಕೇಸ್​; ಪ್ರಭಾಸ್​, ಸೈಫ್​ ಅಲಿ ಖಾನ್​ಗೆ ಕಾನೂನಿನ ಸಂಕಷ್ಟ

| Updated By: ಮದನ್​ ಕುಮಾರ್​

Updated on: Oct 13, 2022 | 8:10 AM

Adipurush Teaser Adipurush: ‘ರಾಮಾಯಣ’ ರೀತಿಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇದು ಜನರ ಭಾವನೆಗೆ ಸಂಬಂಧಿಸಿದ ವಿಚಾರ.

Prabhas: ‘ಆದಿಪುರುಷ್​’ ಚಿತ್ರದ ಐವರ ಮೇಲೆ ಕೇಸ್​; ಪ್ರಭಾಸ್​, ಸೈಫ್​ ಅಲಿ ಖಾನ್​ಗೆ ಕಾನೂನಿನ ಸಂಕಷ್ಟ
ಪ್ರಭಾಸ್
Follow us on

ಪ್ರಭಾಸ್​ ನಟನೆಯ ‘ಆದಿಪುರುಷ್​’ (Adipurush) ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಟೀಸರ್​ ಬಿಡುಗಡೆ ಆದ ಬಳಿಕ ಎಲ್ಲವೂ ತಲೆಕೆಳಗಾಗಿದೆ. ಅ.2ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಟೀಸರ್​ ರಿಲೀಸ್​ ಮಾಡಲಾಯಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆಗಿದ್ದೇ ಬೇರೆ. ‘ಆದಿಪುರುಷ್​’ ಟೀಸರ್​ (Adipurush Teaser) ನೋಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿನ ಗ್ರಾಫಿಕ್ಸ್​ ಗುಣಮಟ್ಟ ಕಳಪೆ ಆಗಿದೆ ಎಂಬುದು ಅಸಮಾಧಾನಕ್ಕೆ ಕಾರಣ ಆಗಿದೆ. ಅಷ್ಟೇ ಅಲ್ಲದೇ ಈಗ ಕಾನೂನಿನ ಸಂಕಷ್ಟ ಕೂಡ ಎದುರಾಗಿದೆ. ಈ ಸಿನಿಮಾದಲ್ಲಿ ನಟಿಸಿರುವ ಪ್ರಭಾಸ್​ (Prabhas), ಸೈಫ್​ ಅಲಿ ಖಾನ್​, ನಿರ್ದೇಶನ ಮಾಡಿರುವ ಓಂ ರಾವತ್​ ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್​ ದಾಖಲಾಗಿದೆ.

‘ರಾಮಾಯಣ’ ರೀತಿಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇದು ಜನರ ಭಾವನೆಗೆ ಸಂಬಂಧಿಸಿದ ವಿಚಾರ. ‘ಆದಿಪುರುಷ್​’ ಚಿತ್ರದಲ್ಲಿ ರಾಮ, ರಾವಣ, ಸೀತೆ ಪಾತ್ರಗಳನ್ನು ಸರಿಯಾಗಿ ತೋರಿಸಿಲ್ಲ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಅಕ್ಟೋಬರ್​ 27ರಂದು ವಿಚಾರಣೆ ನಡೆಸಲು ಕೋರ್ಟ್​ ದಿನಾಂಕ ನಿಗದಿ ಮಾಡಿದೆ. ಇತ್ತೀಚೆಗೆ ದೆಹಲಿಯಲ್ಲೂ ಚಿತ್ರತಂಡದ ವಿರುದ್ಧ ಇದೇ ರೀತಿಯ ಕೇಸ್​ ದಾಖಲಾಗಿತ್ತು.

ನಟ ಪ್ರಭಾಸ್​ ಅವರಿಗೆ ಯಾಕೋ ಟೈಮ್​ ಚೆನ್ನಾಗಿಲ್ಲ. ಮಾಡಿದ ಎಲ್ಲ ಪ್ರಯತ್ನಗಳೂ ಕೈ ಕೊಡುತ್ತಿವೆ. ‘ಬಾಹುಬಲಿ’ ಬಳಿಕ ಅವರು ನಟಿಸಿದ ‘ಸಾಹೋ’ ಹಾಗೂ ‘ರಾಧೆ ಶ್ಯಾಮ್​’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲಿಲ್ಲ. ‘ಆದಿಪುರುಷ್​’ ಚಿತ್ರವಾದರೂ ಗೆಲುವು ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರಿಲೀಸ್​ಗೂ ಮುನ್ನವೇ ಈ ಸಿನಿಮಾ ಕಿರಿಕ್​ ಮಾಡಿಕೊಳ್ಳುತ್ತಿದೆ. 2023ರ ಜನವರಿ 12ರಂದು ಈ ಚಿತ್ರ ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲಿ ಸಿನಿಮಾ ಮೂಡಿಬರುತ್ತಿದೆ.

ಇದನ್ನೂ ಓದಿ
ಅಯೋಧ್ಯೆ ರಾಮ ಮಂದಿರದ ಅರ್ಚಕರಿಂದಲೂ ‘ಆದಿಪುರುಷ್​’ ಚಿತ್ರಕ್ಕೆ ವಿರೋಧ; ಬ್ಯಾನ್ ಮಾಡಲು ಆಗ್ರಹ
Adipurush: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​: ಎಲ್ಲ ಬಿಟ್ಟು ಯೂಟ್ಯೂಬ್​ ಮೇಲೆ ಆರೋಪ ಹೊರಿಸಿದ ನಿರ್ದೇಶಕ
Prabhas: ‘ಆದಿಪುರುಷ್​’ ಕಳಪೆ ಗ್ರಾಫಿಕ್ಸ್​; ‘ಈ ಕೆಲಸ ನಾವು ಮಾಡಿಲ್ಲ’ ಎಂದು ಪ್ರಕಟಣೆ ನೀಡಿದ ಖ್ಯಾತ ಸಂಸ್ಥೆ
Prabhas: ರಾಮಾಯಣ ಆಧಾರಿತ ‘ಆದಿಪುರುಷ್’ ಚಿತ್ರಕ್ಕೆ ಟ್ರೋಲ್​ ಕಾಟ;​ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಏನು?

ಕಳಪೆ ಗ್ರಾಫಿಕ್ಸ್​ ಬಗ್ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ನಿರ್ದೇಶಕ ಓಂ ರಾವತ್​ ಅವರು ಪ್ರತಿಕ್ರಿಯೆ ನೀಡಿದರು. ‘ಇದು ದೊಡ್ಡ ಪರದೆಗಾಗಿ ಮಾಡಿದ ಸಿನಿಮಾ. ಯೂಟ್ಯೂಬ್​ನಲ್ಲಿ ಟೀಸರ್​ ನೋಡಿದ್ದಕ್ಕೆ ಗುಣಮಟ್ಟ ಸರಿಯಿಲ್ಲ ಅಂತ ಜನರಿಗೆ ಅನಿಸಿದೆ’ ಎಂದು ಅವರು ನೀಡಿದ ಸಮರ್ಥನೆ ಯಾರಿಗೂ ಸಮಾಧಾನ ತರಿಸಿಲ್ಲ. ಈ ಸಿನಿಮಾದಲ್ಲಿ ಕೃತಿ ಸನೋನ್​ ಅವರು ಸೀತೆಯ ಪಾತ್ರ ಮಾಡಿದ್ದಾರೆ.

‘ಆದಿಪುರುಷ್​’ ಸಿನಿಮಾದ ಬಜೆಟ್​ 500 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇಷ್ಟು ಖರ್ಚು ಮಾಡಿದ ಸಿನಿಮಾಗೆ ಗಲ್ಲಾಪೆಟ್ಟಿಗೆಯಲ್ಲಿ ಲಾಭ ಆಗಬೇಕು ಎಂದರೆ ಸುಲಭದ ಮಾತಲ್ಲ. ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:10 am, Thu, 13 October 22