ಬಾಬಾ ಸಿದ್ಧಿಕಿ ಹತ್ಯೆ ಬಳಿಕ ನಟ ಸಲ್ಮಾನ್​ ಖಾನ್​ಗೆ ವೈ ಪ್ಲಸ್​ ಭದ್ರತೆ

ನಟ ಸಲ್ಮಾನ್​ ಖಾನ್​ ಅವರಿಗೆ ಜೀವ ಬೆದರಿಕೆ ಇದೆ. ಬಾಬಾ ಸಿದ್ಧಿಕಿ ಕೊಲೆ ಬಳಿಕ ಆತಂಕ ಹೆಚ್ಚಿದೆ. ಆದ್ದರಿಂದ ಸಲ್ಮಾನ್​ ಖಾನ್​ ಅವರಿಗೆ ವೈ ಪ್ಲಸ್​ ಭದ್ರತೆ ಒದಗಿಸಲಾಗುತ್ತಿದೆ. ಎಷ್ಟೇ ಬೆದರಿಕೆ ಇದ್ದರೂ ಕೂಡ ಸಲ್ಮಾನ್​ ಖಾನ್​ ಅವರು ಬಾಬಾ ಸಿದ್ಧಿಕಿ ಅವರ ಫ್ಯಾಮಿಲಿ ಜೊತೆ ನಿಂತಿದ್ದಾರೆ. ಕಷ್ಟದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಸಲ್ಲು ಸಹಾಯ ಮಾಡುತ್ತಿದ್ದಾರೆ.

ಬಾಬಾ ಸಿದ್ಧಿಕಿ ಹತ್ಯೆ ಬಳಿಕ ನಟ ಸಲ್ಮಾನ್​ ಖಾನ್​ಗೆ ವೈ ಪ್ಲಸ್​ ಭದ್ರತೆ
ಸಲ್ಮಾನ್​ ಖಾನ್​

Updated on: Oct 15, 2024 | 4:00 PM

ಎನ್​ಸಿಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯಿಂದಾಗಿ ಮುಂಬೈ ಜನರಲ್ಲಿ ಆತಂಕ ಹೆಚ್ಚಾಗಿದೆ. ಅದರಲ್ಲೂ ಸೆಲೆಬ್ರಿಟಿಗಳಿಗೆ ಟೆನ್ಷನ್ ಜಾಸ್ತಿ ಆಗಿದೆ. ಸಲ್ಮಾನ್​ ಜೊತೆ ಬಾಬಾ ಸಿದ್ಧಿಕಿ ಅವರು ಆತ್ಮೀಯ ಒಡನಾಟ ಹೊಂದಿದ್ದರು. ಆ ಕಾರಣದಿಂದಲೇ ಅವರ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸಲ್ಮಾನ್ ಖಾನ್​ ಹತ್ಯೆಗೆ ಹಲವು ವರ್ಷಗಳಿಂದ ಸ್ಕೆಚ್​ ಹಾಕಿರುವ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ನಿಂದಲೇ ಬಾಬಾ ಸಿದ್ಧಿಕಿಯ ಮರ್ಡರ್​ ನಡೆದಿದೆ. ಹಾಗಾಗಿ ಸಲ್ಮಾನ್ ಖಾನ್ ಅವರಿಗೆ ಈಗ ವೈ ಪ್ಲಸ್​ ಭದ್ರತೆ ನೀಡಲಾಗುತ್ತಿದೆ.

ಸಲ್ಮಾನ್​ ಖಾನ್ ಅವರ ಸುತ್ತಲೂ ಪೊಲೀಸರ ತಂಡ ಇರಲಿದೆ. ಅವರು ಎಲ್ಲಿಯೇ ಹೋದರೂ ಭದ್ರತೆ ನೀಡಲಾಗುತ್ತದೆ. ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸುವ ತರಬೇತಿ ಪಡೆದಿರುವ ಕಾನ್ಸ್​ಟೇಬಲ್​ ಒಬ್ಬರು ಯಾವಾಗಲೂ ಸಲ್ಮಾನ್​ ಖಾನ್​ ಜೊತೆ ಇರಲಿದ್ದಾರೆ. ಅಲ್ಲದೇ ಸಲ್ಮಾನ್​ ಖಾನ್​ ಅವರ ಖಾಸಗಿ ಸೆಕ್ಯೂರಿಟಿಯನ್ನೂ ಹೆಚ್ಚಿಸಲಾಗಿದೆ. ಅವರ ನಿವಾಸದ ಎದುರು ಕೂಡ ಪೊಲೀಸ್​ ಪ್ರೊಟೆಕ್ಷನ್​ ನೀಡಲಾಗುತ್ತಿದೆ.

ಈ ಮೊದಲ ಸಲ್ಮಾನ್​ ಖಾನ್​ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಅಲ್ಲದೇ, ಅವರ ಫಾರ್ಮ್​ಹೌಸ್​ಗೆ ನುಗ್ಗಲು ಕಿಡಿಗೇಡಿಗಳು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಫಾರ್ಮ್​ಹೌಸ್​ಗೂ ಭದ್ರತೆ ಒದಗಿಸಲಾಗಿದೆ. ಸದ್ಯಕ್ಕೆ ಯಾರನ್ನೂ ಕೂಡ ಭೇಟಿ ಮಾಡಬಾರದು ಎಂದು ಸಲ್ಮಾನ್​ ಖಾನ್​ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು

ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್​ ಖಾನ್​ ಅವರು ಆಪ್ತವಾಗಿದ್ದರು. ಸಲ್ಮಾನ್​ ಖಾನ್​ಗೆ ಸಹಾಯ ಮಾಡುವ ವ್ಯಕ್ತಿ ಎಂಬ ಕಾರಣಕ್ಕೆ ಬಾಬಾ ಸಿದ್ಧಿಕಿ ಅವರನ್ನು ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನವರು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಲ್ಮಾನ್​ ಖಾನ್​ಗೆ ಸಹಾಯ ಮಾಡುವ ಯಾವುದೇ ವ್ಯಕ್ತಿಗೆ ಇದೇ ಗತಿ ಆಗಲಿದೆ ಎಂದು ಲಾರೆನ್ಸ್​ ಬಿಷ್ಣೋಯ್​ ಗಾಂಗ್​ನವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us