ಸಿನಿಮಾ ಹಿಟ್ ಆಗುತ್ತಿದ್ದಂತೆ ಬಂತು ಅಹಾನ್ ಪಾಂಡೆ ಡೇಟಿಂಗ್ ವಿಚಾರ
ಅಹಾನ್ ಪಾಂಡೆ ಮತ್ತು ಶ್ರುತಿ ಚೌಹಾಣ್ ಅವರ ನಡುವಿನ ಡೇಟಿಂಗ್ ವದಂತಿಗಳು 'ಸೈಯಾರ' ಚಿತ್ರದ ಯಶಸ್ಸಿನ ನಂತರ ಹರಡುತ್ತಿವೆ. ಶ್ರುತಿ ಅವರು ಸಿನಿಮಾದ ಗೆಲುವಿಗೆ ಅಭಿನಂದಿಸಿ, 'ಐ ಲವ್ ಯು' ಎಂದು ಹೇಳಿದ್ದರು. ಆದರೆ, ಇಬ್ಬರೂ ಆಪ್ತ ಗೆಳೆಯರು ಎಂದು ಹೇಳಲಾಗುತ್ತಿದೆ. ಶ್ರುತಿ ಚೌಹಾಣ್ ಮಾಡೆಲ್ ಮತ್ತು ನಟಿ.

ಹೀರೋ ಹಾಗೂ ಹೀರೋಯಿನ್ಗಳು ಯಾರ ಜೊತೆ ಡೇಟ್ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳಲ್ಲಿ ಅನೇಕರಿಗೆ ಕುತೂಹಲ ಇರುತ್ತದೆ. ಅದರಲ್ಲೂ ಯುವ ಹೀರೋಗಳು ಈ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಗುತ್ತಾರೆ. ಈ ರೀತಿ ಸುದ್ದಿ ಆಗುತ್ತಿರುವವರಲ್ಲಿ ಅಹಾನ್ ಪಾಂಡೆ ಕೂಡ ಒಬ್ಬರು. ಅವರು ‘ಸೈಯಾರ’ (Saiyaara) ಚಿತ್ರದ ಗೆಲುವಿನ ಮೂಲಕ ಅಪಾರ ಕ್ರೇಜ್ ಪಡೆದರು ಮತ್ತು ಸಾಕಷ್ಟು ಸುದ್ದಿ ಆದರು. ಈಗ ಅವರು ಮಾಡೆಲ್ ಶ್ರುತಿ ಚೌಹಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
‘ಸೈಯಾರ’ ನೋಡಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ತಿಳಿಸುತ್ತಿದ್ದಾರೆ. ಈ ಪೈಕಿ ಶ್ರುತಿ ಚೌಹಾಣ್ ಕೂಡ ಒಬ್ಬರು. ‘ತನ್ನ ಜೀವನದುದ್ದಕ್ಕೂ ಕನಸು ಕಂಡ ಹುಡುಗನಿಗೆ, ಬೇರೆ ಯಾರೂ ನಂಬದಿದ್ದಾಗ ಇದರಲ್ಲಿ ನಂಬಿಕೆ ಇಟ್ಟ ಹುಡುಗನಿಗೆ, ಈ ಕ್ಷಣಕ್ಕಾಗಿ ತನ್ನೆಲ್ಲವನ್ನೂ ಅರ್ಪಿಸಿದ ಹುಡುಗನಿಗೆ. ಎಲ್ಲರಿಗಿಂತ ಹೆಚ್ಚು ಇದಕ್ಕೆ ಅರ್ಹನಾದವನಿಗೆ ಈ ಯಶಸ್ಸು’ ಎಂದು ಶ್ರುತಿ ಹೇಳಿದ್ದರು.
‘ಐ ಲವ್ ಯೂ. ನಿನ್ನ ಬಗ್ಗೆ ಹೆಮ್ಮೆ ಇದೆ. ನಾನು ಅಳುತ್ತಿದ್ದೇನೆ. ಈ ರೀತಿಯ ಯಶಸ್ಸುಗಳು ನಿನಗೆ ಸಿಗುತ್ತಿರಲಿ’ ಎಂದು ಅವರು ಹಾರೈಸಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರಿಬ್ಬರೂ ಪ್ರೀತಿ ಮಾಡುತ್ತಿರುವರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ಆದರೆ, ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ. ಅಹಾನ್ ಪಾಂಡೆ ಹಾಗೂ ಶ್ರುತಿ ಚೌಹಾಣ್ ಮಧ್ಯೆ ಒಳ್ಳೆಯ ಗೆಳೆತನ ಇದೆ ಅಷ್ಟೇಯಂತೆ. ಹೀಗಾಗಿ, ಆಪ್ತತೆಯಲ್ಲಿ ಅವರು ಲವ್ ಯೂ ಎಂದೆಲ್ಲ ಹೇಳಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಮಂಗಳವಾರದ ‘ಸೈಯಾರ’ ಕಲೆಕ್ಷನ್ಗೆ ‘ಪಠಾಣ್’ ದಾಖಲೆಯೇ ಉಡೀಸ್
ಶ್ರುತಿ ಚೌಹಾಣ್ ಅವರು ಜೈಪುರದವರು. ಅವರು ಮಾಡೆಲ್ ಹಾಗೂ ನಟಿ. ಅವರು ‘ಗಲ್ಲಿ ಬಾಯ್’ ಚಿತ್ರದಲ್ಲಿ ಮಾಯಾ ಹೆಸರಿನ ಪಾತ್ರ ಮಾಡಿದ್ದರು. ಅವರು ‘ಹಧ್ ಸೇ’ ಹೆಸರಿನ ವಿಡಿಯೋ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಪ್ರೀತಿ-ಪ್ರೇಮದ ವಿಚಾರದಲ್ಲಿ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಒಂದೊಳ್ಳೆಯ ಗೆಲುವು ಸಿಗಲಿ ಎಂದು ಚಾತಕ ಪಕ್ಷಿಯ ರೀತಿ ಕಾಯುತ್ತಿದ್ದಾರೆ. ಸದ್ಯ ‘ಸೈಯಾರ’ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







