ನಟಿ ಐಶ್ವರ್ಯಾ ರೈ (Aishwarya Rai Bachchan) ಹಾಗೂ ನಟ ಅಭಿಷೇಕ್ ಬಚ್ಚನ್ ದಂಪತಿಯ ಪುತ್ರಿ ಆರಾಧ್ಯಾ ಬಚ್ಚನ್ (Aaradhya Bachchan) ಇಂದು (ನ.16) 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ. ಆಕೆಯ ಜನ್ಮದಿನದ ಪ್ರಯುಕ್ತ ಐಶ್ವರ್ಯಾ ರೈ ಅವರು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಮಗಳ ತುಟಿಗೆ ಸಿಹಿ ಮುತ್ತು ನೀಡುವ ಮೂಲಕ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ಫೋಟೋವನ್ನು ಇಷ್ಟಪಟ್ಟಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ತಕರಾರು ತೆಗೆದಿದ್ದಾರೆ. ಈ ರೀತಿ ಕಿಸ್ ಮಾಡುವುದು ಸರಿಯಲ್ಲ ಎಂದು ಒಂದಷ್ಟು ಮಂದಿ ಕೊಂಕು ನುಡಿದಿದ್ದಾರೆ. ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅಭಿಮಾನಿಗಳು ಐಶ್ವರ್ಯಾ ರೈ (Aishwarya Rai) ಪರ ನಿಂತಿದ್ದಾರೆ.
‘ನನ್ನ ಪ್ರೀತಿ.. ನನ್ನ ಜೀವನ.. ನನ್ನ ಆರಾಧ್ಯ.. ಐ ಲವ್ ಯೂ’ ಎಂದು ಈ ಫೋಟೋಗೆ ಐಶ್ವರ್ಯಾ ರೈ ಕ್ಯಾಪ್ಷನ್ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋ ವೈರಲ್ ಆಗಿದೆ. ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಕಮೆಂಟ್ಗಳ ಮೂಲಕ ನೆಟ್ಟಿಗರು ಬಗೆಬಗೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊವಿಡ್ ಇನ್ನೂ ಪೂರ್ತಿ ಮಾಯವಾಗಿಲ್ಲ. ಆದ್ದರಿಂದ ಈ ರೀತಿ ತುಟಿಗೆ ಮುತ್ತು ಕೊಡುವುದು ಸರಿಯಲ್ಲ ಎಂದು ಕೆಲವರು ತಕರಾರು ತೆಗೆದಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಅವರು ಎಲ್ಲೇ ಹೋದರೂ ಪುತ್ರಿ ಆರಾಧ್ಯಾಳನ್ನು ಕರೆದುಕೊಂಡು ಹೋಗುತ್ತಾರೆ. ಯಾವುದೇ ಕಾರ್ಯಕ್ರಮವಿರಲಿ, ಸಿನಿಮಾ-ಜಾಹೀರಾತುಗಳ ಶೂಟಿಂಗ್ ಇರಲಿ, ವಿದೇಶಿ ಪ್ರವಾಸ ಇರಲಿ.. ಐಶ್ವರ್ಯಾ ರೈ ಜೊತೆ ಆರಾಧ್ಯಾ ಇದ್ದೇ ಇರುತ್ತಾಳೆ. ಅಷ್ಟರಮಟ್ಟಿಗೆ ಮಗಳ ಬಗ್ಗೆ ಐಶ್ ಪ್ರೀತಿ ತೋರುತ್ತಾರೆ. ಮದುವೆ-ಮಗು ಆದ ಬಳಿಕ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
2007ರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮದುವೆ ನಡೆಯಿತು. 2011ರ ನವೆಂಬರ್ 16ರಂದು ಆರಾಧ್ಯಾ ಜನಿಸಿದಳು. ಆಕೆಯ 11ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಆರಾಧ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಪಾಲಿಗೆ 2022ರ ವರ್ಷ ವಿಶೇಷವಾಗಿದೆ. ಈ ವರ್ಷ ಅವರು ನಟಿಸಿದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಗಳಿಸಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದರಿಂದ ಐಶ್ವರ್ಯಾ ಅವರು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Wed, 16 November 22