ಇನ್ಸ್ಟಾಗ್ರಾಮ್ನಲ್ಲಿ ಐಶ್ವರ್ಯಾ ರೈ ಫಾಲೋ ಮಾಡ್ತಿರೋದು ಈ ಒಬ್ಬರನ್ನ ಮಾತ್ರ
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಬರುತ್ತಿತ್ತು. ಅಭಿಷೇಕ್ ಬಚ್ಚನ್ ಅವರಿಂದ ದೂರ ಆಗಿ ಐಶ್ವರ್ಯಾ ರೈ ವಾಸಿಸುತ್ತಿದ್ದಾರೆ ಮತ್ತು ಶೀಘ್ರವೇ ಇವರು ಡಿವೋರ್ಸ್ ಪಡೆಯುತ್ತಾರೆ ಎನ್ನುವ ವಿಚಾರವೂ ಹರಿದಾಡಿತ್ತು. ಈ ವದಂತಿಗೆ ಬ್ರೇಕ್ ಬಿದ್ದಿದೆ.

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ವಿರಸ ಉಂಟಾಗಿದೆ ಎನ್ನುವ ಸುದ್ದಿ ಜೋರಾಗಿತ್ತು. ಆದರೆ, ಈಗ ಆ ಸುದ್ದಿ ತಣ್ಣಗಾಗಿದೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಒಟ್ಟಾಗಿ ಇದ್ದಾರೆ. ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ವದಂತಿಗೆ ತೆರೆ ಎಳೆದಿದ್ದರು. ಈ ಮಧ್ಯೆ ಅವರ ಇನ್ಸ್ಟಾಗ್ರಾಮ್ ಖಾತೆ ಬಗ್ಗೆ ಚರ್ಚೆ ನಡೆದಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡ್ತಿರೋದು ಒಬ್ಬರನ್ನು ಮಾತ್ರ ಅನ್ನೋದು ವಿಶೇಷ.
ಐಶ್ವರ್ಯಾ ರೈ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಟನೆಯಲ್ಲಿ ಬ್ಯುಸಿ ಇದ್ದ ಹೊರತಾಗಿಯೂ ಇನ್ಸ್ಟಾಗ್ರಾಮ್ಗೆ ಕಾಲು ಇಟ್ಟಿರಲಿಲ್ಲ. ಅವರು ನಂತರ ಸಾಮಾಜಿಕ ಖಾತೆ ತೆರೆದರು. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 1.46 ಕೋಟಿ ಅಂದರೆ 14.6 ಮಿಲಿಯನ್ ಹಿಂಬಾಲಕರು ಇದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡ್ತಿರೋದು ಒಬ್ಬರನ್ನು ಮಾತ್ರ.
ಹೌದು, ಐಶ್ವರ್ಯಾ ರೈ ಅವರು ಇನ್ಸ್ಟಾಗ್ರಾಮ್ನಲ್ಲಿ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅದುವೇ ಅಭಿಷೇಕ್ ಬಚ್ಚನ್. ತಮ್ಮ ಪತಿಯನ್ನು ಐಶ್ವರ್ಯಾ ಇನ್ಸ್ಟಾದಲ್ಲಿ ಫಾಲೋ ಮಾಡುವ ಮೂಲಕ ಅವರ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅವರನ್ನು ಹೊರತುಪಡಿಸಿ ಇನ್ಯಾರನ್ನೂ ಐಶ್ವರ್ಯಾ ಫಾಲೋ ಮಾಡುತ್ತಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋನ ಐಶ್ವರ್ಯಾ ಹಂಚಿಕೊಂಡು ಪತಿಗೆ ವಿಶ್ ಮಾಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಐಶ್ವರ್ಯಾ ರೈ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಅಭಿಮಾನಿ ಬಳಗ ಯಾವಾಗಲೂ ಐಶ್ವರ್ಯಾ ಹಾಗೂ ಅಭಿಷೇಕ್ನ ಒಟ್ಟಾಗಿ ನೋಡಲು ಬಯಸುತ್ತದೆ. ಹೀಗಿರುವಾಗಲೇ ಐಶ್ವರ್ಯಾ ಹಾಗೂ ಅಭಿಷೇಕ್ ದೂರ ಆದರು ಎನ್ನುವ ವದಂತಿ ಹುಟ್ಟಿಕೊಂಡಿತ್ತು. ಇದನ್ನು ಇವರು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ: ಬಾಲ್ಯದ ಫೋಟೋ ಹಂಚಿಕೊಂಡು ಅಭಿಷೇಕ್ಗೆ ಬರ್ತ್ಡೇ ವಿಶ್ ಮಾಡಿದ ಐಶ್ವರ್ಯಾ
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಸಿನಿಮಾ ರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಐಶ್ವರ್ಯಾ ರೈ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಅತ್ತ ಅಭಿಷೇಕ್ ಬಚ್ಚನ್ ಅವರು ಒಪ್ಪಿಕೊಂಡ ಸಿನಿಮಾಗಳು ಯಾವುದೂ ಹಿಟ್ ಆಗುತ್ತಿಲ್ಲ. ಈಗ ಶಾರುಖ್ ಖಾನ್ ಹಾಗೂ ಅವರ ಮಗಳು ಸುಹಾನಾ ಖಾನ್ ನಟಿಸುತ್ತಿರುವ ಸಿನಿಮಾಗೆ ಅಭಿಷೇಕ್ ವಿಲನ್ ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.