ಐಶ್ವರ್ಯಾ ರೈ ಜನ್ಮದಿನ: ಪತಿ ಅಭಿಷೇಕ್​ಗಿಂತಲೂ ಶ್ರೀಮಂತೆ ಈ ನಟಿ

Aishwarya Rai: ಐಶ್ವರ್ಯಾ ರೈ ಹುಟ್ಟುಹಬ್ಬ ಇಂದು. ಅಂದಹಾಗೆ ಐಶ್ವರ್ಯಾ ರೈ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೆ? ಪತಿ ಅಭಿಷೇಕ್ ಬಚ್ಚನ್​ಗಿಂತಲೂ ಹೆಚ್ಚು ಶ್ರೀಮಂತೆ ಐಶ್ವರ್ಯಾ ರೈ. ಅವರ ಆಸ್ತಿ, ಸಂಭಾವನೆ ಇನ್ನಿತರೆ ಮಾಹಿತಿಗಳು ಇಲ್ಲಿವೆ.

ಐಶ್ವರ್ಯಾ ರೈ ಜನ್ಮದಿನ: ಪತಿ ಅಭಿಷೇಕ್​ಗಿಂತಲೂ ಶ್ರೀಮಂತೆ ಈ ನಟಿ
Updated By: ಮಂಜುನಾಥ ಸಿ.

Updated on: Nov 01, 2024 | 10:19 AM

ಐಶ್ವರ್ಯಾ ರೈ ಅವರಿಗೆ ಇಂದು (ನವೆಂಬರ್ 1) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಎಂಟರ್ಟೇನ್ಮೆಂಟ್ ಇಂಡಸ್ಟ್ರಿಯಲ್ಲಿ ಅವರು ಮಾಡಿದ ದಾಖಲೆಗಳು ಹಲವು. ಅವರಿಗೆ ಪತಿ ಅಭಿಷೇಕ್ ಬಚ್ಚನ್ ಕಡೆಯಿಂದ ಶುಭಾಶಯ ಬರುತ್ತದೆಯೋ ಅಥವಾ ಇಲ್ಲವೋ ಎಂಬುದರ ಆಧಾರದ ಮೇಲೆ ಅವರಿಬ್ಬರೂ ದೂರ ಆಗಿದ್ದಾರಾ ಅಥವಾ ಇಲ್ಲವ ಎಂಬುದು ಗೊತ್ತಾಗುತ್ತದೆ. ಐಶ್ವರ್ಯಾ ಅವರು ಅನೇಕ ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅವರು ಭಾರತದ ಶ್ರೀಮಂತ ನಟಿಯರಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ.

ಐಶ್ವರ್ಯಾ ರೈ ಅವರು ಇತ್ತೀಚೆಗೆ ನಟನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಹಾಗಂತ ಅವರಿಗೆ ಬರುತ್ತಿರುವ ಆದಾಯ ಕಡಿಮೆ ಆಗಿಲ್ಲ. ಅವರು ತಮ್ಮದೇ ಆದ ಉದ್ಯಮ ಹೊಂದಿದ್ದಾರೆ. ಐಶ್ವರ್ಯಾ ಅನೇಕ ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಇದರಿಂದ ಅವರಿಗೆ ಸಾಕಷ್ಟು ಹಣ ಬರುತ್ತದೆ. ಅವರ ಆಸ್ತಿ ಬರೋಬ್ಬರಿ 800 ಕೋಟಿ ರೂಪಾಯಿ. ಅಭಿಷೇಕ್ ಬಚ್ಚನ್ ಅವರ ಆಸ್ತಿ ಕೇವಲ 280 ಕೋಟಿ ರೂಪಾಯಿ. ಐಶ್ವರ್ಯಾ ಆಸ್ತಿ 800 ಕೋಟಿ ರೂಪಾಯಿ ದಾಟಿದೆ. ಅಂದರೆ, ಐಶ್ವರ್ಯಾ ಅವರು ಪತಿಗಿಂತ ಸುಮಾರು 500 ಕೋಟಿ ರೂಪಾಯಿ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ಬಾಲಿವುಡ್ನ ಯಶಸ್ವಿ ಉದ್ಯಮಿಗಳಲ್ಲಿ ಐಶ್ವರ್ಯಾ ಹೆಸರು ಮುಂಚೂಣಿಯಲ್ಲಿದೆ. ಅವರು ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎನಿಸಿಕೊಂಡಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಪಡೆದಿದ್ದಾರೆ. ಅವರು ಕೊನೆಯದಾಗಿ ನಟಿಸಿದ್ದು ‘ಪೊನ್ನಿಯಿನ್ ಸೆಲ್ವನ್’ ಹಾಗೂ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ. ಈ ಸಿನಿಮಾ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ.

ಇದನ್ನೂ ಓದಿ:ಐಶ್ವರ್ಯಾ ರೈ ಹಾಡಿನ ಡ್ಯಾನ್ಸ್ ಕಾಪಿ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಕೃತಿ ಸನೋನ್

ಐಶ್ವರ್ಯಾ ಅವರು ಪ್ರತಿ ಬ್ರ್ಯಾಂಡ್ಗಳ ಪ್ರಚಾರಕ್ಕೆ 6-7 ಕೋಟಿ ರೂಪಾಯಿ ಪಡೆಯುತ್ತಾರೆ. ಅವರ ಕೈಯಲ್ಲಿ ಅನೇಕ ಬ್ರ್ಯಾಂಡ್ಗಳು ಇವೆ. ಅವರು ಹೆಲ್ತ್ ಕಂಪನಿ ಒಂದಕ್ಕೆ 2021ರಲ್ಲಿ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಗೆ ಅವರು 1 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು.

ಐಶ್ವರ್ಯಾ ರೈ ಅವರು ಮುಂಬೈನಲ್ಲಿ ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಅವರು ಜುಹುದಲ್ಲಿ ಮನೆ ಹೊಂದಿದ್ದಾರೆ. ದುಬೈನಲ್ಲಿ ವಿಲ್ಲಾ ಹೊಂದಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಲಕ್ಷುರಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಐಶ್ವರ್ಯಾ ಅವರ ಬಳಿ ಹಲವು ಐಷಾರಾಮಿ ಕಾರುಗಳು ಕೂಡ ಇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ