ಗೆಲುವಿನ ಬೆನ್ನಲ್ಲೇ ‘ಶೈತಾನ್’ ಚಿತ್ರಕ್ಕೆ ಸೀಕ್ವೆಲ್ ಮಾಡಲು ಮುಂದಾದ ಅಜಯ್ ದೇವಗನ್

| Updated By: ರಾಜೇಶ್ ದುಗ್ಗುಮನೆ

Updated on: Mar 28, 2024 | 8:00 AM

‘ಶೈತಾನ್’ ಸಿನಿಮಾ ವಿಶ್ವಾದ್ಯಂತ ಈ ಚಿತ್ರ 187 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದೆ. ಬ್ಲ್ಯಾಕ್ ಮ್ಯಾಜಿಕ್ ಕಥೆ ಇಟ್ಟುಕೊಂಡು ಮಾಡಿದ ಈ ಸಿನಿಮಾ ಜನರಿಗೆ ಸಖತ್ ಇಷ್ಟ ಆಗಿದೆ. ಹೀಗಾಗಿ, ಸೀಕ್ವೆಲ್ ಆಲೋಚನೆ ತಂಡಕ್ಕೆ ಮೂಡಿದೆ.

ಗೆಲುವಿನ ಬೆನ್ನಲ್ಲೇ ‘ಶೈತಾನ್’ ಚಿತ್ರಕ್ಕೆ ಸೀಕ್ವೆಲ್ ಮಾಡಲು ಮುಂದಾದ ಅಜಯ್ ದೇವಗನ್
ಶೈತಾನ್ ತಂಡ
Follow us on

ಅಜಯ್ ದೇವಗನ್, ಆರ್​. ಮಾಧವನ್ ಹಾಗೂ ಜ್ಯೋತಿಕಾ ನಟನೆಯ ‘ಶೈತಾನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇದು ಗುಜರಾತಿ ಭಾಷೆಯ ‘ವಶ್’ ಚಿತ್ರದ ಹಿಂದಿ ರಿಮೇಕ್. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ನಿರ್ಮಾಪಕ ಅಜಯ್ ದೇವಗನ್ (Ajay Devgn) ಮುಂದಾಗಿದ್ದಾರೆ. ಈ ಕುರಿತು ಅವರು ನಿರ್ದೇಶಕ ವಿಕಾಸ್ ಬಹ್ಲ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸೀಕ್ವೆಲ್ ಟ್ರೆಂಡ್ ಜೋರಾಗಿರುವುದರಿಂದ ಅಜಯ್ ದೇವಗನ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

2023ರಲ್ಲಿ ‘ವಶ್’ ಸಿನಿಮಾ ರಿಲೀಸ್ ಆಯಿತು. ಇದನ್ನು ರಿಮೇಕ್ ಮಾಡಲು ಅಜಯ್ ದೇವಗನ್ ಅವರು ಮುಂದಾದರು. ಅದರ ರಿಮೇಕ್ ಹಕ್ಕು ಖರೀದಿಸಿ ಸಿನಿಮಾ ಮಾಡಿದರು. ಮಾರ್ಚ್ 8ರಂದು ಬಿಡುಗಡೆ ಆದ ‘ಶೈತಾನ್’ ಪಾಸಿಟಿವ್ ರೆಸ್ಪಾನ್ಸ್ ಪಡೆದಿದೆ. ವಿಶ್ವಾದ್ಯಂತ ಈ ಚಿತ್ರ 187 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದೆ. ಬ್ಲ್ಯಾಕ್ ಮ್ಯಾಜಿಕ್ ಕಥೆ ಇಟ್ಟುಕೊಂಡು ಮಾಡಿದ ಈ ಸಿನಿಮಾ ಜನರಿಗೆ ಸಖತ್ ಇಷ್ಟ ಆಗಿದೆ. ಹೀಗಾಗಿ, ಸೀಕ್ವೆಲ್ ಆಲೋಚನೆ ತಂಡಕ್ಕೆ ಮೂಡಿದೆ.

ಗುಜರಾತಿ ಚಿತ್ರದಲ್ಲಿ ‘ವಶ್’ ಚಿತ್ರಕ್ಕೆ ಸೀಕ್ವೆಲ್ ಸದ್ಯ ಬಂದಿಲ್ಲ. ಆದರೆ, ಹಿಂದಿಯಲ್ಲಿ ಚಿತ್ರದ ಕಥೆ ಮುಂದುವರಿಸುವ ಆಲೋಚನೆ ತಂಡಕ್ಕೆ ಬಂದಿದೆ. ‘ಶೈತಾನ್ 2’ ಚಿತ್ರಕ್ಕೆ ಸದ್ಯ ಕೆಲಸಗಳು ನಡೆಯುತ್ತಿವೆ. ಅಜಯ್ ದೇವಗನ್, ಆರ್​ ಮಾಧವನ್, ಜ್ಯೋತಿಕಾ, ಜಾನಕಿ ಬೋದಿವಾಲಾ, ಆನಂದ್ ರಾಜ್ ತಂಡದಲ್ಲಿ ಮುಂದುವರಿಲಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ಪಾತ್ರಗಳು ಹೊಸದಾಗಿ ಸೇರ್ಪಡೆ ಆಗಲಿದ್ದು, ಆ ಬಳಿಕ ಶೂಟಿಂಗ್ ಆರಂಭ ಆಗಲಿದೆ.

‘ಶೈತಾನ್’ ಚಿತ್ರದಲ್ಲಿ ಮಾಟ-ಮಂತ್ರದ ವಿಚಾರ ಹೈಲೈಟ್ ಆಗಿತ್ತು. ಎರಡನೇ ಭಾಗದಲ್ಲೂ ಅದೇ ರೀತಿ ಕಥೆ ಇರಲಿದೆ. ತಂತ್ರ-ಮಂತ್ರಗಳಿಗೆ ಫೇಮಸ್ ಆದ ಮಹಾರಾಷ್ಟ್ರದ ಕೋಕಂ ರಾಜ್ಯದಲ್ಲಿನ ಬ್ಲ್ಯಾಕ್ ಮ್ಯಾಜಿಕ್ ವಿಚಾರವೇ ಎರಡನೇ ಪಾರ್ಟ್​ನಲ್ಲೂ ಹೈಲೈಟ್ ಆಗಲಿದೆ. ಮೊದಲ ಭಾಗದಲ್ಲಿ ಕುಟುಂಬವನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಆದರೆ, ಎರಡನೇ ಪಾರ್ಟ್​ನಲ್ಲಿ ಕಥೆ ಬೇರೆ ರೀತಿ ಮೂಡಿ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ಮೂರು ಪ್ರೇಮ ಪ್ರಕರಣ, ಆದರೂ ಟಬು ಮದುವೆ ಆಗಲಿಲ್ಲ; ಇದಕ್ಕೆಲ್ಲ ಅಜಯ್ ದೇವಗನ್ ಕಾರಣ ಎಂದಿದ್ದ ನಟಿ

ಅಜಯ್ ದೇವಗನ್ ನಟನೆಯ ಜೊತೆಗೆ ನಿರ್ಮಾಣದ ಮೂಲಕವೂ ಯಶಸ್ಸು ಕಂಡಿದ್ದಾರೆ. ಸ್ಥಳೀಯ ಭಾಷೆಯ ಸಿನಿಮಾಗಳನ್ನು ರಿಮೇಕ್ ಮಾಡಿ ಅವರು ಗೆಲುವು ಕಂಡಿದ್ದಾರೆ. ಈ ಮೊದಲು ಅವರು ತಮಿಳಿನ ‘ಖೈದಿ’ ಚಿತ್ರವನ್ನು ಹಿಂದಿಗೆ ‘ಭೋಲಾ’ ಹೆಸರಲ್ಲಿ ರಿಮೇಕ್ ಮಾಡಿದ್ದರು. ಆದರೆ, ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಇದಾದ ಬಳಿಕ ಅವರು ‘ಶೈತಾನ್’ ಸಿನಿಮಾ ನಿರ್ಮಾಣ ಮಾಡಿ ಗೆಲುವು ಕಂಡಿದ್ದಾರೆ. ಅವರ ನಟನೆಗೂ ಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾ ಥಿಯೇಟರ್​ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ