ಅಜಯ್ ದೇವಗನ್ ಇತ್ತೀಚೆಗೆ ಖಾಲಿ ಕುಳಿತ ಉದಾಹರಣೆಯೇ ಇಲ್ಲ. ಒಂದಿಲ್ಲೊಂದು ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದೇ ಇದ್ದಾರೆ. ಇನ್ನು, ಸಿನಿಮಾ ಆಯ್ಕೆಯಲ್ಲಿ ಅವರು ತುಂಬಾನೇ ಚ್ಯೂಸಿ. ಈ ಕಾರಣಕ್ಕೆ ಉತ್ತಮ ಸ್ಕ್ರಿಪ್ಟ್ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅಭಿಮಾನಿಗಳಿಗೆ ಅವರ ಕಡೆಯಿಂದ ಮತ್ತೊಂದು ಸುದ್ದಿ ಸಿಕ್ಕಿದೆ. ಅವರು ‘ದೃಶ್ಯಂ 2’ ಮಾಡೋಕೆ ರೆಡಿ ಆಗಿದ್ದಾರೆ.
ಮೋಹನ್ಲಾಲ್ ನಟನೆಯ ‘ದೃಶ್ಯಂ’ ಸಿನಿಮಾ 2013ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿದ್ದ ಈ ಸಿನಿಮಾದ ಸೀಕ್ವೆಲ್ ‘ದೃಶ್ಯಂ 2’ ಶೀರ್ಷಿಕೆಯಲ್ಲಿ ಈ ವರ್ಷ ತೆರೆಗೆ ಬಂದಿದೆ. ಕೊವಿಡ್ ಕಾರಣದಿಂದ ಚಿತ್ರಮಂದಿರ ಓಪನ್ ಆಗಿಲ್ಲ. ಹೀಗಾಗಿ, ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿತ್ತು. ಎಲ್ಲ ಕಡೆಗಳಿಂದ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ, ಈ ಮೊದಲು ದೃಶ್ಯಂ ರಿಮೇಕ್ ಮಾಡಿದ್ದ ಚಿತ್ರತಂಡ ‘ದೃಶ್ಯಂ 2’ ಮಾಡೋಕೆ ರೆಡಿ ಆಗಿದೆ.
‘ದೃಶ್ಯಂ’ ಚಿತ್ರದ ಹಿಂದಿ ರಿಮೇಕ್ನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದರು. ಈಗ ಬಾಲಿವುಡ್ನಲ್ಲಿ ಪಾರ್ಟ್ 2 ಬರುತ್ತಿದೆ. ಅದಕ್ಕೆ ಅಜಯ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ, ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ. ಕುಮಾರ್ ಪಾಟಕ್ ‘ದೃಶ್ಯಂ 2’ನ ರಿಮೇಕ್ ಹಕ್ಕನ್ನು ಪಡೆದಿದ್ದಾರೆ. ಇವರ ಮಗ ಅಭಿಷೇಕ್ ಪಾಟಕ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಮೊದಲ ಭಾಗವನ್ನು ನಿಶಿಕಾಂತ್ ಕಾಮತ್ ನಿರ್ದೇಶನ ಮಾಡಿದ್ದರು. ಆದರೆ, ಕಳೆದ ವರ್ಷ ಅವರು ನಿಧನ ಹೊಂದಿದರು. ಹೀಗಾಗಿ, ಬೇರೆ ನಿರ್ದೇಶಕರ ಆಯ್ಕೆ ಅನಿವಾರ್ಯವಾಗಿದೆ. ಈ ಕಾರಣಕ್ಕೆ ನಿರ್ಮಾಪಕರು ತಮ್ಮ ಮಗನನ್ನೇ ನಿರ್ದೇಶನಕ್ಕೆ ಇಳಿಸುವ ಆಲೋಚನೆಯಲ್ಲಿ ಇದ್ದಾರೆ. ಅಜಯ್ ದೇವಗನ್ ಜತೆ ಟಬು, ಶ್ರಿಯಾ ಶರಣ್, ಇಶಿಯಾ ದತ್ತ, ಮೃನಾಲ್ ಜಾಧವ್ ಮೊದಲಾದವರು ನಟಿಸುತ್ತಿದ್ದಾರೆ.
ಸದ್ಯ ಅಜಯ್ ಮೇಡೇ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ಗಾಗಿ ಅವರು ಮುಂದಿನ ತಿಂಗಳು ಮಾಸ್ಕೋಗೆ ತೆರಳಲಿದ್ದಾರೆ. ನಂತರ ಮೈದಾನ್ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಇದಾದ ನಂತರವೇ ಅವರು ‘ದೃಶ್ಯಂ 2’ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಚಿಕ್ಕ ಹುಡುಗನಿಂದ RRR ಚಿತ್ರದ ದೊಡ್ಡ ಸೀಕ್ರೆಟ್ ಬಯಲು; ಅಜಯ್ ದೇವಗನ್ ಪಾತ್ರದ ಗುಟ್ಟು ರಟ್ಟು
ಮಾರ್ವೆಲ್ ಸರಣಿಯ ಹೊಸ ಚಿತ್ರಕ್ಕೂ, ಅಜಯ್ ದೇವಗನ್ರ ‘ಜಿಗರ್’ ಚಿತ್ರಕ್ಕೂ ಸಾಮ್ಯತೆ ಕಂಡುಹಿಡಿದ ಅಭಿಮಾನಿಗಳು