ಮೊದಲ ದಲಿತ ಕ್ರಿಕೇಟಿಗನ ಬಗ್ಗೆ ಬಯೋಪಿಕ್; ಮುಖ್ಯಭೂಮಿಕೆಯಲ್ಲಿ ಅಜಯ್ ದೇವಗನ್

|

Updated on: May 31, 2024 | 1:02 PM

ಇತ್ತೀಚೆಗೆ ಬಯೋಪಿಕ್​ಗಳು ಹೆಚ್ಚೆಚ್ಚು ಸಿದ್ಧಗೊಳ್ಳುತ್ತಿವೆ. ನಿರ್ಮಾಪಕರು ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಖ್ಯಾತ ನಾಮರ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನ ನಡೆಯುತ್ತಿದೆ. ಈ ಪೈಕಿ ಕೆಲವು ಸಿನಿಮಾಗಳು ಗೆದ್ದು ಬೀಗಿವೆ. ಈಗ ಮೊದಲ ದಲಿತ ಕ್ರಿಕೆಟಿಗನ ಬಗ್ಗೆ ಸಿನಿಮಾ ರೆಡಿ ಆಗುತ್ತಿದೆ.

ಮೊದಲ ದಲಿತ ಕ್ರಿಕೇಟಿಗನ ಬಗ್ಗೆ ಬಯೋಪಿಕ್; ಮುಖ್ಯಭೂಮಿಕೆಯಲ್ಲಿ ಅಜಯ್ ದೇವಗನ್
ಅಜಯ್
Follow us on

ಅಜಯ್ ದೇವಗನ್ (Ajay Devgn) ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಭಿನ್ನತೆ ತೋರುತ್ತಿದ್ದಾರೆ. ಇತ್ತೀಚೆಗೆ ಅವರು ‘ಮೈದಾನ್’ ಸಿನಿಮಾ ಮೂಲಕ ಗಮನ ಸೆಳೆದಿದೆ. ಈ ಚಿತ್ರ ಅಂದುಕೊಂಡ ರೀತಿಯಲ್ಲಿ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿಲ್ಲ. ಆದರೆ, ಅಜಯ್ ದೇವಗನ್ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದರು. ಈಗ ಅವರ ಮತ್ತೊಂದು ಬಯೋಪಿಕ್ ಕೈಗೆತ್ತಿಕೊಂಡಿದ್ದಾರೆ. ಭಾರತದ ಮೊದಲ ದಲಿತ ಕ್ರಿಕೆಟಿಗ ಪಾಲ್ವಂಕರ್ ಬಾಲೂ ಅವರ ಬಯೋಪಿಕ್​ನಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ.

ಇತ್ತೀಚೆಗೆ ಬಯೋಪಿಕ್​ಗಳು ಹೆಚ್ಚೆಚ್ಚು ಸಿದ್ಧಗೊಳ್ಳುತ್ತಿವೆ. ನಿರ್ಮಾಪಕರು ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಖ್ಯಾತ ನಾಮರ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನ ನಡೆಯುತ್ತಿದೆ. ಈ ಪೈಕಿ ಕೆಲವು ಸಿನಿಮಾಗಳು ಗೆದ್ದು ಬೀಗಿವೆ. ಈಗ ಮೊದಲ ದಲಿತ ಕ್ರಿಕೆಟಿಗನ ಬಗ್ಗೆ ಸಿನಿಮಾ ಮಾಡುತ್ತಿರುವುದಕ್ಕೆ ಒಂದು ವರ್ಗದ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಅಜಯ್ ದೇವಗನ್ ಅವರ ನಟನೆಯ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಅನೆಕರು ನಂಬಿದ್ದಾರೆ.

ನಿರ್ಮಾಪಕಿ ಪ್ರೀತಿ ಸಿನ್ಹಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪಾಲ್ವಂಕರ್ ಬಾಲೂ ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತಿಗ್​ಮಂಶು ದುಲಿಯಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಮಚಂದ್ರ ಗುಹಾ ಬರೆದ ‘ಎ ಕಾರ್ನರ್ ಆಫ್ ಎ ಫಾರೆನ್ ಫೀಲ್ಡ್’ ಪುಸ್ತಕ ಆಧರಿಸಿ ಸಿನಿಮಾದ ಕಥೆ ಸಿದ್ಧವಾಗಿದೆ. ಈ ಚಿತ್ರದ ಶೂಟಿಂಗ್ ಈ ವರ್ಷದ ಕೊನೆಯಲ್ಲಿ ಆರಂಭ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ಮುಂಬೈ, ಲಂಡನ್​ನಲ್ಲಿ ಐಷಾರಾಮಿ ಬಂಗಲೆ; ಅಜಯ್ ದೇವಗನ್​​ ಒಟ್ಟೂ ಆಸ್ತಿ ಎಷ್ಟು ಕೋಟಿ?

ಈ ವರ್ಷದ ಕೊನೆಯಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗೋ ಸಾಧ್ಯತೆ ಇದೆ. ಪಾಲ್ವಂಕರ್ ಬಾಲೂ ಅವರು ದಲಿತ ಸಮುದಾಯದಲ್ಲಿ ಜನಿಸಿದರು. ಅವರು ಪುಣೆ ಕ್ರಿಕೆಟ್ ಕ್ಲಬ್​ನಲ್ಲಿ ಆರಂಭದಲ್ಲಿ ಗ್ರೌಂಡ್ ಕೀಪರ್ ಆಗಿದ್ದರು. ನಂತರ ಅವರು ಕ್ರಿಕೆಟರ್ ಆದರು. ಈ ಪ್ರಯಾಣದಲ್ಲಿ ಅವರು ಎಷ್ಟೊಂದು ಚಾಲೆಂಜ್​ಗಳನ್ನು ಎದುರಿಸಿದರು ಎನ್ನುವುದನ್ನು ಉಲ್ಲೇಖಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.