ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದ ‘ಶೈತಾನ್​’ ಸಿನಿಮಾ

|

Updated on: Mar 14, 2024 | 5:05 PM

‘ಶೈತಾನ್​’ ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್​ ಪ್ರತಿಕ್ರಿಯೆ ನೀಡಿದ್ದಾರೆ. ವಿಮರ್ಶಕರು ಕೂಡ ಈ ಚಿತ್ರಕ್ಕೆ ಉತ್ತಮ ಅಂಕ ನೀಡಿದ್ದಾರೆ. ಅಜಯ್​ ದೇವಗನ್​, ಆರ್​. ಮಾಧವನ್​ ಅವರ ಮುಖಾಮುಖಿ ಈ ಸಿನಿಮಾದಲ್ಲಿ ಆಗಿದೆ. ನಟಿ ಜ್ಯೋತಿಕಾ ಅವರಿಗೂ ಒಂದು ಪ್ರಮುಖ ಪಾತ್ರವಿದೆ. ಜಾನಕಿ ಬೋಡಿವಾಲಾ ಅವರ ನಟನೆ ಹೆಚ್ಚು ಹೈಲೈಟ್​ ಆಗಿದೆ.

ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದ ‘ಶೈತಾನ್​’ ಸಿನಿಮಾ
ಜಾನಕಿ ಬೋಡಿವಾಲಾ, ಆರ್​. ಮಾಧವನ್​, ಅಜಯ್​ ದೇವಗನ್​
Follow us on

ಹಾರರ್​ ಸಿನಿಮಾಗಳನ್ನು ಇಷ್ಟಪಡುವ ದೊಡ್ಡ ಪ್ರೇಕ್ಷಕರ ವರ್ಗವಿದೆ. ಅಂಥವರೆಲ್ಲ ಶೈತಾನ್​’ ಸಿನಿಮಾ (Shaitaan Movie) ನೋಡಿ ಎಂಜಾಯ್ ಮಾಡಿದ್ದಾರೆ. ಅಜಯ್​ ದೇವಗನ್​ (Ajay Devgn) ನಟನೆಯ ಈ ಸಿನಿಮಾದಲ್ಲಿ ಆರ್​. ಮಾಧವನ್​ ಅವರು ನೆಗೆಟಿವ್​ ಪಾತ್ರ ಮಾಡಿದ್ದಾರೆ. ಯುವತಿಯನ್ನು ವಶೀಕರಣ ಮಾಡುವ ಕಥೆ ಈ ಸಿನಿಮಾದಲ್ಲಿದೆ. ಕಳೆದ ಶುಕ್ರವಾರ (ಮಾರ್ಚ್​ 8) ಬಿಡುಗಡೆಯಾದ ಶೈತಾನ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ವಿಶ್ವಾದ್ಯಂತ ‘ಶೈತಾನ್​’ ಕಲೆಕ್ಷನ್​ (Shaitaan Box Office Collection) 100 ಕೋಟಿ ರೂಪಾಯಿಯಾಗಿದೆ ಎಂದು ವರದಿ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.

‘ಶೈತಾನ್​’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಹೈಪ್​ ಸೃಷ್ಟಿ ಮಾಡಿತ್ತು. ಟ್ರೇಲರ್​ ನೋಡಿ ಎಲ್ಲರೂ ವಾವ್​ ಎಂದಿದ್ದರು. ಇದು ಗುಜರಾತಿ ಭಾಷೆಯ ‘ವಶ್​’ ಸಿನಿಮಾದ ಬಾಲಿವುಡ್​ ರಿಮೇಕ್​. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ದೃಶ್ಯಂ’ ರೀತಿಯೇ ಅಜಯ್​ ದೇವಗನ್​ ಅವರು ‘ಶೈತಾನ್​’ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ.

ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಶೈತಾನ್​ ಕಲೆಕ್ಷನ್​ ವಿವರ:

ಮೊದಲ ದಿನ: 15.21 ಕೋಟಿ ರೂಪಾಯಿ.
ಎರಡನೇ ದಿನ: 19.18 ಕೋಟಿ ರೂಪಾಯಿ.
ಮೂರನೇ ದಿನ: 20.74 ಕೋಟಿ ರೂಪಾಯಿ.
ನಾಲ್ಕನೇ ದಿನ: 7.81 ಕೋಟಿ ರೂಪಾಯಿ.
ಐದನೇ ದಿನ: 6.27 ಕೋಟಿ ರೂಪಾಯಿ.

6ನೇ ದಿನವೂ ‘ಶೈತಾನ್​’ ಚಿತ್ರ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಈವರೆಗೂ ಭಾರತದಲ್ಲಿ ಈ ಸಿನಿಮಾದ ಗಳಿಕೆ 80 ಕೋಟಿ ರೂಪಾಯಿ ಆಗಿದೆ ಎಂದು ಹೇಳಲಾಗುತ್ತಿದೆ. ವಿದೇಶದಿಂದ 20 ಕೋಟಿ ರೂಪಾಯಿ ಆದಾಯ ಹರಿದುಬಂದಿರುವ ಬಗ್ಗೆ ವರದಿ ಆಗಿದೆ. ಎರಡೂ ಸೇರಿಸಿದರೆ ‘ಶೈತಾನ್​’ ಕಲೆಕ್ಷನ್​ 100 ಕೋಟಿ ರೂಪಾಯಿ ಗಡಿ ಮುಟ್ಟಿದೆ. ಈ ಸಿನಿಮಾಗೆ ವಿಕಾಸ್​ ಬಹ್ಲ್ ಅವರು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ನನಗೂ ದೆವ್ವದ​ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್​ ದೇವಗನ್​

‘ಶೈತಾನ್’ ಸಿನಿಮಾದಲ್ಲಿ ನಟಿ ಜಾನಕಿ ಬೋಡಿವಾಲಾ ಅವರು ಕಥಾನಾಯಕನ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆಗೆ ಹೆಚ್ಚು ಸ್ಕೋಪ್​ ಸಿಕ್ಕಿದೆ. ಜ್ಯೋತಿಕಾ ಕೂಡ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಅಬ್ಬರಿಸಿರುವ ಆರ್​. ಮಾಧವನ್​ ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.