ಸಿನಿಮಾ ಪ್ರಮೋಷನ್ಗಾಗಿ ಸಿಕ್ಕಾಪಟ್ಟೆ ಸರ್ಕಸ್ ಮಾಡಲಾಗುತ್ತದೆ. ಈಗಿನ ಕಾಲದಲ್ಲಿ ಹೇಗಾದರೂ ಕಷ್ಟಪಟ್ಟು ಒಂದು ಸಿನಿಮಾ ಮಾಡಬಹುದು. ಆದರೆ ಅದನ್ನು ಜನರಿಗೆ ತಲುಪಿಸುವುದು ನಿಜಕ್ಕೂ ಸವಾಲಿನ ಕೆಲಸ. ಹಾಗಾಗಿ ಇಷ್ಟೆಲ್ಲ ಕಸರತ್ತು ಮಾಡಬೇಕಾಗುತ್ತದೆ. ಅದಕ್ಕೆ ಬೆಸ್ಟ್ ಉದಾಹರಣೆಯೇ ಈ ಫೋಟೋ. ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಈ ಫೋಟೋದಲ್ಲಿ (Viral Photo) ಇಬ್ಬರು ಸ್ಟಾರ್ ನಟರು ಇದ್ದಾರೆ. ಬಾಲಿವುಡ್ನ (Bollywood) ಟಾಪ್ ಹೀರೋಗಳ ಪಟ್ಟಿಯಲ್ಲಿ ಅವರ ಹೆಸರು ಕೂಡ ಇದೆ. ಮೈಗೆ ಕೆಸರು ಮೆತ್ತಿಕೊಂಡು ನಿಂತಿರುವ ಆ ಇಬ್ಬರು ಖ್ಯಾತ ನಟರು (Bollywood Actors) ಯಾರೆಂಬುದು ಪತ್ತೆ ಹಚ್ಚಬೇಕು.
ಇದು ಬೇರೆ ಯಾರೂ ಅಲ್ಲ. ಹಿಂದಿ ಚಿತ್ರರಂಗದ ಜನಪ್ರಿಯ ನಟರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್! ನಟರ ಹೆಸರು ಹೇಳಿದ ನಂತರವೂ ಈ ಫೋಟೋದಲ್ಲಿ ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಕೂಡ ಒಂದು ಕಷ್ಟದ ಟಾಸ್ಕ್. ಯಾಕೆಂದರೆ, ಮೈಗೆಲ್ಲ ಕೆಸರು ಮೆತ್ತಿಕೊಂಡಿರುವ ಅವರನ್ನು ಗುರುತು ಹಿಡಿಯಲು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು.
ಫೋಟೋದಲ್ಲಿ ಎಡಗಡೆಯಿಂದ ಇರುವ ಮೂರನೆಯವರೇ ಅಕ್ಷಯ್ ಕುಮಾರ್. ಅವರ ಎಡಭಾಗದಲ್ಲಿ ನಿಂತಿರುವುದು ಟೈಗರ್ ಶ್ರಾಫ್. ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಕುಮಾರ್ ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಇದು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಕ್ಲಿಕ್ಕಿಸಿದ ಫೋಟೋ. ಒಂದು ಹಂತದ ಶೂಟಿಂಗ್ ಮುಗಿದಿದೆ ಎಂಬುದನ್ನು ಈ ಫೋಟೋ ಹಂಚಿಕೊಳ್ಳುವ ಮೂಲಕ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ಫ್ರೇಮ್ನಲ್ಲಿ ಸೂರ್ಯ, ಅಮಿತಾಭ್, ಅಕ್ಷಯ್ ಕುಮಾರ್; ಏನ್ ಸಮಾಚಾರ?
ಈ ವರ್ಷ ಈದ್ ಹಬ್ಬದ ಪ್ರಯುಕ್ತ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಬಿಡುಗಡೆ ಆಗಲಿದೆ. ಮುಂಬೈ, ಲಂಡನ್, ಸ್ಕಾಟ್ಲೆಂಡ್, ಅಬು ಧಾಬಿ, ಜೋರ್ಡನ್ ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಅಲಿ ಅಬ್ಬಾಸ್ ಜಾಫರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸೋನಾಕ್ಷಿ ಸಿನ್ಹಾ, ಪೃಥ್ವಿರಾಜ್ ಸುಕುಮಾರನ್ ಅವರು ಕೂಡ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ