‘ಕರೀನಾ ಕಪೂರ್ ಸಹವಾಸ ಮಾಡಬೇಡ’: ಸೈಫ್​ಗೆ ಎಚ್ಚರಿಕೆ ನೀಡಿದ್ದ ಅಕ್ಷಯ್ ಕುಮಾರ್

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಡೇಟಿಂಗ್ ಮಾಡಲು ಆರಂಭಿಸಿದ ವಿಷಯ ಅಕ್ಷಯ್ ಕುಮಾರ್​ ಅವರಿಗೆ ತಿಳಿದಿತ್ತು. ಆಗ ಅವರು ಸೈಫ್ ಅಲಿ ಖಾನ್​ಗೆ ಎಚ್ಚರಿಕೆ ನೀಡಿದ್ದರು. ಆಕೆಯಿಂದ ದೂರವಿರು ಎಂದು ಹೇಳಿದ್ದರು. ಆದರೆ ಅಕ್ಷಯ್ ಕುಮಾರ್ ಹೇಳಿದ ಮಾತನ್ನು ಸೈಫ್ ಅಲಿ ಖಾನ್ ಕೇಳಲಿಲ್ಲ. ಕರೀನಾ ಜೊತೆ ಅವರು ಡೇಟಿಂಗ್ ಮುಂದುವರಿಸಿದರು.

‘ಕರೀನಾ ಕಪೂರ್ ಸಹವಾಸ ಮಾಡಬೇಡ’: ಸೈಫ್​ಗೆ ಎಚ್ಚರಿಕೆ ನೀಡಿದ್ದ ಅಕ್ಷಯ್ ಕುಮಾರ್
Akshay Kumar, Saif Ali Khan, Kareena Kapoor

Updated on: Apr 25, 2025 | 7:43 PM

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ (Kareena Kapoor Khan) ಅವರು 2012ರಲ್ಲಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರು ‘ತಶನ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗ ಪ್ರೀತಿಯಲ್ಲಿ ಬಿದ್ದರು. ಆದರೆ ಅದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ಅಕ್ಷಯ್ ಕುಮಾರ್ (Akshay Kumar) ಅವರು ಸೈಫ್ ಅಲಿ ಖಾನ್​ಗೆ ಎಚ್ಚರಿಕೆ ನೀಡಿದ್ದರು. ‘ಕರೀನಾ ಕಪೂರ್ ಸಹವಾಸಕ್ಕೆ ಹೋಗಬೇಡ’ ಎಂದು ಸೈಫ್​ಗೆ ಅವರು ಬುದ್ಧಿಮಾತು ಹೇಳಿದ್ದರು. ಈ ವಿಚಾರವನ್ನು ಸ್ವತಃ ಕರೀನಾ ಕಪೂರ್ ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.

2022ರಲ್ಲಿ ಟ್ವಿಂಕಲ್ ಖನ್ನಾ ಜತೆ ಮಾತನಾಡುವಾಗ ಕರೀನಾ ಕಪೂರ್ ಅವರು ಕೆಲವು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದರು. ತಮ್ಮ ಮತ್ತು ಸೈಫ್ ಸಂಬಂಧ ಶುರುವಾಗವಾಗ ಅಕ್ಷಯ್ ಕುಮಾರ್ ಯಾವ ರೀತಿ ಅಭಿಪ್ರಾಯ ಹೊಂದಿದ್ದರು ಎಂಬುದನ್ನು ಕರೀನಾ ನೆನಪಿಸಿಕೊಂಡರು.

‘ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ಅವರು ಮಾತನಾಡುತ್ತಿದ್ದರು. ನಾನು ಮತ್ತು ಸೈಫ್ ಹತ್ತಿರ ಆಗುತ್ತಿದ್ದೇವೆ ಎಂಬುದು ಅಕ್ಷಯ್​ಗೆ ಗೊತ್ತಾಗಿತ್ತು. ಸೈಫ್ ಅವರನ್ನು ಬದಿಗೆ ಕರೆದುಕೊಂಡು ಹೋಗಿ ಅಕ್ಷಯ್ ಕುಮಾರ್ ಬುದ್ಧಿ ಹೇಳಿದರು. ಹುಷಾರಾಗಿರು, ಯಾಕೆಂದರೆ ಅವರು ಅಪಾಯಕಾರಿ ಹುಡುಗಿಯರು. ಅವರ ಕುಟುಂಬ ಕೂಡ ಅಪಾಯಕಾರಿ ಆಗಿದೆ. ಅವರ ಬಗ್ಗೆ ನನಗೆ ಗೊತ್ತು ಎಂದೆಲ್ಲ ಸೈಫ್​​ಗೆ ಅಕ್ಷಯ್ ಕುಮಾರ್ ಹೇಳಿದ್ದರು’ ಎಂದಿದ್ದಾರೆ ಕರೀನಾ ಕಪೂರ್.

ಇದನ್ನೂ ಓದಿ
80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
ರಾಜಮೌಳಿ ಅಂಥ ನಿರ್ದೇಶಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಅಕ್ಷಯ್ ಕುಮಾರ್?
57 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಸಂಪಾದಿಸಿದ ಆಸ್ತಿ ಎಷ್ಟು?
ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್ ಕುಮಾರ್

ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾಗೆ ನೀರಸ ಕಲೆಕ್ಷನ್; ಮತ್ತೆ ಆಸ್ತಿ ಮಾರಿಕೊಂಡ ನಟ

ಆದರೆ ಅಕ್ಷಯ್ ಕುಮಾರ್ ಹೇಳಿದ ಮಾತನ್ನು ಕೇಳುವ ಸ್ಥಿತಿಯಲ್ಲಿ ಸೈಫ್ ಅಲಿ ಖಾನ್ ಇರಲಿಲ್ಲ. ಕಡೆಗೂ ಅವರು ಕರೀನಾ ಜೊತೆ ಡೇಟಿಂಗ್ ಮಾಡಿದರು. ಒಬ್ಬರ ನಡುವೆ ಪ್ರೀತಿ ಹೆಚ್ಚಾಯಿತು. 2007ರಲ್ಲಿ ಸೈಫ್ ಅಲಿ ಖಾನ್ ಅವರು ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದರು. 2012ರಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗಲೂ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದಾರೆ.

ಸೈಫ್ ಅಲಿ ಖಾನ್​ಗೂ ಮೊದಲು ಕರೀನಾ ಕಪೂರ್ ಅವರು ಶಾಹಿದ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅವರಿಬ್ಬರು ಮದುವೆ ಆಗುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕಪ್ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:43 pm, Fri, 25 April 25