‘ನಾನು ಸೋತರೆ ಖುಷಿಪಡ್ತಾರೆ’; ಬಾಲಿವುಡ್​ ಮಂದಿಯ ಅಸಲಿ ಮುಖ ರಿವೀಲ್ ಮಾಡಿದ ಅಕ್ಷಯ್ ಕುಮಾರ್

| Updated By: ರಾಜೇಶ್ ದುಗ್ಗುಮನೆ

Updated on: Jul 13, 2024 | 8:56 AM

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಅಕ್ಷಯ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ವರ್ಷಕ್ಕೆ 3-4 ಸಿನಿಮಾಗಳನ್ನು ರಿಲೀಸ್ ಮಾಡುತ್ತಾರೆ. ಅವರು ಸತತ ಸೋಲು ಕಾಣುತ್ತಿದ್ದಾರೆ. ಸಿನಿಮಾಗಳು ಸೋಲುತ್ತಿದ್ದರೆ ಅದನ್ನು ಸಂಭ್ರಮಿಸುವ ವರ್ಗ ಬಾಲಿವುಡ್​ನಲ್ಲಿ ಇದೆಯಂತೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.  

‘ನಾನು ಸೋತರೆ ಖುಷಿಪಡ್ತಾರೆ’; ಬಾಲಿವುಡ್​ ಮಂದಿಯ ಅಸಲಿ ಮುಖ ರಿವೀಲ್ ಮಾಡಿದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Follow us on

ಅಕ್ಷಯ್ ಕುಮಾರ್ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಅವರು ಒಂದು ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ಅಕ್ಷಯ್ ಕುಮಾರ್ ಅವರಿಗೆ ಬಾಲಿವುಡ್​ನ ಪಾಲಿಟಿಕ್ಸ್ ಬಗ್ಗೆ ತಿಳಿದಿದೆ. ಇತ್ತೀಚಿನ ವರ್ಷಗಳಲ್ಲಿ 10 ಸಿನಿಮಾಗಳ ಪೈಕಿ ಅವರಿಗೆ ಗೆಲುವು ತಂದುಕೊಟ್ಟಿದ್ದು ಕೇವಲ 2 ಸಿನಿಮಾಗಳು. ಅವರ ಸಿನಿಮಾಗಳು ಸೋಲುತ್ತಿದ್ದರೆ ಅದನ್ನು ಸಂಭ್ರಮಿಸುವ ವರ್ಗ ಬಾಲಿವುಡ್​ನಲ್ಲಿ ಇದೆಯಂತೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಅಕ್ಷಯ್ ಕುಮಾರ್ ಅವರು 8 ಗಂಟೆ ಮಾತ್ರ ಶೂಟಿಂಗ್ ಮಾಡುತ್ತಾರೆ. ಇದಕ್ಕೆ ಕಾರಣ ಕುಟುಂಬಕ್ಕೆ ಸಮಯ ನೀಡಬೇಕು ಎಂಬುದು. ಇದನ್ನು ಕೆಲವರು ಟೀಕೆ ಮಾಡುತ್ತಾರೆ. ಅಕ್ಷಯ್​ಗೆ ಕಮಿಟ್​ಮೆಂಟ್ ಇಲ್ಲ ಎನ್ನುತ್ತಾರೆ. ‘ಯಾರು ತಪ್ಪು ಕಲ್ಪನೆಯನ್ನು ಹುಟ್ಟುಹಾಕಿದರು ಅನ್ನೋ ಬಗ್ಗೆ ನಾನು ಮಾತನಾಡಲ್ಲ. ನನ್ನನ್ನು ಇಷ್ಟಪಡದ ಯಾರೋ ಒಬ್ಬರು ಇದನ್ನು ಆರಂಭಿಸಿರುತ್ತಾರೆ. ನಾನು ಒಂದೇ ಸಲಕ್ಕೆ 17 ಸಿನಿಮಾಗಳನ್ನು ಮಾಡುತ್ತಿದ್ದೆ. ಅಕ್ಷಯ್ ಕುಮಾರ್ ಅವರಿಗೆ ಸಿನಿಮಾಗಳ ಶೂಟಿಂಗ್​ಗೆ ಹೆಚ್ಚು ಸಮಯ ಬೇಕಾಗಲ್ಲ, ಅವರು ಸರಿಯಾದ ಸಮಯಕ್ಕೆ ಬಂದು ಸರಿಯಾದ ಸಮಯಕ್ಕೆ ಹೋಗುತ್ತಾರೆ ಎಂದು ಈ ಮೊದಲು ಹೇಳುತ್ತಿದ್ದರು. ಈಗ ನನ್ನ ಸಿನಿಮಾ ಗೆಲುವು ಕಾಣುತ್ತಿಲ್ಲ. ನಾನು ಸಿನಿಮಾಗೆ ಸಮಯ ಕೊಡಲ್ಲ ಎಂದು ಹೇಳುತ್ತಾರೆ’ ಎಂದು ಅಕ್ಷಯ್ ಹೇಳಿದ್ದಾರೆ.

‘ನಾನು ನಿರ್ದೇಶಕರು ಹೇಳಿದ್ದನ್ನು ಮಾಡುತ್ತೇನೆ. ನನ್ನ ಸಿನಿಮಾ ಗೆಲುವು ಕಾಣದೇ ಇರುವುದನ್ನು ನೋಡಿ ಕೆಲವರು ಖುಷಿಪಟ್ಟಿದ್ದಾರೆ. ಅವರಿಗೆ ಈ ಬಗ್ಗೆ ಖುಷಿ ಇದೆ. 34-35 ವರ್ಷಗಳಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ಯಾರದ್ದೋ ಹೆಸರು ತೆಗೆದುಕೊಂಡು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವರನ್ನು ತುಳಿಯೋದು ಸರಿ ಅಲ್ಲ’ ಎಂದಿದ್ದಾರೆ ಅಕ್ಷಯ್.

‘ನಾನು ಜನರಿಗೂ ಇದನ್ನೇ ಹೇಳೋದು. ಯಾರನ್ನೂ ತುಳಿಯಬೇಡಿ. ನಾನು ರಾಜಕೀಯದಲ್ಲಿ, ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಅದನ್ನು ನೋಡುತ್ತೇನೆ. ಓರ್ವ ಹೀರೋ ಮತ್ತೋರ್ವ ಹೀರೋಗೆ ಬೈಯುತ್ತಾರೆ. ನಿರ್ದೇಶಕರು ಹೀರೋಗೆ ಬಯ್ಯುತ್ತಾರೆ. ಎಲ್ಲರೂ ಒಬ್ಬರಿಗೊಬ್ಬರು ಏಕೆ ಬೈಯ್ಯುತ್ತಾರೆ ಗೊತ್ತಿಲ್ಲ. ನಮ್ಮ ಶಕ್ತಿ ಸುಮ್ಮನೆ ವ್ಯರ್ಥವಾಗುತ್ತಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ತಮ್ಮಿಂದ ನಿರ್ಮಾಣ ಸಂಸ್ಥೆಗೆ ಭರ್ಜರಿ ನಷ್ಟ; ಅಕ್ಷಯ್ ಕುಮಾರ್​ಗೆ ಶುರುವಾಗಿದೆ ಚಿಂತೆ

ಅಕ್ಷಯ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಪ್ರತಿವರ್ಷ ಅವರ ನಟನೆಯ 3-4 ಚಿತ್ರಗಳು ರಿಲೀಸ್ ಆಗುತ್ತವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.