‘ಪತ್ನಿಯನ್ನು ಪ್ರೀತಿಸುತ್ತೇನೆ ಅನ್ನೋದು ಬಾಲಿವುಡ್ ಮಂದಿ ಹೇಳೋ ದೊಡ್ಡ ಸುಳ್ಳು’
ಸೆಲೆಬ್ರಿಟಿಗಳು ಪತ್ನಿಯನ್ನು ಬಿಟ್ಟು ಬೇರೆಯವರ ಜೊತೆ ಸುತ್ತಾಡುವ ಸುದ್ದಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಎಲ್ಲರೂ ಈ ರೀತಿ ಅಲ್ಲ. ಕೆಲವು ಹೀರೋಗಳಿಗೆ ಪತ್ನಿಯ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಆದರೆ, ಈ ಪ್ರೀತಿ ಎಷ್ಟು ನಿಜ ಅನ್ನೋ ಪ್ರಶ್ನೆ ಮೂಡುವಂಥ ಹೇಳಿಕೆಯನ್ನು ಅಜಯ್ ದೇವಗನ್ ಅವರು ಈ ಮೊದಲು ನೀಡಿದ್ದರು.
ಸೆಲೆಬ್ರಿಟಿಗಳು ಪತ್ನಿಯನ್ನು ಬಿಟ್ಟು ಬೇರೆಯವರ ಜೊತೆ ಸುತ್ತಾಡುವ ಸುದ್ದಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಎಲ್ಲರೂ ಈ ರೀತಿ ಅಲ್ಲ. ಕೆಲವು ಹೀರೋಗಳಿಗೆ ಪತ್ನಿಯ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಆದರೆ, ಈ ಪ್ರೀತಿ ಎಷ್ಟು ನಿಜ ಅನ್ನೋ ಪ್ರಶ್ನೆ ಮೂಡುವಂಥ ಹೇಳಿಕೆಯನ್ನು ಅಜಯ್ ದೇವಗನ್ ಅವರು ಈ ಮೊದಲು ನೀಡಿದ್ದರು. ಈ ಹೇಳಿಕೆ ಸಖತ್ ವೈರಲ್ ಆಗಿತ್ತು. ಸ್ವತಃ ಅಜಯ್ ದೇವಗನ್ ಪತ್ನಿ ಕಾಜೋಲ್ ಅವರು ಪತಿ ವಿರುದ್ಧ ಸಿಟ್ಟಾಗಿದ್ದರು. ಅಷ್ಟಕ್ಕೂ ಅವರು ನೀಡಿದ ಹೇಳಿಕೆ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಕಾಫಿ ವಿತ್ ಕರಣ್’ ಶೋಗೆ ಅಜಯ್ ದೇವಗನ್ ಹಾಗೂ ಕಾಜೋಲ್ ಅತಿಥಿಯಾಗಿ ಆಗಮಿಸಿದ್ದರು. ವಿವಾದಗಳ ಮೂಲಕವೇ ಸುದ್ದಿ ಆಗಿರೋ ಶೋ ಇದು. ವಿವಾದ ಆಗಲಿ ಎಂಬ ಕಾರಣದಿಂದಲೇ ಕರಣ್ ಅವರು ಪ್ರಶ್ನೆ ಕೇಳುತ್ತಿದ್ದಾರೇನೋ ಎಂದು ಕೆಲವರಿಗೆ ಅನಿಸಿದ್ದೂ ಇದೆ. ಅಜಯ್ ದೇವಗನ್ ಅವರಿಗೆ ಕರಣ್ ಅವರು ಒಂದು ಪ್ರಶ್ನೆ ಇಟ್ಟಿದ್ದರು. ಇದಕ್ಕೆ ಅಜಯ್ ಅವರು ಯಾವುದೇ ಭಯ ಇಲ್ಲದೆ ಉತ್ತರಿಸಿದ್ದರು.
‘ಸಿನಿಮಾ ರಂಗದ ಪ್ರತಿ ಹೀರೋ ತನ್ನ ಪತ್ನಿಗೆ ಹೇಳುವ ಸುಳ್ಳು ಯಾವುದು’ ಎಂದು ಅಜಯ್ ದೇವಗನ್ ಅವರಿಗೆ ಕರಣ್ ಜೋಹರ್ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಅಜಯ್, ‘ನನ್ನ ಪತ್ನಿಯನ್ನು ನಾನು ಪ್ರೀತಿಸುತ್ತೇನೆ’ ಎಂಬುದೇ ದೊಡ್ಡ ಸುಳ್ಳು ಎಂದರು. ಇದನ್ನು ಕೇಳಿ ಕಾಜೋಲ್ ಸಿಟ್ಟಾದರು. ‘ಮನೆಗೆ ಹೋಗಬೇಕೋ ಅಥವಾ ಬೇಡವೋ’ ಎಂದು ಸಣ್ಣದಾಗಿ ಗದರಿದರು. ಆಗ ಅಜಯ್ ದೇವಗನ್ ಅವರು ‘ನಾನು ನನ್ನ ಬಗ್ಗೆ ಮಾತನಾಡುತ್ತಿಲ್ಲ, ಇತರ ಹೀರೋಗಳ ಬಗ್ಗೆ ಮಾತನಾಡುತ್ತಿದ್ದೇನೆ’ ಎಂದರು. ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.
ಅಜಯ್ ದೇವಗನ್ ಹಾಗೂ ಕಾಜೋಲ್ ಅವರು ಪ್ರೀತಿಸಿ ಮದುವೆ ಆದವರು. ಹಲವು ವರ್ಷಗಳ ಕಾಲ ಈ ಜೋಡಿ ಸಂಸಾರ ನಡೆಸುತ್ತಾ ಬಂದಿದೆ. ಇವರಿಗೆ ಇಬ್ಬರ ಮಕ್ಕಳು. ಮಗಳು ನಿಸಾ ಅವರು ಆಗಾಗ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಮಗ ಯುಗ್ ಇನ್ನೂ ಚಿಕ್ಕವನು.
ಇದನ್ನೂ ಓದಿ: ಮೊದಲ ದಲಿತ ಕ್ರಿಕೇಟಿಗನ ಬಗ್ಗೆ ಬಯೋಪಿಕ್; ಮುಖ್ಯಭೂಮಿಕೆಯಲ್ಲಿ ಅಜಯ್ ದೇವಗನ್
ಸಿನಿಮಾ ವಿಚಾರಕ್ಕೆ ಬರೋದಾದರೆ ಅಜಯ್ ದೇವಗನ್ ನಟನೆಯ ‘ಶೈತಾನ್’ ಹಾಗೂ ‘ಮೈದಾನ್’ ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ. ‘ಮೈದಾನ್’ ಸಾಧಾರಣ ಎನಿಸಿಕೊಂಡರೆ ‘ಶೈತಾನ್’ ಚಿತ್ರ ಸೂಪರ್ ಹಿಟ್ ಆಗಿದೆ. ಸದ್ಯ ಅವರು ‘ಔರೋ ಮೇ ಕಹಾ ದಮ್ ಥಾ’, ‘ಸಿಂಗಂ ಅಗೇನ್’, ‘ರೈಡ್ 2’ ‘ದೇ ದೇ ಪ್ಯಾರ್ ದೇ 2’ ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.