ಅಕ್ಷಯ್ ಕುಮಾರ್ (Akshay Kumar) ಅವರಿಗೆ ಇತ್ತೀಚೆಗೆ ಯಾಕೋ ಅದೃಷ್ಟ ಕೈಕೊಟ್ಟಂತಿದೆ. ಒಂದು ಕಡೆ ಸಾಲು ಸಾಲು ಚಿತ್ರಗಳು ಸೋಲುತ್ತಿವೆ. ಮತ್ತೊಂದು ಕಡೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಟೀಕೆಗೆ ಒಳಗಾಗುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಅಕ್ಷಯ್ ಕುಮಾರ್ ವೃತ್ತಿಜೀವನಕ್ಕೆ ಸಾಕಷ್ಟು ಹಿನ್ನಡೆ ಆಗುತ್ತಿದೆ. ಈಗ ಅವರು ಖ್ಯಾತ ನಿರ್ಮಾಪಕನ ಸಿನಿಮಾದಿಂದ ಔಟ್ ಆಗಿದ್ದಾರೆ. ಇದು ಅಕ್ಷಯ್ ಕುಮಾರ್ ಅವರ ಅಭಿಮಾನಿಗಳ ಪಾಲಿಗೆ ಬೇಸರ ತರಿಸಿದೆ. ಹೀಗೆ ಆದರೆ ಮುಂದೇನು ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಆನಂದ್ ಎಲ್. ರೈ ಅವರು ‘ಗೋರ್ಖಾ’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮೇಜರ್ ಇಯನ್ ಕಾರ್ಡೊಜೋ ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿತ್ತು. ಅಕ್ಷಯ್ ಅವರು ಮೇಜರ್ ಇಯನ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈಗ ಅಕ್ಷಯ್ ಕುಮಾರ್ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ.
ಬಯೋಪಿಕ್ ಅನ್ನು ಮಾಡುವುದರಲ್ಲಿ ಅಕ್ಷಯ್ ಕುಮಾರ್ ಎತ್ತಿದ ಕೈ. ಅವರು ಹಲವು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ‘ಗೋರ್ಖಾ’ ಕೂಡ ಬಯೋಪಿಕ್ ಆಗಿತ್ತು. ಆದರೆ, ಈ ಚಿತ್ರ ಈಗ ನಿಂತಿದೆ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂದು ಆನಂದ್ ರೈ ಹೇಳಿದ್ದಾರೆ. ಆದರೆ, ನಿರ್ಮಾಪಕರೊಂದಿಗೆ ಮೂಡಿದ ವೈಮನಸ್ಸಿನಿಂದ ಅಕ್ಷಯ್ ಔಟ್ ಆಗಿದ್ದಾರೆ ಎಂದು ಸುದ್ದಿ ಆಗಿದೆ.
Dear @akshaykumar ji, as an ex Gorkha officer, my thanks to you for making this movie. However, details matter. Kindly get the Khukri right. The sharp edge is on the other side. It is not a sword. Khukri strikes from inner side of blade. Ref pic of Khukri att. Thanks. pic.twitter.com/LhtBlQ9UGn
— Maj Manik M Jolly,SM (@Manik_M_Jolly) October 16, 2021
ಆದರೆ, ಇದನ್ನು ಆನಂದ್ ಅವರು ತಳ್ಳಿ ಹಾಕಿದ್ದಾರೆ. ‘ಅಕ್ಷಯ್ ಕುಮಾರ್ ಅವರು ಸಿನಿಮಾದಿಂದ ಹೊರನಡೆದಿದ್ದಾರೆ ಎಂಬುದು ಸುಳ್ಳು. ಸಿನಿಮಾದ ಕಥೆಯ ಬಗ್ಗೆ ಅನೇಕ ಅನುಮಾಗಳು ಇದ್ದವು. ಆ ಬಗ್ಗೆ ಸ್ಪಷ್ಟನೆ ತೆಗೆದುಕೊಳ್ಳಬೇಕಿದೆ’ ಎಂದಿದ್ದಾರೆ ಆನಂದ್. ಬಯೋಪಿಕ್ ಮಾಡುವಾಗ ಹೆಚ್ಚು ಎಚ್ಚರಿಕೆ ಬೇಕು. ಸಣ್ಣ ಮಾಹಿತಿಯನ್ನು ತಿರುಚಿದರೂ ಸಾಕಷ್ಟು ಸಮಸ್ಯೆ ಆಗುತ್ತದೆ. ಈ ರಿಸ್ಕ್ ಬೇಡ ಎಂಬ ಕಾರಣಕ್ಕೆ ಅಕ್ಷಯ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಾಲು ಸಾಲು ಆಫರ್ ಕಳೆದುಕೊಂಡ ಅಕ್ಷಯ್ ಕುಮಾರ್; ದುರಾಸೆಯೇ ಕಾರಣ ಎಂದ ಫ್ಯಾನ್ಸ್
ಅಕ್ಷಯ್ ಕುಮಾರ್ ಕೈಯಿಂದ ಹಲವು ಸಿನಿಮಾಗಳು ಕೈತಪ್ಪುತ್ತಿವೆ. ‘ಭೂಲ್ ಭುಲಯ್ಯ’ ಸರಣಿಯಿಂದ ಅಕ್ಷಯ್ ಔಟ್ ಆದರು. ‘ಹೇರಾ ಫೇರಿ’ ಸರಣಿಯಲ್ಲೂ ಅಕ್ಷಯ್ ಇಲ್ಲ. ‘ವೆಲ್ಕಮ್’ ಸರಣಿಯಿಂದಲೂ ಅಕ್ಷಯ್ಗೆ ಗೇಟ್ ಪಾಸ್ ನೀಡಲಾಗಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ