Sonu Sood: ರೈಲ್ವೆ ಅಧಿಕಾರಿಗಳ ಬಳಿ ಕ್ಷಮೆ ಕೇಳಿದ ಸೋನು ಸೂದ್; ನಟ ಮಾಡಿದ ತಪ್ಪೇನು?
Sonu Sood Viral Video | Indian Railways: ಸೋನು ಸೂದ್ ಅವರ ವೈರಲ್ ವಿಡಿಯೋ ಕಂಡು ರೈಲ್ವೆ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದಾರೆ. ಅದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಟ್ವಿಟರ್ ಮೂಲಕ ಕ್ಷಮೆ ಕೇಳಿದ್ದಾರೆ.
![Sonu Sood: ರೈಲ್ವೆ ಅಧಿಕಾರಿಗಳ ಬಳಿ ಕ್ಷಮೆ ಕೇಳಿದ ಸೋನು ಸೂದ್; ನಟ ಮಾಡಿದ ತಪ್ಪೇನು?](https://images.tv9kannada.com/wp-content/uploads/2023/01/Sonu-Sood.jpg?w=1280)
ಬಹುಭಾಷಾ ನಟ ಸೋನು ಸೂದ್ (Sonu Sood) ಅವರು ‘ರಿಯಲ್ ಹೀರೋ’ ಎಂದೇ ಫೇಮಸ್ ಆಗಿದ್ದಾರೆ. ಅವರ ಕಾರ್ಯಗಳು ಅನೇಕರಿಗೆ ಸ್ಫೂರ್ತಿ ನೀಡುತ್ತವೆ. ಮೊದಲ ಲಾಕ್ ಡೌನ್ ಆರಂಭ ಆದಾಗಿನಿಂದ ಈ ತನಕವೂ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಂದ ನೆರವು ಪಡೆದವರಿಗೆ ಲೆಕ್ಕವೇ ಇಲ್ಲ. ಆದರೆ ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿದ ಅವರು ಒಂದು ತಪ್ಪು ಮಾಡಿದ್ದಾರೆ. ಅದಕ್ಕಾಗಿ ರೈಲ್ವೆ (Indian Railways) ಇಲಾಖೆಯ ಅಧಿಕಾರಿಗಳ ಬಳಿ ಅವರು ಕ್ಷಮೆ ಕೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ತಪ್ಪನ್ನು ಸೋನು ಸೂದ್ ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಸ್ಟೋರಿ ಓದಿ..
ಕೆಲವೇ ದಿನಗಳ ಹಿಂದೆ ಸೋನು ಸೂದ್ ಅವರು ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ರೈಲು ಬೋಗಿಯ ಮೆಟ್ಟಿಲಿನ ಸಮೀಪದಲ್ಲಿ ಅವರು ಕುಳಿತುಕೊಂಡಿದ್ದರು. ರೈಲು ಜೋರಾಗಿ ಚಲಿಸುತ್ತಿರುವಾಗ ತುದಿಗಾಲಿನಲ್ಲಿ ಕುಳಿತು ಅವರು ವಿಡಿಯೋಗೆ ಪೋಸ್ ನೀಡಿದ್ದರು. ಆ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಹಂಚಿಕೊಂಡಿದ್ದರು. ಅದಕ್ಕೆ ರೈಲ್ವೆ ಅಧಿಕಾರಿಗಳು ಈಗ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Graduate Chaiwali: ಟೀ ಮಾರುವ ‘ಪದವೀಧರೆ ಚಾಯ್ವಾಲಿ’ ಪ್ರಿಯಾಂಕಾ ಗುಪ್ತಾ ಕಣ್ಣೀರಿಗೆ ಕರಗಿದ ಸೋನು ಸೂದ್
‘ಸೋನು ಸೂದ್ ಅವರೇ, ಲಕ್ಷಾಂತರ ಜನರಿಗೆ ನೀವು ಮಾದರಿ ವ್ಯಕ್ತಿ ಆಗಿದ್ದೀರಿ. ರೈಲಿನ ಮೆಟ್ಟಿಲುಗಳಲ್ಲಿ ಕುಳಿತು ಪ್ರಯಾಣಿಸುವುದು ಆಪಾಯಕಾರಿ. ಇಂಥ ವಿಡಿಯೋ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡುತ್ತದೆ. ಈ ರೀತಿ ಮಾಡಬೇಡಿ. ಸುರಕ್ಷಿತ ಪ್ರಯಾಣವನ್ನು ಎಂಜಾಯ್ ಮಾಡಿ’ ಎಂದು ರೈಲ್ವೆ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಕ್ತದಲ್ಲಿ ಚಿತ್ರ ಬಿಡಿಸಿ ಸೋನು ಸೂದ್ಗೆ ನೀಡಿದ ಕಲಾವಿದ; ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್ ಅವರು ಕ್ಷಮೆ ಕೇಳಿದ್ದಾರೆ. ‘ನಾನು ಕ್ಷಮೆ ಕೇಳುತ್ತೇನೆ. ರೈಲಿನ ಬಾಗಿಲಿನಲ್ಲಿ ಜೀವನ ಕಳೆಯುವ ಲಕ್ಷಾಂತರ ಬಡ ಜನರ ಭಾವನೆಯನ್ನು ತಿಳಿದುಕೊಳ್ಳಲು ನಾನು ಅಲ್ಲಿ ಕುಳಿತೆ. ಈ ಸಂದೇಶಕ್ಕಾಗಿ ಮತ್ತು ರೈಲಿನಲ್ಲಿ ಹಲವು ವ್ಯವಸ್ಥೆ ಮಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
क्षमा प्रार्थी ? बस यूँ ही बैठ गया था देखने, कैसा महसूस करते होंगे वो लाखों ग़रीब जिनकी ज़िंदगी अभी भी ट्रेन के दरवाज़ों पे गुज़रती है। धन्यवाद इस संदेश के लिए और देश की रेल व्यवस्था बेहतर करने के लिए। ❤️? https://t.co/F4a4vKKhFy
— sonu sood (@SonuSood) January 5, 2023
ಜನರ ದೃಷ್ಟಿಯಲ್ಲಿ ಸೋನು ಸೂದ್ ಅವರು ರಿಯಲ್ ಹೀರೋ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಅವರು ಜನರ ಹೃದಯ ಗೆದ್ದರು. ಈಗಲೂ ತಮ್ಮ ಚಾರಿಟಿ ಫೌಂಡೇಷನ್ ಮೂಲಕ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ಇಮೇಜ್ ಬದಲಾಗಿದೆ. ಮೊದಲೆಲ್ಲ ವಿಲನ್ ಪಾತ್ರ ಮಾಡುತ್ತಿದ್ದ ಅವರು ಈಗ ಅಂಥ ಪಾತ್ರಗಳಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಅವರನ್ನು ನೆಗೆಟಿವ್ ಪಾತ್ರದಲ್ಲಿ ನೋಡಲು ಜನರು ಇಷ್ಟಪಡುತ್ತಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.