‘ಮಿಷನ್ ರಾಣಿಗಂಜ್’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿ ವಿಮರ್ಶೆ ತಿಳಿಸಿದ ಪ್ರೇಕ್ಷಕರು
ಟಿನು ಸುರೇಶ್ ದೇಸಾಯಿ ಅವರು ‘ಮಿಷನ್ ರಾಣಿಗಂಜ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 1989ರಲ್ಲಿ ರಾಣಿಗಂಜ್ ಕಲ್ಲಿದ್ದಲು ಗಣಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಗಣಿ ತಜ್ಞ ಜಸ್ವಂತ್ ಸಿಂಗ್ ಗಿಲ್ ಅವರ ಪಾತ್ರಕ್ಕೆ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟ್ವಿಟರ್ ವಿಮರ್ಶೆ ಇಲ್ಲಿದೆ..
ನಟ ಅಕ್ಷಯ್ ಕುಮಾರ್ (Akshay Kumar) ಅವರು ಪ್ರತಿ ಬಾರಿ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಕಥೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರಿಯಲ್ ಲೈಫ್ ಘಟನೆಗಳಿಂದ ಆಧರಿಸಿದ ಕಥೆಗಳಿಗೆ ಆದ್ಯತೆ ನೀಡಿದ್ದಾರೆ. ಇಂದು (ಅಕ್ಟೋಬರ್ 6) ಬಿಡುಗಡೆ ಆಗಿರುವ ‘ಮಿಷನ್ ರಾಣಿಗಂಜ್’ (Mission Raniganj) ಸಿನಿಮಾದಲ್ಲೂ ಅದು ಮುಂದುವರಿದಿದೆ. ನೈಜ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ಅವರಿಗೆ ಜೋಡಿಯಾಗಿ ಪರಿಣೀತಿ ಚೋಪ್ರಾ ನಟಿಸಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿಬಂದಿರುವ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ನೆಟ್ಟಿಗರ ವಿಮರ್ಶೆ (Mission Raniganj Twitter Review) ಇಲ್ಲಿದೆ ನೋಡಿ..
‘ಇದು ಒಳ್ಳೆಯ ಸಿನಿಮಾ’ ಎಂದು ಬಹುತೇಕ ಪ್ರೇಕ್ಷಕರು ಹೇಳುತ್ತಿದ್ದಾರೆ. ಕೆಲವರು 5ಕ್ಕೆ 4 ಸ್ಟಾರ್ ನೀಡಿದ್ದಾರೆ. ‘ಸಿನಿಮಾ ಹಿಟ್ ಆಗತ್ತೋ ಅಥವಾ ಫ್ಲಾಪ್ ಆಗತ್ತೋ ಎಂಬುದು ಮುಖ್ಯವಲ್ಲ. ಜನರು ಈ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಮೊದಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ’ ಎಂದು ಕೂಡ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
#OneWordReview: #MissionRaniganj: BRILLIANT. Rating: ⭐️⭐️⭐️⭐️ Get ready for a ride. #MissionRaniganj stays true to its concept: It’s superly creative and @akshaykumar nailed the character of Jaswant Gill. RECOMMENDED! AKSHAY KUMAR’S BEST MOVIE THIS YEAR. #MissionRaniganjReview pic.twitter.com/S0iwdGcJ3o
— RAJ (@Raj70074889) October 6, 2023
It doesn’t matter whether the movie is a hit or a flop, the public is liking the movie, go and watch the movie in your nearest theaters. #MissionRaniganj#MissionRaniganjReviewpic.twitter.com/uJStFQZzwL
— 𝐃𝙴𝚅 ࿐ (@Devendr47974332) October 6, 2023
ಟಿನು ಸುರೇಶ್ ದೇಸಾಯಿ ಅವರು ‘ಮಿಷನ್ ರಾಣಿಗಂಜ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. 1989ರಲ್ಲಿ ರಾಣಿಗಂಜ್ ಕಲ್ಲಿದ್ದಲು ಗಣಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಗಣಿ ತಜ್ಞ ಜಸ್ವಂತ್ ಸಿಂಗ್ ಗಿಲ್ ಅವರ ಪಾತ್ರಕ್ಕೆ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಗಣಿಯಲ್ಲಿ ದುರಂತವೊಂದು ನಡೆದಾಗ ಅಲ್ಲಿದ್ದ ಕಾರ್ಮಿಕರನ್ನು ಜಸ್ವಂತ್ ಸಿಂಗ್ ಗಿಲ್ ಅವರು ಕಾಪಾಡುತ್ತಾರೆ. ಆ ಶೌರ್ಯದ ಘಟನೆಯನ್ನು ಆಧರಿಸಿ ಮೂಡಿಬಂದಿರುವ ಈ ಸಿನಿಮಾ ಸ್ಫೂರ್ತಿದಾಯವಾಗಿದೆ ಎಂದು ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
#MissionRaniganj interval Water CGI worst ever seen
But emotions are good. #MissionRaniganjReview #AkshayKumar pic.twitter.com/a7mu6EHQix
— Raaj TeewaRi (@raaj_teewari3) October 6, 2023
Watching the first show of this Akshay Kumar starrer movie , this looks very good , screenplay is tight and direction is superb . #MissionRaniganj
— Nivas Bishnoi (@nivas_bishnoi29) October 6, 2023
‘ಸಿನಿಮಾದಲ್ಲಿ ಎಮೋಷನಲ್ ದೃಶ್ಯಗಳು ತುಂಬ ಚೆನ್ನಾಗಿ ಮೂಡಿಬಂದಿವೆ. ಅಕ್ಷಯ್ ಕುಮಾರ್ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಬೇಕು. ಆದರೆ ಗ್ರಾಫಿಕ್ಸ್ ಗುಣಮಟ್ಟ ತುಂಬ ಕಳಪೆ ಆಗಿದೆ’ ಎಂದು ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ರೀತಿ ಮಿಶ್ರಪ್ರತಿಕ್ರಿಯೆ ಪಡೆದಿರುವುದರಿಂದ ಮೊದಲ ದಿನ ಈ ಸಿನಿಮಾಗೆ ಸಾಧಾರಣ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಇದಲ್ಲದೇ ಹಲವು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.