ಪಬ್ಲಿಕ್​ನಲ್ಲಿ ಜಗಳವಾಡಿದ್ರಾ ಆಲಿಯಾ-ರಣಬೀರ್​? ವೈರಲ್​ ಆಯ್ತು ವಿಡಿಯೋ

| Updated By: ಮದನ್​ ಕುಮಾರ್​

Updated on: Dec 25, 2021 | 9:28 AM

ಆಲಿಯಾ ಹಾಗೂ ರಣಬೀರ್​ ಕಪೂರ್​ ಅವರು ಮುಂಬೈನ ಹೋಟೆಲ್​ ಒಂದಕ್ಕೆ ತೆರಳಿದ್ದರು. ಈ ವೇಳೆ ಆಲಿಯಾ ಸಹೋದರಿ ಶಹೀನಾ ಭಟ್​ ಕೂಡ ಇದ್ದರು. ಅವರು ಹೋಟೆಲ್​ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು.

ಪಬ್ಲಿಕ್​ನಲ್ಲಿ ಜಗಳವಾಡಿದ್ರಾ ಆಲಿಯಾ-ರಣಬೀರ್​? ವೈರಲ್​ ಆಯ್ತು ವಿಡಿಯೋ
ಆಲಿಯಾ-ರಣಬೀರ್​
Follow us on

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಶೀಘ್ರವೇ ಈ ಜೋಡಿ ಮದುವೆ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅನೇಕ ಬಾರಿ ಈ ಜೋಡಿ ಒಟ್ಟಾಗಿ ಪಬ್ಲಿಕ್​ನಲ್ಲಿ ಕಾಣಿಸಿಕೊಂಡಿದೆ. ಸಾಕಷ್ಟು ಬಾರಿ ಇಬ್ಬರೂ ವಿದೇಶಕ್ಕೆ ತೆರಳಿ ಸಮಯ ಕಳೆದು ಬಂದಿದ್ದಾರೆ. ಇತ್ತೀಚೆಗೆ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಈ ವೇಳೆ ಅವರ ವರ್ತನೆ ನೋಡಿದ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಇಬ್ಬರೂ ಜಗಳ ಮಾಡಿಕೊಂಡಿದ್ದಾರಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಆಲಿಯಾ ಹಾಗೂ ರಣಬೀರ್​ ಕಪೂರ್​ ಅವರು ಮುಂಬೈನ ಹೋಟೆಲ್​ ಒಂದಕ್ಕೆ ತೆರಳಿದ್ದರು. ಈ ವೇಳೆ ಆಲಿಯಾ ಸಹೋದರಿ ಶಹೀನಾ ಭಟ್​ ಕೂಡ ಇದ್ದರು. ಅವರು ಹೋಟೆಲ್​ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ಈ ವೇಳೆ ರಣಬೀರ್ ಅವರು ಆಲಿಯಾ ಸಹಾಯಕ್ಕೆ ಬಂದರು. ಆದರೆ, ಆಲಿಯಾ ಇದನ್ನು ಲಕ್ಷ್ಯಕ್ಕೆ ತೆಗೆದುಕೊಂಡಿಲ್ಲ. ರಣಬೀರ್​ ಕೈಯನ್ನು ದೂಕಿ ಮುಂದೆ ಸಾಗಿದರು. ಇದನ್ನು ನೋಡಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.

ಈ ವಿಡಿಯೋವನ್ನು ಪಾಪರಾಜಿಗಳು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬಂದಿವೆ. ‘ಯಾಕೆ ರಣಬೀರ್​ ಕೈಯನ್ನು ಆಲಿಯಾ ದೂಡಿ ಮುಂದೆ ಸಾಗಿದರು?’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ‘ಆಲಿಯಾ ಅಳುತ್ತಿದ್ದಂತೆ ಕಂಡು ಬಂತು’ ಎಂದಿದ್ದಾರೆ. ಹೋಟೆಲ್​ನಲ್ಲಿ ಆಲಿಯಾ ಹಾಗೂ ರಣಬೀರ್​ ಕಪೂರ್​ ನಡುವೆ ಏನೋ ಕಿರಿಕ್​ ಆಗಿದೆ. ಈ ಕಾರಣಕ್ಕೆ ಇಬ್ಬರೂ ಆ ರೀತಿ ನಡೆದುಕೊಂಡರು ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಈ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಾಲಿವುಡ್​ ಸೆಲೆಬ್ರಿಟಿಗಳು ವಿದೇಶಕ್ಕೆ ತೆರಳಿ ಮದುವೆ ಆಗುವುದು ಟ್ರೆಂಡ್​. ರಾಜಸ್ಥಾನ, ಗೋವಾ ಮುಂತಾದ ಸ್ಥಳಗಳಲ್ಲೂ ಸೆಲೆಬ್ರಿಟಿಗಳ ಮದುವೆ ನೆರವೇರುತ್ತವೆ. ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಕೂಡ ಅದೇ ರೀತಿ ಪ್ಲ್ಯಾನ್​ ಇಟ್ಟುಕೊಂಡಿದ್ದರು. ಆದರೆ ಈಗ​ ಬೇರೆ ನಿರ್ಧಾರ ತೆಗೆದುಕೊಂಡಿದ್ದಾರೆ. ಬೇರೆಲ್ಲಿಗೂ ತೆರಳದೇ, ಮುಂಬೈನಲ್ಲೇ ಸಪ್ತಪದಿ ತುಳಿಯಲು ತೀರ್ಮಾನಿಸಿದ್ದಾರೆ. ಅದಕ್ಕೆ ಒಂದು ಬಲವಾದ ಕಾರಣ ಕೂಡ ಇದೆ.

ಆಲಿಯಾ ಭಟ್​ ತಂದೆ ಮಹೇಶ್​ ಭಟ್​ ಅವರಿಗೆ ಈಗ ವಿದೇಶಕ್ಕೆ ಪ್ರಯಾಣ ಮಾಡುವುದು ಕಷ್ಟ ಆಗುತ್ತಿದೆ ಎನ್ನಲಾಗಿದೆ. ಆ ಕಾರಣದಿಂದ ಮದುವೆಯನ್ನು ಮುಂಬೈನಲ್ಲೇ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಮದುವೆಗೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುವುದು ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಈ ವಿಚಾರಗಳ ಬಗ್ಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ನೇರವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ಕನ್ನಡದಲ್ಲಿ ಟ್ವೀಟ್​ ಮಾಡಿ ‘ಬ್ರಹ್ಮಾಸ್ತ್ರ’ ರಿಲೀಸ್​ ಡೇಟ್​ ತಿಳಿಸಿದ ಆಲಿಯಾ ಭಟ್​; ಶಿವನ ಗೆಟಪ್​ನಲ್ಲಿ ರಣಬೀರ್​