83 Movie Leak: 83 ಸಿನಿಮಾಗೆ ದೊಡ್ಡ ಹೊಡೆತ; ರಿಲೀಸ್ ಆದ ಕೂಡಲೇ ಲೀಕ್ ಆಯ್ತು ರಣವೀರ್ ಸಿಂಗ್ ಮೂವಿ

83 ಸಿನಿಮಾ ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ಸೋರಿಕೆಯಾಗಿರುವುದರಿಂದ ಚಿತ್ರಮಂದಿರದ ಬಾಕ್ಸಾಫೀಸ್​ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ.

83 Movie Leak: 83 ಸಿನಿಮಾಗೆ ದೊಡ್ಡ ಹೊಡೆತ; ರಿಲೀಸ್ ಆದ ಕೂಡಲೇ ಲೀಕ್ ಆಯ್ತು ರಣವೀರ್ ಸಿಂಗ್ ಮೂವಿ
83 ಸಿನಿಮಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 24, 2021 | 6:59 PM

ರಣವೀರ್ ಸಿಂಗ್  (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಮದುವೆಯಾದ ಮೇಲೆ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿರುವ ’83’ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಮೊದಲ ಶೋನಿಂದಲೇ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಭಾರತದ ಮೊದಲ ವರ್ಲ್ಡ್​ ಕಪ್ ಗೆದ್ದ ಟೀಂ  ಇಂಡಿಯಾ ಕುರಿತಾದ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ತೆರೆಕಂಡಿರುವ ’83’ ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಆನ್​ಲೈನ್​ನಲ್ಲಿ ಲೀಕ್ ಆಗಿದೆ.

ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ನಿರ್ದೇಶಿಸಿದ ಈ ಸಿನಿಮಾ 1983 ರ ಭಾರತ ವಿಶ್ವಕಪ್ ಗೆಲುವಿನ ಐತಿಹಾಸಿಕ ಕ್ಷಣವನ್ನು ತೆರೆದಿಟ್ಟಿದೆ. ಆದರೆ, ಈ ಸಿನಿಮಾ ಬಿಡುಗಡೆ ಕಂಡ ಒಂದೆರಡು ಗಂಟೆಯಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಬಾಲಿವುಡ್‌ಲೈಫ್ ಪ್ರಕಾರ, 83 ಸಿನಿಮಾ ಟೊರೆಂಟ್ ಸೈಟ್‌ಗಳಾದ Filmywap, Onlinemoviewatches, 123movies, 123movierulz, Filmy ಮತ್ತು ಇತರ ಪೈರೇಟೆಡ್ ಸೈಟ್‌ಗಳಲ್ಲಿ ಸಂಪೂರ್ಣವಾಗಿ ಲಭ್ಯವಿದೆ. ಇದು ಟೆಲಿಗ್ರಾಮ್‌ನಲ್ಲಿಯೂ ಲಭ್ಯವಿದೆ. ಕೊವಿಡ್ ಹಿನ್ನೆಲೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾತುರದಿಂದ 83 ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದ ಚಿತ್ರತಂಡಕ್ಕೆ ಈ ಸಿನಿಮಾ ಲೀಕ್ ಆಗಿರುವುದು ಆಘಾತ ತಂದಿದೆ.

83 ಸಿನಿಮಾ ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ಸೋರಿಕೆಯಾಗಿರುವುದರಿಂದ ಚಿತ್ರಮಂದಿರದ ಬಾಕ್ಸಾಫೀಸ್​ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಒಮಿಕ್ರಾನ್, ಕೊವಿಡ್​ ಭೀತಿಯಿಂದ ಜನರು ಚಿತ್ರಮಂದಿರಕ್ಕೆ ತೆರಳುವ ಬದಲು ಆನ್​ಲೈನ್​ನಲ್ಲೇ ಈ ಸೋರಿಕೆಯಾದ ಸಿನಿಮಾವನ್ನು ವೀಕ್ಷಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ನಷ್ಟವಾಗುವ ಸಾಧ್ಯತೆಯಿದೆ.

‘ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್ಸ್’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಕೀನು ರೀವ್ಸ್ ನಟಿಸಿದ್ದು, ಈ ಸಿನಿಮಾ ಕೂಡ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ಹಿಂದೆ, ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಅವರ ‘ಆಂಟಿಮ್: ದಿ ಫೈನಲ್ ಟ್ರುತ್’, ಅಕ್ಷಯ್ ಕುಮಾರ್ ಅವರ ‘ಸೂರ್ಯವಂಶಿ’, ಆಯುಷ್ಮಾನ್ ಖುರಾನಾ ಅವರ ‘ಚಂಡೀಗಢ್ ಕರೇ ಆಶಿಕಿ’ ಮತ್ತು ‘ತಡಾಪ್’ ಕೂಡ ಪೈರೇಟೆಡ್ ಸೈಟ್‌ಗಳಲ್ಲಿ ಸೋರಿಕೆಯಾಗಿತ್ತು. ಇಂದು ರಿಲೀಸ್ ಆಗಿರುವ ’83’ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಚಿತ್ರರಂಗದವರು ಮತ್ತು ಚಲನಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಣವೀರ್ ಸಿಂಗ್ ಮತ್ತು ಇತರ ಎಲ್ಲಾ ನಟರ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿದೆ.

ರಣವೀರ್ ಮತ್ತು ದೀಪಿಕಾ ಅವರಲ್ಲದೆ, ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಹಾರ್ಡಿ ಸಂಧು, ತಾಹಿರ್ ರಾಜ್ ಭಾಸಿನ್, ಜೀವಾ, ಸಾಕಿಬ್ ಸಲೀಮ್, ಜತಿನ್ ಸರ್ನಾ, ಚಿರಾಗ್ ಪಾಟೀಲ್, ದಿನಕರ್ ಶರ್ಮಾ, ನಿಶಾಂತ್ ದಹಿಯಾ, ಆಮಿ ವಿರ್ಕ್ ಸೇರಿದಂತೆ ಇತರರು ಇದ್ದಾರೆ. ಯಾವುದೇ ನಿರೀಕ್ಷೆಯಿಲ್ಲದೆ ಟೂರ್ನಿ ಪ್ರವೇಶಿಸಿ ವಿಶ್ವಕಪ್‌ ಗೆಲ್ಲುವ ಮೂಲಕ, ಕಪಿಲ್‌ ದೇವ್ ನೇತೃತ್ವದ ಟೀಂ ಇಂಡಿಯಾ ಭಾರತಕ್ಕೆ ಮೊದಲ ವಿಶ್ವ ಕಪ್ ಗೆದ್ದು ಕೊಟ್ಟಿತ್ತು. ಅದಾದ ನಂತರದ ದಿನಗಳಲ್ಲಿ ಭಾರತದಲ್ಲಿ ಕ್ರಿಕೆಟ್‌ ರೂಪವೇ ಬದಲಾಯಿತು. 1983ರ ವರ್ಲ್ಡ್ ಕಪ್ ಮ್ಯಾಚ್ ಭಾರತೀಯ ಕ್ರಿಕೆಟ್​ ಕ್ಷೇತ್ರದ ಹೊಸ ಮೈಲಿಗಲ್ಲು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂಥ ರೋಚಕ ಘಟನೆಯ ಚಿತ್ರಣಗಳನ್ನು ಒಳಗೊಂಡ ಕಥೆ ಆಧರಿಸಿ ‘83’ ಸಿನಿಮಾ ನಿರ್ಮಿಸಲಾಗಿದೆ. ಈ ಸಿನಿಮಾದಲ್ಲಿ ವಿಶ್ವಕಪ್‌ ತಂಡದ ನಾಯಕನಾಗಿದ್ದ ಕಪಿಲ್‌ ದೇವ್‌ ಪಾತ್ರವನ್ನು ರಣವೀರ್‌ ಸಿಂಗ್‌ ನಿರ್ವಹಿಸಿದ್ದಾರೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಭಾರತದಲ್ಲಿ ಸುಮಾರು 3,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ 83 ಸಿನಿಮಾ ಬಿಡುಗಡೆಯಾಗಿದೆ.

ಇದನ್ನೂ ಓದಿ: ‘83’ ಸಿನಿಮಾ ಬಹಿಷ್ಕರಿಸಲು ಟ್ವಿಟರ್​ನಲ್ಲಿ ಅಭಿಯಾನ; ಈ ಪರಿ ವಿರೋಧಕ್ಕೆ ಕಾರಣ ಏನು?

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

Published On - 6:59 pm, Fri, 24 December 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ