ನಟಿ ಆಲಿಯಾ ಭಟ್ (Alia Bhatt) ಅವರಿಗೆ ಇಂದು (ಮಾರ್ಚ್ 15) ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿ ವಿಶ್ ತಿಳಿಸುತ್ತಿದ್ದಾರೆ. ಮಗಳು ರಹಾ ಕೂಡ ಇರುವುದರಿಂದ ಆಲಿಯಾಗೆ ಬರ್ತ್ಡೇ ಸಖತ್ ಸ್ಪೆಷಲ್ ಎನಿಸಿದೆ. ಆಲಿಯಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆಲಿಯಾ ಅವರು ಸ್ಟಾರ್ ಕಿಡ್. ಅವರಿಗೆ ಅವಕಾಶ ಸುಲಭದಲ್ಲಿ ಸಿಕ್ಕಿತು ನಿಜ. ಆದರೆ, ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ.
ಆಲಿಯಾ ಭಟ್ ಅವರು ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಮಗಳು. ಈ ಕಾರಣಕ್ಕೆ ಚಿತ್ರರಂಗಕ್ಕೆ ಆಲಿಯಾನ ಪರಿಚಯಿಸಲು ಅನೇಕರು ಮುಂದೆ ಬಂದರು. ಕೊನೆಯದಾಗಿ ಈ ಅವಕಾಶ ಸಿಕ್ಕಿದ್ದು ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರಿಗೆ. ತಮ್ಮ ನಿರ್ಮಾಣದ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ಅವರನ್ನು ಲಾಂಚ್ ಮಾಡಿದರು. ಕೇವಲ ಆಲಿಯಾ ಮಾತ್ರವಲ್ಲ ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರಾ ಅವರನ್ನೂ ಇದೇ ಸಿನಿಮಾ ಮೂಲಕ ಪರಿಚಯಿಸಿದರು ಕರಣ್. ಈ ಚಿತ್ರ ಸೂಪರ್ ಹಿಟ್ ಆಯಿತು. ಆಲಿಯಾ ಲೈಫ್ಗೆ ಭದ್ರ ಬುನಾದಿ ಸಿಕ್ಕಿತು.
ಸೋನಂ ಕಪೂರ್ ಅವರು ಸ್ಟಾರ್ ಕಿಡ್. ಆದರೆ, ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಆದರೆ, ಆಲಿಯಾ ಹಾಗಲ್ಲ. ಕೇವಲ ಪಕ್ಕದ ಮನೆ ಹುಡುಗಿ ಪಾತ್ರ ಮಾಡದೇ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಭೇಷ್ ಎನಿಸಿಕೊಂಡರು. 2014ರಲ್ಲಿ ‘ಹೈವೇ’ ಸಿನಿಮಾ ಮಾಡಿದ ಆಲಿಯಾ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡರು. ‘2 ಸ್ಟೇಟ್ಸ್’ ಮೆಚ್ಚುಗೆ ಪಡೆಯಿತು. 2016ರಲ್ಲಿ ರಿಲೀಸ್ ಆದ ‘ಡಿಯರ್ ಜಿಂದಗಿ’ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಸಿನಿಮಾ ಗೆಲ್ಲುವಲ್ಲಿ ಆಲಿಯಾ ಪಾತ್ರ ಕೂಡ ಪ್ರಮುಖವಾಗಿದೆ.
2018ರಲ್ಲಿ ರಿಲೀಸ್ ಆದ ‘ರಾಜಿ’ ಚಿತ್ರದಲ್ಲಿ ಭಾರತೀಯ ಸ್ಪೈ ಪಾತ್ರ ಮಾಡಿ ಭೇಷ್ ಎನಿಸಿಕೊಂಡರು. ಈ ಚಿತ್ರದಲ್ಲಿ ಅವರ ನಟನೆಗೆ ಅನೇಕರು ಭೇಷ್ ಎಂದಿದ್ದಾರೆ. ಈ ಚಿತ್ರದ ಮೂಲಕ ಆಲಿಯಾ ಖ್ಯಾತಿ ದುಪ್ಪಟ್ಟಾಗಿದೆ. ‘ಗಲ್ಲಿ ಬಾಯ್’, ‘ಆರ್ಆರ್ಆರ್’, ‘ಡಾರ್ಲಿಂಗ್ಸ್’, ‘ಬ್ರಹ್ಮಾಸ್ತ್ರ’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಕಳೆದ ವರ್ಷ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಮೂಲಕ ಹಾಲಿವುಡ್ಗೂ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತದ ಸ್ಟಾರ್ ನಟನಿಗೆ ಆಲಿಯಾ ಭಟ್ ನಾಯಕಿ: ಯಾರು ಆ ಸ್ಟಾರ್?
ಉಳಿದ ನಟಿಯರಿಗೆ ಹೋಲಿಸಿದರೆ ಆಲಿಯಾ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಸಾಕಷ್ಟು ಎಫರ್ಟ್ ಹಾಕಿ ಸಿನಿಮಾ ಮಾಡುತ್ತಾರೆ. ರಹಾ ಜನಿಸಿದ ಬಳಿಕ ಆಲಿಯಾ ಸಣ್ಣ ಬ್ರೇಕ್ ಪಡೆದಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಅವರು ಬ್ಯುಸಿ ಆಗುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಜೊತೆ ‘ವಾರ್ 2’ ಚಿತ್ರದಲ್ಲಿ ಆಲಿಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Fri, 15 March 24