ಆಲಿಯಾ ಭಟ್ ಈ ಗುಣಕ್ಕೆ ಎಲ್ಲರೂ ಫಿದಾ; ಎಲ್ಲಾ ಸೆಲೆಬ್ರಿಟಿಗಳಿಗೆ ಮಾದರಿ ಈ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Oct 30, 2024 | 7:55 AM

ಆಲಿಯಾ ಭಟ್ ಅವರು ತಮ್ಮ ಫ್ಯಾಷನ್ ಆಯ್ಕೆಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಅವರು ಒಂದೇ ಬಟ್ಟೆಯನ್ನು ಪದೇ ಪದೇ ಧರಿಸುವುದನ್ನು ಬೆಂಬಲಿಸುತ್ತಾರೆ. ಅವರ ಸಿನಿಮಾ ಜೀವನ ಮತ್ತು ಖಾಸಗಿ ಜೀವನದ ವಿವರಗಳ ಬಗ್ಗೆ ಇಲ್ಲಿದೆ.

ಆಲಿಯಾ ಭಟ್ ಈ ಗುಣಕ್ಕೆ ಎಲ್ಲರೂ ಫಿದಾ; ಎಲ್ಲಾ ಸೆಲೆಬ್ರಿಟಿಗಳಿಗೆ ಮಾದರಿ ಈ ನಟಿ
ಆಲಿಯಾ ಭಟ್
Follow us on

ನಟಿ ಆಲಿಯಾ ಭಟ್ ಅವರು ಹಲವಾರು ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರಿಗೆ ರಹಾ ಹೆಸರಿನ ಮಗಳು ಜನಿಸಿದ್ದಾಳೆ. ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಒಂದಷ್ಟು ವಿಚಾರಗಳಲ್ಲಿ ಆಲಿಯಾ ಭಟ್ ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಆಲಿಯಾ ಭಟ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಬಳಿ ನೂರಾರು ಕೋಟಿ ರೂಪಾಯಿಯ ಆಸ್ತಿ ಇದೆ. ಅನೇಕ ಸೆಲೆಬ್ರಿಟಿಗಳು ಇಷ್ಟೆಲ್ಲ ಹಣ ಇದ್ದಾಗ ಹೊಸ ಹೊಸ ಭಟ್ಟೆ ಧರಿಸಿ ಕಾಣಿಸಿಕೊಳ್ಳುತ್ತಾರೆ. ಬಟ್ಟೆಯನ್ನು ಎಂದಿಗೂ ರಿಪೀಟ್ ಮಾಡಲ್ಲ. ಇದು ಪ್ರತಿಷ್ಠೆಯ ವಿಚಾರ ಎಂದುಕೊಳ್ಳುತ್ತಾರೆ. ಆದರೆ, ಆಲಿಯಾ ಹಾಗಲ್ಲ. ಅವರು ಹಾಕಿದ ಬಟ್ಟೆಯನ್ನೇ ಮತ್ತೆ ಹಾಕುತ್ತಾರೆ ಮತ್ತು ಇದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳುತ್ತಾರೆ.

‘ನಾನು ಎಲ್ಲಾ ಬಟ್ಟೆಯನ್ನೂ ರಿಪೀಟ್ ಮಾಡುತ್ತೇನೆ. ಮನೆಯಲ್ಲಿ 365 ದಿನಗಳಿಗೂ ಹಾಕಲು ಬಟ್ಟೆ ಇರಲ್ಲ. ಹೀಗಾಗಿ ಮತ್ತೆ ಮತ್ತೆ ಧರಿಸುತ್ತೇನೆ. ರಿಪೀಟ್ ಮಾಡೋದು ಸಾಮಾನ್ಯ. ರಿಪೀಟ್ ಮಾಡೋದು ಸರಿ ಅಲ್ಲ ಎಂದುಕೊಳ್ಳಬೇಡಿ. ಇದು ತಪ್ಪು’ ಎಂದಿದ್ದಾರೆ ಆಲಿಯಾ ಭಟ್.

ಆಲಿಯಾ ಭಟ್ ಅವರು ಹಾಕಿಕೊಂಡ ಬಟ್ಟೆಯನ್ನೇ ಮತ್ತೆ ಮತ್ತೆ ಹಾಕಿಕೊಂಡು ಕಾಣಿಸಿಕೊಂಡ ಉದಾಹರಣೆ ಸಾಕಷ್ಟು ಇದೆ. ಇದನ್ನು ಕೆಲವರು ಟೀಕೆ ಮಾಡಿದ್ದರು. ಆದರೆ, ಆಲಿಯಾ ಭಟ್ ಅವರು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಈ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಳೇ ಬಟ್ಟೆ ಧರಿಸಿ ಪಾರ್ಟಿಗೆ ಬಂದ ಆಲಿಯಾ ಭಟ್​; ನೆಟ್ಟಿಗರಿಂದ ಮೆಚ್ಚುಗೆ

ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ಸುಳ್ಳಾಗಿದೆ. ಈ ಚಿತ್ರಕ್ಕೆ ಆಲಿಯಾ ಭಟ್ ಅವರೇ ನಿರ್ಮಾಪಕಿ ಕೂಡ ಹೌದು. ಅವರು ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಹಾಗೂ ವಿಕ್ಕಿ ಕೌಶಲ್ ಅವರು ನಟಿಸುತ್ತಾ ಇದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರದ ನಿರ್ದೇಶಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:55 am, Wed, 30 October 24