ಯೋಗ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡ ಆಲಿಯಾ, ಆದರೆ ಫ್ಯಾನ್ಸ್ ಗಮನಿಸಿದ್ದೇ ಬೇರೆ!; ಏನಿದು ಸಮಾಚಾರ?

TV9 Digital Desk

| Edited By: shivaprasad.hs

Updated on: Sep 11, 2021 | 7:16 PM

ಬಾಲಿವುಡ್ ನಟಿ ಆಲಿಯಾ ಭಟ್ ತಾವು ಯೋಗ ಮಾಡುತ್ತಿರುವ ಚಿತ್ರಗಳನ್ನು ತಮ್ಮ ಸ್ಟುಡಿಯೊ ಇನ್ಸ್ಟಾಗ್ರಾಂ ಖಾತೆಯ ಮುಖಾಂತರ ಹಂಚಿಕೊಂಡಿದ್ದಾರೆ. ಆದರೆ ಫ್ಯಾನ್ಸ್ ಚಿತ್ರಗಳಲ್ಲಿ ಗಮನಿಸಿರುವುದೇ ಬೇರೆ. ಅಚ್ಚರಿಯ ಮಾಹಿತಿ ಇಲ್ಲಿದೆ.

ಯೋಗ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡ ಆಲಿಯಾ, ಆದರೆ ಫ್ಯಾನ್ಸ್ ಗಮನಿಸಿದ್ದೇ ಬೇರೆ!; ಏನಿದು ಸಮಾಚಾರ?
ಆಲಿಯಾ ಭಟ್
Follow us

ಬಾಲಿವುಡ್‌ನ ನಟಿಯರು ಯೋಗದಲ್ಲಿ ತೊಡಗಿಕೊಳ್ಳುವುದು ಮಾಮೂಲು. ನಟಿ ಆಲಿಯಾ ಭಟ್ ಕೂಡ ಇದಕ್ಕೆ ಹೊರತಲ್ಲ. ಮುಂಬೈನಲ್ಲಿರುವ ತಮ್ಮ ಹೊಸ ಮನೆಯಲ್ಲಿ ಯೋಗ ಮಾಡುತ್ತಿರುವ ಚಿತ್ರಗಳನ್ನು ಆಲಿಯಾ ಅವರ ಯೋಗ ಸ್ಟುಡಿಯೋದ ಇನ್ಸ್ಟಾಗ್ರಾಂ ಖಾತೆಯಾದ ‘ಅನ್ಶುಕ ಯೋಗ’ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಅಭಿಮಾನಿಗಳು ಕೇವಲ ಆಲಿಯಾ ಅವರ ಯೋಗವನ್ನಷ್ಟೇ ಇದರಲ್ಲಿ ಗುರುತಿಸಿಲ್ಲ, ಬದಲಾಗಿ ಅವರ ಅದ್ಭುತವಾದ ಹೊಸ ಮನೆಯ ಸೌಂದರ್ಯವನ್ನೂ ಗುರುತಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಯೋಗ ದಿರಿಸಿನಲ್ಲಿ ಬೇರೆ ಬೇರೆ ಆಸನಗಳನ್ನು ಮಾಡುತ್ತಿರುವ ಆಲಿಯಾ ಅವರ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಅವರ ಮನೆಯ ವಿಶಾಲವಾದ ಲಿವಿಂಗ್ ರೂಮ್ ನಲ್ಲಿ ಆಲಿಯಾ ಯೋಗ ಮಾಡುತ್ತಿದ್ದು, ಆ ಸ್ಥಳದ ಸೌಂದರ್ಯ ಮತ್ತು ವಾಸ್ತುಶಿಲ್ಪ  ಅಭಿಮಾನಿಗಳ ಮನಗೆದ್ದಿದೆ.

ಆಲಿಯಾ ಯೋಗ ಮಾಡುತ್ತಿರುವ ಚಿತ್ರ ಇಲ್ಲಿದೆ:

ಆಲಿಯಾ ಭಟ್ 2019ರಲ್ಲಿ ಜುಹುವಿನಲ್ಲಿ ಸುಮಾರು 13 ಕೋಟಿ ರೂ ಕೊಟ್ಟು ಹೊಸ ಮನೆಯನ್ನು ಖರೀದಿಸಿದ್ದರು. ಈ ಹೊಸ ಮನೆ ಅವರ ಗೆಳೆಯ ರಣಬೀರ್ ಕಪೂರ್ ಅವರ ಮನೆಯ ಸಮೀಪವೇ ಇದೆ. ಆಲಿಯಾ ಈ ಮೊದಲು ತಮ್ಮ ಸಹೋದರಿ ಶಹೀನ್ ಭಟ್ ಅವರೊಂದಿಗೆ ವಾಸಿಸುತ್ತಿದ್ದರು. ಪ್ರಸ್ತುತ ಶಹೀನ್ ಆಲಿಯಾ ಅವರೊಂದಿಗೆ ಇದ್ದಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ‌.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಸಡಕ್ 2 ಚಿತ್ರದಲ್ಲಿ. ಆದರೆ ಆ ಚಿತ್ರ ಬಾಕ್ಸಾಫೀಸ್ ನಲ್ಲಿ ಅಷ್ಟೊಂದು ಯಶಸ್ಸನ್ನು ಗಳಿಸಿಲ್ಲ. ಆಲಿಯಾ ಬತ್ತಳಿಕೆಯಲ್ಲಿ ಈಗ ಹಲವು ಚಿತ್ರಗಳಿವೆ. ‘ಬ್ರಹ್ಮಾಸ್ತ್ರ’, ‘ಗಂಗೂಬಾಯಿ ಕಥೈವಾಡಿ’, ‘ಆರ್ ಆರ್ ಆರ್’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’, ‘ಡಾರ್ಲಿಂಗ್ಸ್’ ಈ ಚಿತ್ರಗಳಲ್ಲಿ ಆಲಿಯಾ ಬಣ್ಣ ಹಚ್ಚುತ್ತಿದ್ದಾರೆ. ಇದಲ್ಲದೇ ಫರ್ಹಾನ್ ಅಖ್ತರ್ ನಿರ್ದೇಶನದ ರೋಡ್ ಟ್ರಿಪ್ ಚಿತ್ರವಾದ ‘ಜೀ ಲೆ ಜರಾ’ ಚಿತ್ರದಲ್ಲಿ ಕತ್ರಿನಾ ಕೈಫ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

ನಿಮ್ಮ ಬಣ್ಣ ಕಪ್ಪು ಎಂದವರಿಗೆ ಬಿಕಿನಿ ಮೂಲಕ ಉತ್ತರ ನೀಡಿದ ನಟಿ

₹ 16 ಕೋಟಿ ಮೌಲ್ಯದ ಲಸಿಕೆ ಅಗತ್ಯವಿದ್ದ ಮಗುವಿಗೆ ಸಹಾಯ ಮಾಡುವುದಾಗಿ ಕೆಬಿಸಿ ವೇದಿಕೆಯಲ್ಲೇ ಘೋಷಿಸಿದ ಅಮಿತಾಭ್

(Alia Bhatt shares Yoga pictures and fans observes her beautiful new home living room)

ತಾಜಾ ಸುದ್ದಿ

Related Stories

Click on your DTH Provider to Add TV9 Kannada