ನಿಮ್ಮ ಬಣ್ಣ ಕಪ್ಪು ಎಂದವರಿಗೆ ಬಿಕಿನಿ ಮೂಲಕ ಉತ್ತರ ನೀಡಿದ ನಟಿ
ಇಶಾ ಗುಪ್ತಾ 2012ರಲ್ಲಿ ತೆರೆಗೆ ಬಂದ ‘ಜನ್ನತ್ 2’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈವರೆಗೆ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ.
ಸಿನಿಮಾ ರಂಗದಲ್ಲಿ ಯಶಸ್ಸು ಪಡೆದ ಅನೇಕ ಸೆಲೆಬ್ರಿಟಿಗಳು ಆರಂಭದಲ್ಲಿ ಸಾಕಷ್ಟು ಅವಮಾನ ಎದುರಿಸುತ್ತಾರೆ. ಎಲ್ಲರ ಹಾದಿಯೂ ಅಷ್ಟು ಸುಲಭವಾಗಿರುವುದಿಲ್ಲ. ಯಶಸ್ಸು ಬಂದರೆ ಮಾತ್ರ ಚಿತ್ರರಂಗದಲ್ಲಿ ಉತ್ತಮ ಮಾತು ಕೇಳೋಕೆ ಸಾಧ್ಯ ಎಂದು ಈ ಮೊದಲು ಅನೇಕರು ಹೇಳಿಕೊಂಡಿದ್ದಿದೆ. 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಇಶಾ ಗುಪ್ತಾ ವೃತ್ತಿ ಜೀವನದಲ್ಲಿ ಈ ರೀತಿಯ ಕಹಿ ಅನುಭವಗಳಿವೆ. ಈ ಬಗ್ಗೆ ಅವರು ಈಗ ಮೌನ ಮುರಿದಿದ್ದಾರೆ.
ಇಶಾ ಗುಪ್ತಾ 2012ರಲ್ಲಿ ತೆರೆಗೆ ಬಂದ ‘ಜನ್ನತ್ 2’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈವರೆಗೆ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ. ಒಟಿಟಿ ಶೋಗಳಲ್ಲೂ ಇಶಾ ನಟಿಸುತ್ತಿದ್ದಾರೆ. ಆದರೆ, ಅವರ ಆರಂಭದ ದಿನಗಳು ಅಷ್ಟು ಉತ್ತಮವಾಗಿರಲಿಲ್ಲ. ಈ ಬಗ್ಗೆ ಇಶಾ ಹೇಳಿಕೊಂಡಿದ್ದಾರೆ.
ಇಶಾ ಗುಪ್ತಾ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಬಿಕಿನಿ ಫೋಟೋಗಳ ಮೂಲಕ ಅವರು ಪಡ್ಡೆ ಹುಡುಗರ ಮನಸ್ಸು ಕದ್ದಿದ್ದಾರೆ. ಈಗ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಫೋಟೋಗಳಿಗೆ ಅದ್ಭುತವಾಗಿದೆ ಎನ್ನುವ ಕಮೆಂಟ್ ಬರುತ್ತದೆ. ಆದರೆ, ಆರಂಭದ ದಿನಗಳಲ್ಲಿ ಅವರು ಸಾಕಷ್ಟು ಕಹಿ ಅನುಭವಗಳನ್ನು ಎದುರಿಸಿ ಬಂದಿದ್ದಾರೆ.
‘ಆರಂಭದಲ್ಲಿ ನಾನು ಚಿತ್ರರಂಗಕ್ಕೆ ಬಂದಾಗ ಸಂಬಂಧ ಇಲ್ಲದವರು ಬಂದು ನನ್ನ ಚರ್ಮದ ಬಣ್ಣದ ಬಗ್ಗೆ ಮಾತನಾಡುತ್ತಿದ್ದರು. ಇನ್ನೂ ಸ್ವಲ್ಪ ಮೇಕಪ್ ಮಾಡಿಕೊಳ್ಳಿ ಅದ್ಭುತವಾಗಿ ಕಾಣುತ್ತದೆ ಎಂದು ಕಮೆಂಟ್ ಮಾಡುತ್ತಿದ್ದರು. ನನಗೆ ಇದು ನಿಜಕ್ಕೂ ಅಚ್ಚರಿ ಅನಿಸುತ್ತಿತ್ತು. ಹಾಗೆ ಬಣ್ಣ ಬಡಿಯೋದಾದರೆ ಇಡೀ ದೇಹಕ್ಕೆ ಬಣ್ಣ ಹಚ್ಚಬೇಕು. ನನ್ನ ಸಿನಿಮಾಗಳು ಹಿಟ್ ಆದ ನಂತರದಲ್ಲಿ ನನಗೆ ನೀನು ಸೆಕ್ಸಿ ಇದ್ದೀಯಾ ಎಂದು ಹೇಳೋಕೆ ಆರಂಭಿಸಿದರು. ಕಪ್ಪಗಿದ್ದವರು ಹೀರೋಯಿನ್ ಆಗೋಕೆ ಸಾಧ್ಯವಿಲ್ಲ ಎನ್ನುವ ಕಾನ್ಸೆಪ್ಟ್ ಬದಲಾಗುತ್ತಿದೆ’ ಎಂದಿದ್ದಾರೆ.
ಟೀಕೆ ಮಾಡಿದವರಿಗೆ ತಮ್ಮ ಬಿಕಿನಿ ಮತ್ತು ಹಾಟ್ ಫೋಟೋಗಳ ಮೂಲಕ ಉತ್ತರ ನೀಡುತ್ತಿರುವ ಇಶಾ ಸದ್ಯ ‘ದೇಸಿ ಮ್ಯಾಜಿಕ್’ ಹಾಗೂ ‘ಹೇರಾ ಫೇರಿ 3’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಹೇರಾ ಫೇರಿ 3’ ಸಿನಿಮಾ ಸೆಟ್ಟೇರೋದು ಕೊಂಚ ವಿಳಂಬವಾಗಿದೆ.
ಇದನ್ನೂ ಓದಿ: ಕೇಸ್ ಮೇಲೆ ಕೇಸ್ ಬಿದ್ರೂ ಕಮ್ಮಿ ಆಗಿಲ್ಲ ಗೆಹನಾ ಮಾದಕತೆ; ನೀಲಿ ಚಿತ್ರ ದಂಧೆ ಆರೋಪಿಯ ಹೊಸ ಫೋಟೋಶೂಟ್