
ನಟಿ ಆಲಿಯಾ ಭಟ್ ಅವರು (Alia Bhatt) ಅಳೆದು ತೂಗಿ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ರೊಮ್ಯಾಂಟಿಕ್ ಕಥೆಗಳ ಜೊತೆಗೆ ಅವರು ಒಂದಷ್ಟು ಆ್ಯಕ್ಷನ್ ಸಿನಿಮಾಗಳನ್ನು ಕೂಡ ಆಯ್ದುಕೊಳ್ಳುತ್ತಿದ್ದಾರೆ. ಅವರು ‘ಆಲ್ಫಾ’ ಸಿನಿಮಾ ಘೋಷಣೆ ಮಾಡಿದಾಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ ಟ್ರೇಲರ್ ರಿಲೀಸ್ ಆದ ಬಳಿಕ ಚಿತ್ರವನ್ನು ಎಲ್ಲರೂ ಟೀಕಿಸಿದರು. ಈಗ ಸಿನಿಮಾ ತೆರೆಕಂಡ ಬಳಿಕ ಚಿತ್ರವನ್ನು ಹೀನಾಯವಾಗಿ ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾ ನೋಡಿದವರು ಐದಕ್ಕೆ ಒಂದು ಸ್ಟಾರ್ ಕೂಡ ನೀಡಿದ್ದಾರೆ!
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಆದರೆ, ಪದೇ ಪದೇ ಒಂದೇ ರೀತಿಯ ವಿಷಯವನ್ನು ಉಣಬಡಿಸಿ ಜನರಿಗೂ ಬೇಸರ ಆಗಿದೆ. ಹೀಗಾಗಿ, ಈ ಯೂನಿವರ್ಸ್ ಅಡಿಯಲ್ಲಿ ಬಂದ ‘ಫೈಟರ್’, ‘ವಾರ್ 2’ ಚಿತ್ರವನ್ನು ಜನರು ನೇರವಾಗಿ ರಿಜೆಕ್ಟ್ ಮಾಡಿದರು. ‘ಆಲ್ಫಾ’ ಸಿನಿಮಾವನ್ನು ಜನರು ತಿರಸ್ಕರಿಸುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ಸಿನಿಮಾ ನಿರ್ದೇಶನ ಮಾಡಲ್ಲ; ನಿವೃತ್ತಿ ಘೋಷಿಸಿದ ಆಲಿಯಾ ಭಟ್ ತಂದೆ
‘ನನ್ನ ಅಪ್ಪ, ಅಮ್ಮನ ಜೊತೆ ಆಲ್ಫಾ ವೀಕ್ಷಿಸಲು ತೆರಳಿದ್ದೆ. ಅವರು ಎಂದಿಗೂ ನನ್ನನ್ನು ಅರ್ಧಕ್ಕೆ ಬಿಟ್ಟು ಹೋಗಿರಲಿಲ್ಲ. ಆದರೆ, ಥಿಯೇಟರ್ನಲ್ಲಿ ನನ್ನನ್ನು ಅವರು ಅರ್ಧಕ್ಕೆ ಬಿಟ್ಟು ಹೋದರು’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ‘ಟ್ವಿಸ್ಟ್ ಕೊಡೋ ಚಿತ್ರ ನಮ್ಮ ದೇಶದ ಸೇನೆಯನ್ನು ಜೋಕ್ ರೀತಿ ತೋರಿಸಿದೆ’ ಎಂದು ಕೆಲವರು ಹೇಳಿದ್ದಾರೆ.ಇನ್ನೂ ಕೆಲವರು ಇದಕ್ಕಿಂತ ಕೆಟ್ಟ ಸಿನಿಮಾ ಮತ್ತೊಂದು ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಕೆಲವರು ಚಿತ್ರವನ್ನು ಕ್ರಿಂಜ್ ಎಂದು ಕರೆದಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ನವರು ಸ್ಪೈ ಯೂನಿವರ್ಸ್ನಿಂದ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈಗ ಬಹುನಿರೀಕ್ಷಿತ ‘ಆಲ್ಫಾ’ ಕೂಡ ನೆಲಕಚ್ಚಿದರೆ ಮುಂದಿನ ದಿನಗಳಲ್ಲಿ ಈ ರೀತಿಯ ಚಿತ್ರಗಳನ್ನು ಅವರು ಕೈ ಬಿಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.