ಕಾಲಿಗೆ ನಮಸ್ಕರಿಸಿದ ಅಮಿತಾಭ್​ ಬಚ್ಚನ್​; ಇಂಥ ಗೌರವ ಪಡೆದ ಈ ವ್ಯಕ್ತಿ ಯಾರು ಗೊತ್ತಾ?

|

Updated on: Jun 20, 2024 | 4:22 PM

ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಹಿರಿಯ ವ್ಯಕ್ತಿ. ಸಾಮಾನ್ಯವಾಗಿ ಎಲ್ಲರೂ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ‘ಕಲ್ಕಿ 2898 ಎಡಿ’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮದ ವೇದಿಕೆಯಲ್ಲಿ ಅಮಿತಾಭ್​ ಬಚ್ಚನ್​ ಅವರೇ ಈ ವ್ಯಕ್ತಿಯ ಕಾಲಿಗೆ ನಮಸ್ಕರಿಸಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಅಚ್ಚರಿಯಾಯಿತು. ಆ ಕ್ಷಣದ ಫೊಟೋ ಹಾಗೂ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಅಮಿತಾಭ್​ ಬಚ್ಚನ್​ ನಮಸ್ಕರಿಸಿದ್ದು ಯಾರಿಗೆ? ಇಲ್ಲಿದೆ ಮಾಹಿತಿ..

ಕಾಲಿಗೆ ನಮಸ್ಕರಿಸಿದ ಅಮಿತಾಭ್​ ಬಚ್ಚನ್​; ಇಂಥ ಗೌರವ ಪಡೆದ ಈ ವ್ಯಕ್ತಿ ಯಾರು ಗೊತ್ತಾ?
ಅಶ್ವಿನಿ ದತ್​, ಅಮಿತಾಭ್​ ಬಚ್ಚನ್​
Follow us on

ನಟ ಅಮಿತಾಭ್​ ಬಚ್ಚನ್ (Amitabh Bachchan) ಅವರು 81ನೇ ವಯಸ್ಸಿನಲ್ಲೂ ತುಂಬ ಆ್ಯಕ್ಟೀವ್​ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅಮಿತಾಭ್​ ಬಚ್ಚನ್​ ನಟಿಸಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್​ 27ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚೆಗೆ ಮುಂಬೈನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ಮಾಡಲಾಯಿತು. ಇದರಲ್ಲಿ ಪ್ರಭಾಸ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ರಾಣಾ ದಗ್ಗುಬಾಟಿ, ಕಮಲ್​ ಹಾಸನ್​ ಮುಂತಾದವರು ಭಾಗಿ ಆಗಿದ್ದರು. ಈ ವೇಳೆ ಅಶ್ವಿನಿ ದತ್​ (Ashwini Dutt) ಅವರ ಕಾಲಿಗೆ ಅಮಿತಾಭ್​ ಬಚ್ಚನ್​ ನಮಸ್ಕರಿಸಿದ್ದಾರೆ.

ಎಲ್ಲರೂ ಅಮಿತಾಭ್​ ಬಚ್ಚನ್​ ಅವರ ಕಾಲನ್ನು ಮುಟ್ಟಿ ನಮಸ್ಕಾರ ಮಾಡುವುದು ಸಹಜ. ಆದರೆ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ವೇದಿಕೆಯಲ್ಲಿ ಅಮಿತಾಭ್​ ಬಚ್ಚನ್​ ಅವರೇ ಅಶ್ವಿನಿ ದತ್​ ಅವರ ಕಾಲಿಗೆ ನಮಸ್ಕರಿಸಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ಆ ಸಂದರ್ಭದ ಫೊಟೋ ಮತ್ತು ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಯಾರು ಈ ಅಶ್ವಿನಿ ದತ್​? ಇವರ ಬಗ್ಗೆ ತಿಳಿದುಕೊಳ್ಳಲು ಗೂಗಲ್​ನಲ್ಲಿ ನೆಟ್ಟಿಗರು ಸರ್ಚ್​ ಮಾಡುತ್ತಿದ್ದಾರೆ.

ಅಶ್ವಿನಿ ದತ್​ ಯಾರು?

‘ವೈಜಯಂತಿ ಮೂವೀಸ್​’ ಬ್ಯಾನರ್ ಮೂಲಕ ‘ಕಲ್ಕಿ 2898 ಎಡಿ’ ಸಿನಿಮಾ ನಿರ್ಮಾಣವಾಗಿದೆ. ಟಾಲಿವುಡ್​ನ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಇದು ಕೂಡ ಒಂದು. ಈ ಸಂಸ್ಥೆಯ ಮಾಲಿಕರೇ ಅಶ್ವಿನಿ ದತ್​. 1974ರಲ್ಲಿ ‘ವೈಜಯಂತಿ ಮೂವೀಸ್​’ ಆರಂಭವಾಯಿತು. ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಈ ಸಂಸ್ಥೆ ಬಂಡವಾಳ ಹೂಡಿದೆ. ಎನ್​ಟಿಆರ್​, ಎಎನ್​ಆರ್​, ಕೃಷ್ಣ, ಚಿರಂಜೀವಿ, ವೆಂಕಟೇಶ್​, ನಾಗಾರ್ಜುನ, ಮಹೇಶ್​ ಬಾಬು ಮುಂತಾದ ಸ್ಟಾರ್​ ನಟರ ಸಿನಿಮಾಗಳಿಗೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ. ಅವರ ಬಗ್ಗೆ ಅಮಿತಾಭ್​ ಬಚ್ಚನ್​ ಮಾತನಾಡಿದ್ದಾರೆ.

ಇದನ್ನೂ ಓದಿ: ಕಲ್ಕಿ 2898 ಎಡಿ ಇವೆಂಟ್​ನಲ್ಲಿ ಮಿಂಚಿದ ತಾರೆಯರು: ಇಲ್ಲಿವೆ ಚಿತ್ರಗಳು

‘ಇವರು ವೈಜಯಂತಿ ಮೂವೀಸ್​ನ ಮಾಲಿಕರು. ಇವರ ಇಬ್ಬರ ಮಕ್ಕಳು ಸ್ವಪ್ನ ಮತ್ತು ಪ್ರಿಯಾಂಕಾ ಕೂಡ ನಿರ್ಮಾಪಕರು. ಅಶ್ವಿನಿ ಅವರಿಗಿಂತ ಸರಳ ಮತ್ತು ವಿನಮ್ರ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿ ಬಾರಿಯೂ ಶೂಟಿಂಗ್​ ಸೆಟ್​ಗೆ ಅವರೇ ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲ’ ಎಂದು ಹೇಳಿದ ಬಳಿಕ ಅಮಿತಾಭ್​ ಬಚ್ಚನ್​ ಅವರು ಅಶ್ವಿನಿ ದತ್​ ಕಾಲಿಗೆ ನಮಸ್ಕರಿಸಿದರು.

ಅಮಿತಾಭ್​ ಬಚ್ಚನ್​ ತೋರಿಸಿದ ಈ ಗೌರವದ ಬಗ್ಗೆ ನಿರ್ದೇಶಕ, ನಿರ್ಮಾಪಕ ರಾಮ್​ ಗೋಪಾಲ್​ ವರ್ಮಾ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಅಮಿತಾಭ್​ ಬಚ್ಚನ್​ ಅವರಿಂದ ಈ ಗೌರವ ಪಡೆದಿದ್ದು ಅಶ್ವಿನಿ ದತ್​ ಅವರ ಸಾಧನೆ. ಎನ್​ಟಿಆರ್​ ಅವರಿಂದ ಆರಂಭಗೊಂಡು, ಇಂದಿನ ಯುವ ಹೀರೋಗಳ ತನಕ ಯಾರೂ ಕೂಡ ಈ ರೀತಿ ಮಾಡಿಲ್ಲ ಎನಿಸುತ್ತದೆ. ಬಿಗ್​ ಬಿ ಕೂಡ ತಮ್ಮ ವೃತ್ತಿಜೀವನದಲ್ಲಿ ಬೇರೆ ನಿರ್ಮಾಪಕರ ಕಾಲಿಗೆ ನಮಸ್ಕರಿಸಿದ್ದನ್ನು ನಾನು ನೋಡಿಲ್ಲ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.