
ಭಾರತದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಚಿನ್ನದ ಟಾಯ್ಲೆಟ್ ಇರುವ ವಿಷಯ ಇತ್ತೀಚೆಗೆ ಸುದ್ದಿ ಆಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರ ಮನೆಯಲ್ಲೂ ಇದೇ ರೀತಿಯ ಟಾಯ್ಲೆಟ್ ಇದೆಯಂತೆ. ವೈರಲ್ ಆಗಿರುವ ಫೋಟೋ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಯನ್ನು ಸೃಷ್ಟಿಸಿದೆ. ಈ ಫೋಟೋದಲ್ಲಿ ಬಿಗ್ ಬಿ ಅವರ ಮನೆಯ ಸ್ನಾನಗೃಹದಲ್ಲಿರುವ ಚಿನ್ನದ ಕಮೋಡ್ ಸ್ಪಷ್ಟವಾಗಿ ಗೋಚರಿಸುತ್ತದೆ. ಫೋಟೋವನ್ನು ನೋಡಿದ ನಂತರ ಅನೇಕರು ಅಚ್ಚರಿ ಹೊರಹಾಕಿದ್ದಾರೆ.
ನಟ ವಿಜಯ್ ವರ್ಮಾ ಅವರ ಥ್ರೋಬ್ಯಾಕ್ ಪೋಸ್ಟ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಚರ್ಚೆ ಆರಂಭವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ಟ್ರೆಂಡಿಂಗ್ ಆಗಿರುವ ‘2026 ಈಸ್ ದಿ ನ್ಯೂ 2016’ ಎಂಬ ಟ್ರೆಂಡ್‌ನ ಭಾಗವಾಗಿದ್ದಾರೆ ವಿಜಯ್. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2016 ರ ನೆನಪುಗಳನ್ನು ಮರಳಿ ತರುವ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವಿಜಯ್ ಅವರ ವೃತ್ತಿಜೀವನದ ಪ್ರಮುಖ ಕ್ಷಣಗಳನ್ನು ತೋರಿಸುತ್ತದೆ. ಒಂದು ವಿಶೇಷ ಸೆಲ್ಫಿ ಎಲ್ಲರ ಗಮನ ಸೆಳೆಯುತ್ತಿದೆ.
ವಿಜಯ್ ವರ್ಮಾ ಹಂಚಿಕೊಂಡ ಈ ಸೆಲ್ಫಿ ನೇರವಾಗಿ ಅಮಿತಾಭ್ ಬಚ್ಚನ್ ಅವರ ಮನೆಯ ಸ್ನಾನಗೃಹದಲ್ಲಿ ತೆಗೆದುಕೊಳ್ಳಲಾಗಿದೆ. ಈ ಫೋಟೋದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಅಲ್ಲಿ ಕಂಡುಬರುವ ಚಿನ್ನದ ಬಣ್ಣದ ಶೌಚಾಲಯ.
ಕೆಲವರು, ‘ವಾವ್! ಗೋಲ್ಡನ್ ಟಾಯ್ಲೆಟ್!’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ವಿಜಯ್ ಇಷ್ಟೊಂದು ಐಷಾರಾಮಿ ಟಾಯ್ಲೆಟ್ ನೋಡಿದ್ದು ಇದೇ ಮೊದಲು ಮತ್ತು ತಕ್ಷಣ ಸೆಲ್ಫಿ ತೆಗೆದುಕೊಂಡಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಸಹೋದರ ಏನು ಮಾಡ್ತಿದ್ದಾರೆ ಗೊತ್ತಾ?
ಈ ಫೋಟೋ ಜೊತೆಗೆ ವಿಜಯ್ ವರ್ಮಾ ಭಾವನಾತ್ಮಕ ಶೀರ್ಷಿಕೆಯನ್ನೂ ಬರೆದಿದ್ದಾರೆ. ಅದರಲ್ಲಿ ಅವರು, ‘2016 ನನಗೆ ವಿಶೇಷ ವರ್ಷವಾಗಿತ್ತು. ‘ಪಿಂಕ್’ ನಂತಹ ಚಿತ್ರಗಳಲ್ಲಿ ಬಿಗ್ ಬಿ ಮತ್ತು ಶೂಜಿತ್ ದಾ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದೆ. ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಚಿನ್ನದ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಂಡೆ. ಸಂಜಯ್ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರನ್ನು ಭೇಟಿಯಾದೆ. ನನ್ನ ಇಷ್ಟದ ಇರ್ಫಾನ್ ಖಾನ್ ಅವರನ್ನು ಭೇಟಿಯಾದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.