ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು
ಬಾಲಿವುಡ್ ನಟ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿಯ ಕಾರು ಮುಂಬೈನಲ್ಲಿ ಅಪಘಾತಕ್ಕೀಡಾಗಿದೆ. ವಿದೇಶದಿಂದ ಮರಳುತ್ತಿದ್ದಾಗ, ಮರ್ಸಿಡಿಸ್ ಕಾರು ನಿಯಂತ್ರಣ ಕಳೆದುಕೊಂಡು ಆಟೋ ಮತ್ತು ಭದ್ರತಾ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಕ್ಷಯ್ ಕುಮಾರ್ ತಕ್ಷಣ ಆಟೋ ಚಾಲಕನಿಗೆ ಸಹಾಯ ಮಾಡಲು ಸೂಚಿಸಿ ಮಾನವೀಯತೆ ಮೆರೆದರು. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಭದ್ರತೆಗೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಯಿತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕಾರು ಪಲ್ಟಿಯಾಗಿತ್ತು. ಅಕ್ಷಯ್ ಕುಮಾರ್ ವಿಮಾನ ನಿಲ್ದಾಣದಿಂದ ಜುಹುವಿನಲ್ಲಿರುವ ತಮ್ಮ ಬಂಗಲೆಗೆ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಯ ಕಾರು ಅಪಘಾತಕ್ಕೆ ಒಳಗಾಗಿದೆ. ಈ ಸಮಯದಲ್ಲಿ ಅಕ್ಷಯ್ ಕುಮಾರ್ ಸಹಾಯಕ್ಕೆ ತೆರಳಿದ್ದು ವಿಶೇಷ.
ಅಕ್ಷಯ್ ಹಾಗೂ ಟ್ವಿಂಕಲ್ ವಿದೇಶದ ಪ್ರವಾಸ ಮುಗಿಸಿ ಮುಂಬೈಗೆ ಬಂದರು. ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಮರ್ಸಿಡಿಸ್ ಕಾರು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದೆ. ಆ ಕಾರು ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ಅದರ ನಂತರ, ಈ ಕಾರು ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ, ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೂ ತಾಗಿದೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರು ಉರುಳಿ ಬಿದ್ದಿದೆ.
ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆಟೋ ಚಾಲಕನಿಗೆ ತಕ್ಷಣ ಸಹಾಯ ಮಾಡಲಾಯಿತು. ಅಕ್ಷಯ್ ಕುಮಾರ್ ತಮ್ಮ ಭದ್ರತಾ ಸಿಬ್ಬಂದಿಗೆ ಆಟೋ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ನಂತರ, ದೊಡ್ಡ ಜನಸಮೂಹ ಜಮಾಯಿಸಿತು. ಅಪಘಾತದ ನಂತರ ಅನೇಕ ಜನರು ಲೈವ್ ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಪೊಲೀಸರು ಪ್ರಸ್ತುತ ಅಪಘಾತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
View this post on Instagram
ಅಪಘಾತದ ಬಗ್ಗೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅಪಘಾತವು ಮರ್ಸಿಡಿಸ್ ಚಾಲಕನ ತಪ್ಪಿನಿಂದಾಗಿ ನಡೆದಿದೆಯೇ ಅಥವಾ ಬೇರೆ ಏನಾದರೂ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಅಥವಾ ಅವರ ತಂಡವು ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಯಾವುದೇ ದೊಡ್ಡ ಹಾನಿಯಾಗಿಲ್ಲವಾದರೂ, ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ
ಅಪಘಾತದ ನಂತರ ಅಕ್ಷಯ್ ಕುಮಾರ್ ಸ್ಥಳದಿಂದ ತೆರಳಿದರು. ಅವರ ಭದ್ರತಾ ಸಿಬ್ಬಂದಿ ಅಲ್ಲೇ ಇದ್ದರು. ಆಟೋ ಚಾಲಕ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಯಾರ ತಪ್ಪು ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಅಕ್ಷಯ್ ಕುಮಾರ್ ಟ್ರಿಪ್ ಮುಗಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಈ ಅಪಘಾತದ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



