ಅಮಿತಾಭ್​ಗೆ 200 ಜನರಿಂದ ರಕ್ತದಾನ; ಅವರ ಜೀವನವನ್ನೇ ನಾಶ ಮಾಡಿತು ಆ ಘಟನೆ

ಅಮಿತಾಭ್ ಬಚ್ಚನ್ ಅವರು ತಮ್ಮ 83ನೇ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಕೂಲಿ’ ಚಿತ್ರದ ಸಮಯದಲ್ಲಿ ಅವರಿಗೆ ಹೆಪಟೈಟಿಸ್ ಬಿ ಸೋಂಕು ತಗುಲಿ, ಲಿವರ್‌ಗೆ 75% ಹಾನಿಯಾಗಿದೆ. ಆದರೂ, ಅವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಎದುರಿಸಿ, ಚಲನಚಿತ್ರಗಳು ಮತ್ತು ಕೌನ್ ಬನೇಗಾ ಕರೋಡ್ಪತಿಯಂತಹ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಅಮಿತಾಭ್​ಗೆ 200 ಜನರಿಂದ ರಕ್ತದಾನ; ಅವರ ಜೀವನವನ್ನೇ ನಾಶ ಮಾಡಿತು ಆ ಘಟನೆ
ಅಮಿತಾಭ್
Updated By: ರಾಜೇಶ್ ದುಗ್ಗುಮನೆ

Updated on: May 17, 2025 | 7:46 AM

ಅಮಿತಾಭ್ ಬಚ್ಚನ್ (Amitabh Bachchan) ವಯಸ್ಸು 83. ಈಗಲೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಫೋಸ್ಟ್​ಗಳನ್ನು ಹಾಕುವ ಅಮಿತಾಭ್ ಬಚ್ಚನ್, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ವೀಕೆಂಡ್​ನಲ್ಲಿ ಅವರು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಕೆಲವು ದಶಕಗಳ ಹಿಂದೆ ಒಂದು ಘಟನೆ ನಡೆದಿತ್ತು. ಇದರಿಂದ ಅವರ ಜೀವನದಲ್ಲಿರುವ ನೆಮ್ಮದಿಯೇ ನಾಶವಾಗಿ ಹೋಯಿತು. ಆದಾಗ್ಯೂ ಅವರು ಖುಷಿಯಿಂದ ಜೀವನ ನಡೆಸುತ್ತಾ ಇದ್ದಾರೆ.

ಅಮಿತಾಭ್ ಬಚ್ಚನ್ ಅವರ  ಹ್ಯಾಪಿಟೈಟಿಸ್ ಬಿ ವೈರಸ್ ಸೋಂಕಿತ್ತು. ಇದರಿಂದ ಅವರ ಲಿವರ್ 75 ಪರ್ಸೆಂಟ್ ನಾಶವಾಗಿ ಹೋಗಿದೆ. ಈ ಘಟನೆ ಬಗ್ಗೆ ಅಮಿತಾಭ್​ಗೆ ಬೇಸರ ಇದೆ. ಆದರೆ, ಇದನ್ನು ಒಪ್ಪಿಕೊಂಡು ಅವರು ಜೀವನ ನಡೆಸುತ್ತಿದ್ದಾರೆ. ‘ಕೂಲಿ’ ಸಿನಿಮಾ (1983) ವೇಳೆ ನಡೆದ ಘಟನೆ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು.

‘ಕೂಲಿ ಚಿತ್ರದ ವೇಳೆ ಆದ ಅಪಘಾತದಿಂದ ನನಗೆ ರಕ್ತ ಬೇಕಿತ್ತು. 200ಕ್ಕೂ ಅಧಿಕ ಜನರು ನನಗೆ ರಕ್ತ ನೀಡಿದರು. ಆದರೆ, ಒಬ್ಬರಲ್ಲಿ ಹ್ಯಾಪಿಟೈಟಿಸ್ ಬಿ ಇತ್ತು. ಅದು ಪತ್ತೆ ಆಗಲೇ ಇಲ್ಲ. ಅದು ರಕ್ತದಲ್ಲಿ ನನಗೂ ಬಂತು. ನನ್ನ ಲಿವರ್ ಹಾಳಾಯಿತು. ಈಗ 75 ಪರ್ಸಂಟ್ ಲಿವರ್ ನಾಶ ಆಗಿದೆ’ ಎಂದಿದ್ದರು ಅಮಿತಾಭ್.

ಇದನ್ನೂ ಓದಿ
ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡ ಹೊರಟ ರಾಜಮೌಳಿಗೆ ಹಿನ್ನಡೆ
ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೈತ್ರಾ ಕುಂದಾಪುರ ತಂದೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

ಅಮಿತಾಭ್ ಬಚ್ಚನ್ ಅವರು 1982ರಲ್ಲಿ ರಕ್ತ ದಾನ ಮಾಡಿಸಿಕೊಂಡಿದ್ದರು. ಆದರೆ, ಅವರಿಗೆ ಹೆಪಿಟೈಟಿಸ್ ಬಿ ಇದ್ದ ವಿಚಾರ ತಿಳಿದಿದ್ದು 2005ರಲ್ಲಿ. ಆಗಲೇ ಅವರಿಗೆ ಸಾಕಷ್ಟು ಲಿವರ್ ಡ್ಯಾಮೇಜ್ ಆಗಿತ್ತು. ‘ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಇದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ’ ಎಂದು ಬಚ್ಚನ್ ಎಚ್ಚರಿಸಿದ್ದರು.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿ ಟ್ರೋಲ್ ಆದ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರದಲ್ಲಿ ಅವರು ಅಶ್ವತ್ಥಾಮನ ಪಾತ್ರ ಮಾಡಿದ್ದಾರೆ. ಈ ಪಾತ್ರ ಭರ್ಜರಿ ಗಮನ ಸೆಳೆಯಿತು. ಅವರು ಈ ಚಿತ್ರದ ಸೀಕ್ವೆಲ್​ನಲ್ಲಿ ಭಾಗಿ ಆಗಬೇಕಿದೆ. ಇದರ ಜೊತೆಗೆ ಅವರು ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.