
ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachan) ಅನೇಕ ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವಾಗ ಅಮಿತಾಭ್ ಬಚ್ಚನ್ ಅವರ ಜೀವನದಲ್ಲಿ ಅನೇಕ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಸಂಭವಿಸಿದವು. ಅದೆಲ್ಲವನ್ನೂ ಅವರು ಮೆಟ್ಟಿ ನಿಂತಿದ್ದಾರೆ. ಬಚ್ಚನ್ ಕುಟುಂಬವು ಮುಂಬೈನಲ್ಲಿ ಸಾಕಷ್ಟು ಆಸ್ತಿಯನ್ನು ಹೊಂದಿದೆ. ಅವುಗಳಲ್ಲಿ ಒಂದು ಜುಹುವಿನಲ್ಲಿರುವ ಬಿಗ್ ಬಿ ಅವರ ಬಂಗಲೆ. ಈ ಬಂಗಲೆಯ ಹೆಸರು ಪ್ರತೀಕ್ಷಾ. ಈ ಬಂಗಲೆ ಬಿಗ್ ಬಿ ಅವರ ಲೆಕ್ಕವಿಲ್ಲದಷ್ಟು ನೆನಪುಗಳನ್ನು ಹೊಂದಿದೆ. ಆದರೆ, ಈಗ ಇಲ್ಲಿ ಯಾರೂ ಇಲ್ಲ.
ಅಮಿತಾಭ್ ಬಚ್ಚನ್ ಅವರ ತಂದೆ ಹರಿವಂಶ ರಾಯ್ ಬಚ್ಚನ್ ಈ ಬಂಗಲೆಗೆ ಪ್ರತೀಕ್ಷಾ ಎಂದು ಹೆಸರಿಟ್ಟಿದ್ದರು. ಇದೇ ಮನೆಯಲ್ಲಿ ಅಮಿತಾಭ್ ಮತ್ತು ಜಯಾ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಅವರನ್ನು ಸ್ವಾಗತಿಸಿದರು. ಐಶ್ವರ್ಯಾ ಮತ್ತು ಅಭಿಷೇಕ್ ಅವರ ವಿವಾಹದ ಬಳಿಕ ಪ್ರತೀಕ್ಷಾ ಬಂಗಲೆಯಲ್ಲಿ ಸಂಸಾರ ಸಾಗಿತು. ಈ ಬಂಗಲೆಯ ಇತಿಹಾಸವೂ ತುಂಬಾ ಹಳೆಯದು.
1976 ರಲ್ಲಿ ಬಿಡುಗಡೆಯಾದ ‘ಶೋಲೆ’ ಚಿತ್ರದ ಯಶಸ್ಸಿನ ನಂತರ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಒಂದು ಬಂಗಲೆ ಖರೀದಿಸಿದರು. ಆ ಸಮಯದಲ್ಲಿ, ಇಬ್ಬರೂ ಮದುವೆಯಾಗಿ ಮೂರು ವರ್ಷಗಳಾಗಿತ್ತು. ‘ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ನಲ್ಲಿ ಅಮಿತಾಬ್ ಬಚ್ಚನ್ ಒಮ್ಮೆ, ಬಂಗಲೆ ಬಗ್ಗೆ ಮಾತನಾಡಿದ್ದರು.
‘ಪ್ರತೀಕ್ಷಾ ಎಂದು ಬಂಗೆಲೆಗೆ ಏಕೆ ಹೆಸರಿಡಲಾಗಿದೆ ಎಂದು ಅನೇಕ ಜನರು ನನ್ನನ್ನು ಕೇಳಿದರು. ನಾನು ನನ್ನ ತಂದೆಯನ್ನು ಪ್ರತಿಕ್ಷಾ ಎಂಬ ಹೆಸರೇಕೆ ಎಂದು ಕೇಳಿದೆ? ಇದರ ಬಗ್ಗೆ ನನ್ನ ತಂದೆ ಹೇಳಿದ್ದರು. ‘ನಾವು ಎಲ್ಲವನ್ನೂ ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಆದರೆ ಯಾರಿಗೂ ಕಾಯುವುದಿಲ್ಲ’ ಎಂಬರ್ಥ ಇದೆ ಎಂದು ತಂದೆ ವಿವರಿಸಿದ್ದರು. ಆರಾಧ್ಯ ಬಚ್ಚನ್ ಜನಿಸಿದ ನಂತರವೂ ಇದೇ ಬಂಗಲೆಗೆ ಕರೆತರಲಾಯಿತು. ಆರಾಧ್ಯಳನ್ನು ಆಕೆಯ ದಿವಂಗತ ಮುತ್ತಜ್ಜ ಮತ್ತು ಮುತ್ತಜ್ಜಿಯ ಆಶೀರ್ವಾದ ಪಡೆಯಲು ಪ್ರತೀಕ್ಷಾ ಬಂಗಲೆಗೆ ಕರೆತರಲಾಗಿತ್ತು.
ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿ ಟ್ರೋಲ್ ಆದ ಅಮಿತಾಭ್ ಬಚ್ಚನ್
ಹೆತ್ತವರ ಮರಣದ ನಂತರ, ಅಮಿತಾಭ್ ಬಚ್ಚನ್ ಮತ್ತು ಅವರ ಇಡೀ ಕುಟುಂಬವು ಜಲ್ಸಾಗೆ ಸ್ಥಳಾಂತರಗೊಂಡಿತು. 2007ರಲ್ಲಿ ತಾಯಿಯ ಮರಣದ ನಂತರ, ಬಂಗಲೆ ಮುಚ್ಚಲ್ಪಟ್ಟಿತು ಮತ್ತು ಎರಡು ದಶಕಗಳ ಕಾಲ ಮುಚ್ಚೇ ಇದೆ. ಅವರು ಬಂಗಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ತಮ್ಮ ಹೆತ್ತವರ ನೆನಪುಗಳನ್ನು ಈ ಬಂಗಲೆಯಲ್ಲಿ ಸಂರಕ್ಷಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.