ನಟಿ ಅನನ್ಯಾ ಪಾಂಡೆಗೆ ಈಗ ಸಂಕಷ್ಟ ಶುರುವಾಗಿದೆ. ಡ್ರಗ್ಸ್ ಕೇಸ್ನಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ಅನನ್ಯಾ ಪಾಂಡೆ ಸ್ನೇಹ ಹೊಂದಿದ್ದಾರೆ. ಡ್ರಗ್ಸ್ ಪೂರೈಕೆ ಕುರಿತಂತೆ ಇವರಿಬ್ಬರ ನಡುವೆ ವಾಟ್ಸಾಪ್ ಚಾಟ್ ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲೇ ಈಗ ಅನನ್ಯಾ ಮತ್ತು ದಳಪತಿ ವಿಜಯ್ಗೆ ಸಂಬಂಧಿಸಿದ ಹೊಸ ಗಾಸಿಪ್ ಹರಿದಾಡುತ್ತಿದೆ.
ದಳಪತಿ ವಿಜಯ್ ಅವರು ಸದ್ಯ ‘ಬೀಸ್ಟ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಬಳಿಕ ಅವರ 66ನೇ ಸಿನಿಮಾ ಸೆಟ್ಟೇರಲಿದೆ. ಆ ಚಿತ್ರಕ್ಕೆ ಅನನ್ಯಾ ಪಾಂಡೆ ನಾಯಕಿ ಎಂಬ ಮಾತು ಕೇಳಿಬಂದಿತ್ತು. ತಮಿಳಿನ ಜೊತೆಗೆ ಹಿಂದಿಗೆ ಡಬ್ ಆಗಿ ತೆರೆಕಾಣಲಿರುವ ಆ ಚಿತ್ರಕ್ಕೆ ಬಾಲಿವುಡ್ ಬೆಡಗಿಯೇ ನಾಯಕಿಯಾದರೆ ಒಳಿತು ಎಂದು ಚಿತ್ರತಂಡ ತೀರ್ಮಾನಿಸಿದ್ದು, ಅನನ್ಯಾ ಪಾಂಡೆಗೆ ಆಫರ್ ನೀಡಲಾಗಿತ್ತು ಎಂಬ ಸುದ್ದಿ ಹರಡಿತ್ತು. ಆದರೆ ಈಗ ಡ್ರಗ್ಸ್ ಕೇಸ್ನಲ್ಲಿ ಅನನ್ಯಾ ಹೆಸರು ಕೇಳಿಬಂದಿರುವುದರಿಂದ ಅವರನ್ನು ಈ ಸಿನಿಮಾದಿಂದ ಕೈ ಬಿಡಲಾಗಿದೆ ಎಂಬ ಗಾಸಿಪ್ ಹಬ್ಬಿದೆ.
ಈ ಕುರಿತಾಗಿ ಅನನ್ಯಾ ಪಾಂಡೆ ಅವರ ಆಪ್ತರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅನನ್ಯಾಗೆ ವಿಜಯ್ ಅವರ 66ನೇ ಸಿನಿಮಾದ ಆಫರ್ ಬಂದಿರಲಿಲ್ಲ. ಆ ಚಿತ್ರಕ್ಕೆ ಸಂಬಂಧಿಸಿದಂತೆ ಅವರನ್ನು ಯಾರೂ ಭೇಟಿ ಮಾಡಿಲ್ಲ. ಹೀಗಿರುವಾಗ ಅವರನ್ನು ಕೈ ಬಿಡುವುದು ಎಲ್ಲಿಂದ ಬಂತು?’ ಎಂದು ಅನನ್ಯಾ ಆಪ್ತರು ಹೇಳಿದ್ದಾರೆ. ಎನ್ಸಿಬಿ ಅಧಿಕಾರಿಗಳು ಅನನ್ಯಾರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಒಂದು ವೇಳೆ ಅವರ ವಿರುದ್ಧ ಬಲವಾದ ಸಾಕ್ಷಿಗಳು ಸಿಕ್ಕರೆ ಬಂಧಿಸುವ ಸಾಧ್ಯತೆ ಕೂಡ ಇದೆ. ಪ್ರಸ್ತುತ ವಿಜಯ್ ದೇವರಕೊಂಡ ನಾಯಕತ್ವದ ‘ಲೈಗರ್’ ಚಿತ್ರಕ್ಕೆ ಅನನ್ಯಾ ಹೀರೋಯಿನ್ ಆಗಿದ್ದಾರೆ. ಆ ಚಿತ್ರದ ಶೂಟಿಂಗ್ಗೂ ತೊಂದರೆ ಆಗಿದೆ.
ಇದನ್ನೂ ಓದಿ:
Ananya Panday: ‘ಶಾರುಖ್ ಖಾನ್ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್ ಸುಳಿಯಲ್ಲಿ ನಟಿ