‘ಅನಿಮಲ್’ ಸಿನಿಮಾದಿಂದ (Animal Movie) ನಿರ್ದೇಶಕ ಸಂದೀಪ್ ರೆಡ್ಡಿ ವಂಗ, ಕಲಾವಿದರಾದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮೊದಲಾದವರು ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಭಾನುವಾರ (ಡಿಸೆಂಬರ್ 17) ಭರ್ಜರಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ. ಗಳಿಕೆ ವಿಚಾರದಲ್ಲಿ ಈ ಚಿತ್ರ ಮತ್ತಷ್ಟು ದಾಖಲೆ ಬರೆಯುವ ಸಾಧ್ಯತೆ ಇದೆ. ಈ ವರ್ಷ 500 ಕೋಟಿ ಕ್ಲಬ್ ಸೇರಿದ ನಾಲ್ಕನೇ ಹಿಂದಿ ಸಿನಿಮಾ ಎನ್ನುವ ಖ್ಯಾತಿ ‘ಅನಿಮಲ್’ ಚಿತ್ರಕ್ಕೆ ಸಿಕ್ಕಿದೆ.
ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಸಿನಿಮಾ ಅಬ್ಬರದ ಗಳಿಕೆ ಮಾಡಿತು. ವಿಮರ್ಶಕರಿಂದ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಸಿಕ್ಕರೂ ಸಿನಿಮಾ ಗಳಿಕೆ ಮೇಲೆ ಯಾವುದೇ ಪ್ರಭಾವ ಉಂಟಾಗಿಲ್ಲ. ಈ ಚಿತ್ರ ದಿನ ಕಳೆದಂತೆ ಹೆಚ್ಚಿನ ಗಳಿಕೆ ಮಾಡುತ್ತಲೇ ಬಂತು. ಈ ಸಿನಿಮಾ ಭಾನುವಾರ 12 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಭಾರತದಲ್ಲಿ 500 ಕೋಟಿ ರೂಪಾಯಿ ಆಗಿದೆ.
ವಿಶ್ವ ಬಾಕ್ಸ್ ಆಫೀಸ್ನಲ್ಲೂ ‘ಅನಿಮಲ್’ ಸಿನಿಮಾ ಅಬ್ಬರದ ಗಳಿಕೆ ಮಾಡುತ್ತಿದೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 800 ಕೋಟಿ ರೂಪಾಯಿ ಗಳಿಸಿದೆ. ಅಂದರೆ, ವಿದೇಶದಲ್ಲಿ ಈ ಚಿತ್ರ 17 ದಿನಕ್ಕೆ 300 ಕೋಟಿ ರೂಪಾಯಿ ಗಳಿಸಿದೆ. ಅಮೆರಿಕ ಮೊದಲಾದ ಕಡೆಗಳಲ್ಲಿ ಈ ಚಿತ್ರ ಉತ್ತಮ ಗಳಿಕೆ ಮಾಡುತ್ತಿದೆ. ಇದು ರಣಬೀರ್ ಹಾಗೂ ರಶ್ಮಿಕಾ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಇದನ್ನೂ ಓದಿ: ‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್
‘ಅನಿಮಲ್’ ಸಿನಿಮಾದಿಂದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಶಕ್ತಿ ಕಪೂರ್ ಮೊದಲಾದವರ ಖ್ಯಾತಿ ಹೆಚ್ಚಿದೆ. ನಟಿ ತೃಪ್ತಿ ದಿಮ್ರಿ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಬೋಲ್ಡ್ ಪಾತ್ರದ ಮೂಲಕ ಅವರು ಗೆದ್ದು ಬೀಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:25 am, Mon, 18 December 23