ಶಾರುಖ್​ ಖಾನ್​ ಬಗ್ಗೆ ‘ಅನಿಮಲ್​’ ನಿರ್ದೇಶಕನಿಗೆ ಇರುವ ಅಪಾರ ಗೌರವಕ್ಕೆ ಈ ಮಾತು ಸಾಕ್ಷಿ

ಶಾರುಖ್​ ಖಾನ್​ ಜೊತೆ ಸಿನಿಮಾ ಮಾಡಬೇಕು ಎಂಬುದು ಅನೇಕ ನಿರ್ದೇಶಕರ ಆಸೆ ಆಗಿರುತ್ತದೆ. ಸಂದೀಪ್​ ರೆಡ್ಡಿ ವಂಗ ಕೂಡ ಅಂತಹ ಆಸೆ ಇಟ್ಟುಕೊಂಡಿದ್ದಾರೆ. ‘ಕಬೀರ್​ ಸಿಂಗ್​’ ಮತ್ತು ‘ಅನಿಮಲ್​’ ಸಿನಿಮಾದಿಂದ ಬಾಲಿವುಡ್​ನಲ್ಲಿ ಸಂದೀಪ್​ ಅವರು ಬಹುಬೇಡಿಕೆಯ ಡೈರೆಕ್ಟರ್ ಆಗಿ ಹೆಸರು ಮಾಡಿದ್ದಾರೆ. ಟೀಕೆಗಳ ನಡುವೆಯೂ ಅವರು ಸಖತ್​ ಫೇಮಸ್​ ಆಗಿದ್ದಾರೆ.

ಶಾರುಖ್​ ಖಾನ್​ ಬಗ್ಗೆ ‘ಅನಿಮಲ್​’ ನಿರ್ದೇಶಕನಿಗೆ ಇರುವ ಅಪಾರ ಗೌರವಕ್ಕೆ ಈ ಮಾತು ಸಾಕ್ಷಿ
ಸಂದೀಪ್​ ರೆಡ್ಡಿ ವಂಗ, ಶಾರುಖ್​ ಖಾನ್​

Updated on: Feb 06, 2024 | 2:57 PM

ನಟ ಶಾರುಖ್​ ಖಾನ್​ (Shah Rukh Khan) ಅವರನ್ನು ಕಂಡರೆ ಕೋಟ್ಯಂತರ ಮಂದಿಗೆ ಇಷ್ಟ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಶಾರುಖ್​ ಖಾನ್​ಗೆ ಫ್ಯಾನ್ಸ್​ ಆಗಿದ್ದಾರೆ. ಅಂಥ ಅಪ್ಪಟ ಅಭಿಮಾನಿಗಳಲ್ಲಿ ‘ಅನಿಮಲ್​’ ಸಿನಿಮಾದ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ (Sandeep Reddy Vanga) ಕೂಡ ಇದ್ದಾರೆ. ಸದ್ಯಕ್ಕೆ ಸಂದೀಪ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಅವರ ಜೊತೆ ಸಿನಿಮಾ ಮಾಡಲು ಅನೇಕ ಸೆಲೆಬ್ರಿಟಿಗಳು ಕಾದಿದ್ದಾರೆ. ಅದೇ ರೀತಿ, ಸಂದೀಪ್​ ಅವರಿಗೂ ಒಂದಷ್ಟು ಸೆಲೆಬ್ರಿಟಿಗಳ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಆಗಿದೆ. ಶಾರುಖ್​ ಖಾನ್​ (SRK) ಬಗ್ಗೆ ತಮಗೆ ಇರುವ ಅಭಿಮಾನ ಎಂಥದ್ದು ಎಂಬುದನ್ನು ಅವರು ಈಗ ವಿವರಿಸಿದ್ದಾರೆ.

ಶಾರುಖ್​ ಖಾನ್​ ಅವರನ್ನು ಸಂದೀಪ್​ ರೆಡ್ಡಿ ವಂಗ ಮೊದಲು ಭೇಟಿ ಮಾಡಿದ್ದು 2023ರಲ್ಲಿ. ಗಣೇಶ ಹಬ್ಬದ ಸಂದರ್ಭದಲ್ಲಿ ಶಾರುಖ್​ ಖಾನ್​ ಅವರನ್ನು ಭೇಟಿಯಾಗುವ ಅವಕಾಶ ಸಂದೀಪ್​ಗೆ ಸಿಕ್ಕಿತ್ತು. ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ. ‘ನಿಮ್ಮನ್ನು ನೋಡಿದ್ದಕ್ಕೆ ಖುಷಿಯಾಗುತ್ತಿದೆ ಸರ್​. ಇಷ್ಟು ದಿನ ಪರದೆಯಲ್ಲಿ ನೋಡಿದ್ದೆ. ಈಗ ಇದೇ ಮೊದಲ ಬಾರಿಗೆ ನೇರವಾಗಿ ನೋಡುತ್ತಿದ್ದೇನೆ’ ಎಂದು ಶಾರುಖ್​ ಎದುರು ಸಂದೀಪ್​ ರೆಡ್ಡಿ ವಂಗ ಖುಷಿ ತೋಡಿಕೊಂಡಿದ್ದರು.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾ ನೋಡಿ 40 ನಿಮಿಷ ಮಾತಾಡಿದ್ದ ರಣವೀರ್​ ಸಿಂಗ್​; ನಿರ್ದೇಶಕರಿಗೆ ಅಚ್ಚರಿ

‘ಅವಕಾಶ ಸಿಕ್ಕರೆ ಖಂಡಿತವಾಗಿಯೂ ಶಾರುಖ್​ ಖಾನ್​ ಸರ್​ ಜೊತೆ ಕೆಲಸ ಮಾಡುತ್ತೇನೆ. ಪ್ರತಿ ಹೀರೋಗೋ ಕೆಲವೊಂದು ಐಡಿಯಾ ಇರುತ್ತದೆ. ಹಿಂದಿ ಚಿತ್ರರಂಗದಲ್ಲಿ ಶಾರುಖ್​ ಖಾನ್​, ರಣವೀರ್​ ಸಿಂಗ್​ ಜೊತೆ ಸಿನಿಮಾ ಮಾಡಲು ಬಯಸುತ್ತೇನೆ’ ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗ. ‘ಅನಿಮಲ್​​’ ಸಿನಿಮಾ ಬಿಡುಗಡೆ ಆಗುವುದಕ್ಕೂ ಮೊದಲು ಆ ಚಿತ್ರದ ಟೀಸರ್​ ಅನ್ನು ಸಂದೀಪ್​ ಅವರು ಶಾರುಖ್​ ಖಾನ್​ಗೆ ತೋರಿಸಿದ್ದರು.

ಇದನ್ನೂ ಓದಿ: ‘ಅನಿಮಲ್​’ ನಿರ್ದೇಶಕನಿಂದ ಬಂದ ಆಫರ್​ ತಿರಸ್ಕರಿಸಿದ ಕಂಗನಾ ರಣಾವತ್​

ಕಳೆದ ವರ್ಷ ಶಾರುಖ್​ ಖಾನ್​ ನಟನೆಯ 3 ಸಿನಿಮಾಗಳು ಬಿಡುಗಡೆಯಾಗಿ ಗಮನ ಸೆಳೆದವು. ‘ಪಠಾಣ್​’, ‘ಜವಾನ್​’, ‘ಡಂಕಿ’ ಸಿನಿಮಾಗಳ ಮೂಲಕ ಅವರು ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದರು. ಅದೇ ರೀತಿ, ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಚಿತ್ರದ ಮೂಲಕ ಭರ್ಜರಿ ಗೆಲುವು ಕಂಡರು. ಒಂದು ವೇಳೆ ಈ ನಟ-ನಿರ್ದೇಶಕನ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಿದರೆ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ಶಾರುಖ್​ ಖಾನ್​ ಅವರು ಹೊಸ ಸಿನಿಮಾ ಘೋಷಿಸುವುದು ಬಾಕಿ ಇದೆ. ಸಂದೀಪ್​ ಅವರು ಈಗಾಗಲೇ ಪ್ರಭಾಸ್​, ಮಹೇಶ್​ ಬಾಬು, ಅಲ್ಲು ಅರ್ಜುನ್​ ಜೊತೆ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us