ಭರ್ಜರಿ ಕಲೆಕ್ಷನ್ ಮಾಡಿದ ‘ಅನಿಮಲ್’, ಶಾರುಖ್ ದಾಖಲೆ ಪುಡಿ-ಪುಡಿ

Animal: ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಶಾರುಖ್ ಖಾನ್ ನಟನೆಯ ಸಿನಿಮಾದ ದಾಖಲೆಯನ್ನು ಪುಡಿಗಟ್ಟಿದೆ.

ಭರ್ಜರಿ ಕಲೆಕ್ಷನ್ ಮಾಡಿದ ‘ಅನಿಮಲ್’, ಶಾರುಖ್ ದಾಖಲೆ ಪುಡಿ-ಪುಡಿ
Follow us
ಮಂಜುನಾಥ ಸಿ.
|

Updated on: Dec 02, 2023 | 3:00 PM

ರಣ್​ಬೀರ್ ಕಪೂರ್ (Ranbir Kapoor) ನಟನೆಯ ಬಹುನಿರೀಕ್ಷಿತ ‘ಅನಿಮಲ್’ (Animal) ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಖತ್ ಮಾಸ್ ಅವತಾರದ ಈ ಸಿನಿಮಾ ಭಾರಿ ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿದ್ದರೂ ಸಹ ‘ಅನಿಮಲ್’ ದೊಡ್ಡ ಹಿಟ್ ಆಗಿದೆ. ಮೊದಲ ದಿನ ವಿಶ್ವದಾದ್ಯಂತ ಭಾರಿ ಕಲೆಕ್ಷನ್ ಮಾಡಿದೆ. ಈ ವರ್ಷದ ಬ್ಲಾಕ್ ಬಸ್ಟರ್ ಹೀರೋ ಆದ ಶಾರುಖ್ ಖಾನ್​ರ ಸಿನಿಮಾದ ದಾಖಲೆಯನ್ನೇ ಪುಡಿಗಟ್ಟಿದೆ.

ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಿರುವ ‘ಅನಿಮಲ್’ ಸಿನಿಮಾ ಮೊದಲ ದಿನ ಭಾರತದಲ್ಲಿ 61 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆದರೆ ವಿಶ್ವದಾದ್ಯಂತ ಈ ಮೊತ್ತದ ಬಹುತೇಕ ದುಪ್ಪಟ್ಟು ಹಣವನ್ನು ಗಳಿಕೆ ಮಾಡಿದೆ. ವಿಶ್ವದಾದ್ಯಂತ ‘ಅನಿಮಲ್’ ಸಿನಿಮಾ ಮೊದಲ ದಿನವೇ 116 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ವರ್ಲ್ಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಚಿತ್ರತಂಡ ಅಧಿಕೃತವಾಗಿ ಹಂಚಿಕೊಂಡಿದೆ.

ರಜೆ ಸಮಯದಲ್ಲದೆ ಸಾಧಾರಣ ವಾರದಲ್ಲಿ ಬಿಡುಗಡೆ ಆಗಿಯೂ ಮೊದಲ ದಿನ ಇಷ್ಟು ದೊಡ್ಡ ಮೊತ್ತವನ್ನು ಇನ್ಯಾವುದೇ ಭಾರತೀಯ ಸಿನಿಮಾ ಈ ವರೆಗೆ ಕಲೆ ಹಾಕಿಲ್ಲ ಎಂದು ಸಹ ಚಿತ್ರತಂಡ ಹೇಳಿಕೊಂಡಿದೆ. ಮೊದಲ ದಿನ ವಿಶ್ವದಾದ್ಯಂತ 116 ಕೋಟಿ ರೂಪಾಯಿ ಗಳಿಸುವ ಮೂಲಕ ಶಾರುಖ್ ಖಾನ್​ರ ‘ಪಠಾಣ್’ ಸಿನಿಮಾದ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮುರಿದಿದೆ.

ಇದನ್ನೂ ಓದಿ:ತಮ್ಮ ಮೆಚ್ಚಿನ ತಮಿಳು ಸಿನಿಮಾಗಳ ಹೆಸರಿಸಿದ ರಣ್​ಬೀರ್ ಕಪೂರ್

‘ಪಠಾಣ್’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 105 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಆ ದಾಖಲೆಯನ್ನು ಇದೀಗ ‘ಅನಿಮಲ್’ ಸಿನಿಮಾ ಪುಡಿಗಟ್ಟಿದೆ. ಆದರೆ ಇದೇ ವರ್ಷ ಬಿಡುಗಡೆ ಆದ ಶಾರುಖ್ ಖಾನ್​ರ ‘ಜವಾನ್’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 129 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದು ಈ ವರ್ಷದ ದಾಖಲೆಯ ಕಲೆಕ್ಷನ್ ಆಗಿದೆ.

‘ಅನಿಮಲ್’ ಸಿನಿಮಾದ ಕಲೆಕ್ಷನ್ ಕುರಿತಂತೆ ಚಿತ್ರತಂಡ ಖುಷಿಯಾಗಿದೆ. ರಣ್​ಬೀರ್ ಕಪೂರ್ ವೃತ್ತಿ ಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದೇ ಆಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ರಣ್​ಬೀರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ 75 ಕೋಟಿ ಗಳಿಸಿತ್ತು. ತಮ್ಮದೇ ವೈಯಕ್ತಿಕ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮೂಲಕ ರಣ್​ಬೀರ್ ಕಪೂರ್ ಮುರಿದಿದ್ದಾರೆ.

‘ಅನಿಮಲ್’ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಸಿನಿಮಾ ಅದ್ಭುತವಾಗಿದೆ ಎಂದರೆ ಇನ್ನು ಕೆಲವರು ಸಿನಿಮಾದಲ್ಲಿರುವ ಹಿಂಸೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ಸಿನಿಮಾದ ಅವಧಿಯ ಬಗ್ಗೆ ತಕರಾರು ಎತ್ತಿದ್ದಾರೆ. ಆದರೆ ಸಿನಿಮಾ ನೋಡಿದವರೆಲ್ಲ ರಣ್​ಬೀರ್ ಕಪೂರ್ ಅವರ ಅದ್ಭುತ ನಟನೆಗೆ ಫಿದಾ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?