ನಾನು ಇರ್ಫಾನ್ ಪ್ರೀತಿಸುತ್ತಿದ್ದೆವು, ಗೌತಮ್ ಗಂಭೀರ್ ನನ್ನ ಪ್ರೀತಿಸುತ್ತಿದ್ದ: ನಟಿ ಪಾಯಲ್
Payal Ghosh: ಕನ್ನಡದಲ್ಲಿಯೂ ನಟಿಸಿರುವ ಬಾಲಿವುಡ್ ನಟಿ ಪಾಯಲ್ ಘೋಷ್, ತಾವು ಹಾಗೂ ಇರ್ಫಾಣ್ ಪಠಾಣ್ ಐದು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಗೌತಮ್ ಗಂಭೀರ್ ನನ್ನನ್ನು ಪ್ರೀತಿಸುತ್ತಿದ್ದ ಎಂದು ಸಹ ಹೇಳಿದ್ದಾರೆ.
ಇತ್ತೀಚೆಗಷ್ಟೆ, ನಾನು ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು (Mohammad Shami) ಮದುವೆಯಾಗಲು ತಯಾರಿದ್ದೇನೆ ಎಂದು ಹೇಳಿಕೆ ನೀಡಿದ್ದ ನಟಿ ಪಾಯಲ್ ಘೋಷ್ (Payal Ghosh), ಇದೀಗ ಇರ್ಫಾನ್ ಪಠಾಣ್, ಗೌತಮ್ ಗಂಭೀರ್ ಅವರುಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಹಾಗೂ ಇರ್ಫಾನ್ ಪಠಾಣ್ ರ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಾಯಲ್ ಘೋಷ್, ನಾನು ಹಾಗೂ ಇರ್ಫಾನ್ ಪಠಾಣ್ ಐದು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದೆವು, ನಾನು ಇರ್ಫಾನ್ ಅನ್ನು ಪ್ರೀತಿಸುತ್ತಿದ್ದ ಸಮಯದಲ್ಲಿ ಗೌತಮ್ ಗಂಭೀರ್ ನನ್ನನ್ನು ಪ್ರಿತಿಸುತ್ತಿದ್ದ, ಪದೇ ಪದೇ ನನಗೆ ಫೋನ್ ಕರೆಗಳನ್ನು ಮಾಡುತ್ತಿದ್ದ ಎಂದಿದ್ದಾರೆ.
‘‘2011 ರಿಂದ ಐದು ವರ್ಷಗಳ ಕಾಲ ನಾನೂ ಹಾಗೂ ಇರ್ಫಾನ್ ಪಠಾಣ್ ಪರಸ್ಪರ ಪ್ರೀತಿಸುತ್ತಿದ್ದೆವು. ಆ ಸಮಯದಲ್ಲಿ ಗೌತಮ್ ಗಂಭೀರ್ ಹಾಗೂ ಅಕ್ಷಯ್ ಕುಮಾರ್ ಸಹ ನನ್ನ ಬೆನ್ನ ಹಿಂದೆ ಬಿದ್ದಿದ್ದರು. ಆದರೆ ನಾನು ಇರ್ಫಾನ್ ಪಠಾಣ್ ಮೇಲೆ ಬಹಳ ಪ್ರೀತಿಯಿತ್ತು, ಅವರನ್ನು ಬಿಟ್ಟು ಬೇರೆ ಯಾರನ್ನೂ ನಾನು ನೋಡಲಿಲ್ಲ. ಗೌತಮ್ ಗಂಭೀರ್ ಪ್ರತಿಬಾರಿ ನನಗೆ ಫೋನ್ ಮಾಡಿದಾಗಲೂ ಆ ಮಿಸ್ಕಾಲ್ಗಳನ್ನೆಲ್ಲ ನಾನು ಇರ್ಫಾನ್ ಪಠಾಣ್ಗೆ ತೋರಿಸುತ್ತಿದ್ದೆ. ಇರ್ಫಾನ್ಗೂ ಇದು ಬೇಸರ ತಂದಿತ್ತು. ಈ ಬಗ್ಗೆ ಅವರ ಸಹೋದರ ಯೂಸಫ್ ಪಠಾಣ್ ಬಳಿಯೂ ಅವರು ಮಾತನಾಡಿದ್ದರು’’ ಎಂದಿದ್ದಾರೆ ಪಾಯಲ್ ಘೋಷ್.
‘‘ಈ ವಿಷಯ ಹಾರ್ದಿಕ್ ಪಾಂಡ್ಯಾ ಹಾಗೂ ಕೃನಾಲ್ ಪಾಂಡ್ಯಾ ಅವರುಗಳಿಗೆ ಸಹ ಗೊತ್ತು. ಅವರು ಪುಣೆಯಲ್ಲಿ ರಣಜಿ ಪಂದ್ಯ ಆಡುವಾಗ ನಾನು ಅಲ್ಲಿಗೆ ಹೋಗಿದ್ದೆ. ಆಗ ನನ್ನ ಎದುರೇ ಇರ್ಫಾನ್ ಪಠಾಣ್ ಈ ವಿಷಯವನ್ನು ಪಾಂಡ್ಯಾ ಸಹೋದರರಿಗೆ ಹೇಳಿದ್ದರು. ಆದರೆ ನಾನೂ ಹಾಗೂ ಇರ್ಫಾನ್ ಪಠಾಣ್ 2016ರ ವಿಶ್ವಕಪ್ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡೆವು. ಬ್ರೇಕ್ಅಪ್ ಇಂದಾಗಿ ನನ್ನ ಆರೋಗ್ಯವೇ ಹದಗೆಟ್ಟಿತು. ನಾನು ಖಿನ್ನತೆಗೆ ಗುರಿಯಾದೆ, ಕೆಲವು ವರ್ಷಗಳ ಕಾಲ ನನಗೆ ಕೆಲಸ ಮಾಡಲು ಸಹ ಆಗಲಿಲ್ಲ’’ ಎಂದರು.
‘‘ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನನ್ನ ಹಿಂದೆ ಬಿದ್ದಿದ್ದರು. ಆದರೆ ಎಂದೂ ಸಹ ಅವರು ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಅವರೊಬ್ಬ ಜಂಟಲ್ಮ್ಯಾನ್, ನಾನು ಅವರನ್ನು ಬಹಳ ಗೌರವಿಸುತ್ತೀನಿ’’ ಎಂದಿದ್ದಾರೆ ಪಾಯಲ್ ಘೋಷ್. ನಟಿ ಪಾಯಲ್ ಘೋಷ್ ಇಂಥಹಾ ವಿವಾದಾತ್ಮಕ ಹೇಳಿಕೆಗಳನ್ನು ಆಗಾಗ್ಗೆ ನೀಡುತ್ತಲೇ ಇರುತ್ತಾರೆ. ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಹಿಂಸಾಚಾರದ ದೂರು ದಾಖಲಿಸಿದ್ದರು, ಆದರೆ ಅನುರಾಗ್ ಅದನ್ನೆಲ್ಲ ತಳ್ಳಿ ಹಾಕಿದ್ದಲ್ಲದೆ ಸೂಕ್ತ ಸಾಕ್ಷ್ಯಗಳನ್ನು ಪೊಲೀಸರಿಗೆ ಒದಗಿಸಿದ್ದರು. ನಟಿ ರೀಚಾ ಚಡ್ಡಾ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು, ರೀಚಾ ಚಡ್ಡಾ ಮಾನನಷ್ಟ ಮೊಕದ್ದಮೆ ದಾಖಲಿಸಿದಾಗ ಬೇಷರತ್ ಕ್ಷಮೆ ಯಾಚಿಸಿದರು. ಪಾಯಲ್ ಘೋಷ್ ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ವರ್ಷಧಾರೆ’ ಹೆಸರಿನ ಸಿನಿಮಾದಲ್ಲಿ ಪಾಯಲ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ