ಅನುಷ್ಕಾ ಶರ್ಮಾ (Anushka Sharma) ಅವರು ಬಾಲಿವುಡ್ನ ಸ್ಟಾರ್ ನಟಿ. ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಅವರ ಗಮನ ಕುಟುಂಬದ ಮೇಲಿದೆ. ಅವರಿಗೆ ಇಂದು (ಮೇ 1) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರು 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅನುಷ್ಕಾ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಆಸ್ತಿ, ಉದ್ಯಮ, ಮುಂಬರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ಅನುಷ್ಕಾ ಶರ್ಮಾ ಅವರು ಜನಿಸಿದ್ದು 1988ರ ಮೇ 1ರಂದು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅವರ ಜನನ ಆಯಿತು. ಅವರ ತಂದೆ ಭಾರತೀಯ ಸೇನೆಯಲ್ಲಿದ್ದರು. 2008ರಲ್ಲಿ ರಿಲೀಸ್ ಆದ ಆದಿತ್ಯ ಚೋಪ್ರಾ ನಿರ್ದೇಶನದ ‘ರಬ್ ನೇ ಬನಾ ದಿ ಜೋಡಿ’ ಚಿತ್ರದಲ್ಲಿ ಶಾರುಖ್ ಎದುರು ನಟಿಸಿ ಅನುಷ್ಕಾ ಫೇಮಸ್ ಆದರು. ಆ ಬಳಿಕ ಅವರಿಗೆ ಹಲವು ಆಫರ್ಗಳು ಬಂದವು. 2015ರಲ್ಲಿ ರಿಲೀಸ್ ಆದ ‘ಎನ್ಎಚ್ 10’ ಮೂಲಕ ಅವರು ನಿರ್ಮಾಪಕಿ ಆದರು. ‘ಪರಿ’, ‘ಬುಲ್ ಬುಲ್’ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದರು. ಅವರ ನಿರ್ಮಾಣದ ‘ಪಾತಾಳ್ ಲೋಕ್’ ಸೀರಿಸ್ ಸಾಕಷ್ಟು ಗಮನ ಸೆಳೆಯಿತು. ಈಗ ಅವರ ಸಹೋದರ ಕರ್ಣೆಶ್ ಅವರು ಈ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. 2018ರ ‘ಜೀರೋ’ ಬಳಿಕ ಅನುಷ್ಕಾ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.
ಅನುಷ್ಕಾ ಅವರು Nush ಹೆಸರಿನ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. 2017ರಲ್ಲಿ ಅವರು ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಮದುವೆ ಆದರು. ದೂರದ ಇಟಲಿಯಲ್ಲಿ ಈ ಮದುವೆ ನಡೆಯಿತು. ಈಗ ದಂಪತಿಗೆ ವಮಿಕಾ ಹಾಗೂ ಅಕಾಯ್ ಹೆಸರಿನ ಮಕ್ಕಳಿದ್ದಾರೆ. ವಿರಾಟ್ ಕೊಹ್ಲಿಗೆ ಹೋಲಿಸಿದರೆ ಅನುಷ್ಕಾ ಅವರ ಆಸ್ತಿ ತುಂಬಾನೇ ಕಡಿಮೆ.
2019ರಲ್ಲಿ ಅನುಷ್ಕಾ ಆಸ್ತಿ 306 ಕೋಟಿ ರೂಪಾಯಿ ಎನ್ನಲಾಗಿದೆ. ಇತ್ತೀಚೆಗೆ ಅವರು ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಅವರಿಗೆ ಉದ್ಯಮದಿಂದ ಮಾತ್ರ ಹಣ ಬರುತ್ತಿದೆ. ವಿರಾಟ್ ಕೊಹ್ಲಿ ಆಸ್ತಿ ಮೌಲ್ಯ 1053 ಕೋಟಿ ರೂಪಾಯಿ ಇದೆ. ಇದಕ್ಕೆ ಹೋಲಿಸಿದರೆ ಅನುಷ್ಕಾ ಆಸ್ತಿ ತುಂಬಾನೇ ಕಡಿಮೆ.
ಅನುಷ್ಕಾ ಶರ್ಮಾ ಅವರು ಶ್ಯಾಮ್ ಸ್ಟೀಲ್ ಹಾಗೂ ಮಿಂತ್ರಾಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಅನುಷ್ಕಾ ಪ್ಯೂಮಾ ಬ್ರ್ಯಾಂಡ್ ಕೂಡ ಪ್ರಚಾರ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರಿಗೆ ಪ್ರಾಣಿಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಅನುಷ್ಕಾ ಶರ್ಮಾ ಅವರು ಮುಂಬೈನ ವೋರ್ಲಿ ಅಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. ಇದರ ಬೆಲೆ 9 ಕೋಟಿ ರೂಪಾಯಿ. ದೆಹಲಿಯಲ್ಲೂ ಅವರ ಮನೆ ಹೊಂದಿದ್ದಾರೆ. ಅಲಿಭಾಗ್ನಲ್ಲಿ ವಿರಾಟ್ ಜೊತೆ ಸೇರಿ 19 ಕೋಟಿ ರೂಪಾಯಿಯ ಜಾಗ ಹೊಂದಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಬೆಂಬಲಕ್ಕೆ ಬರಲಿದ್ದಾರೆ ಅನುಷ್ಕಾ ಶರ್ಮಾ; ಇಲ್ಲಿದೆ ಗುಡ್ ನ್ಯೂಸ್
ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಅವರು ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಝುಲನ್ ಗೋಸ್ವಾಮಿ ಬಯೋಪಿಕ್. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದಾದ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.